ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾರ್ಗದರ್ಶನದಲ್ಲಿ ಆಯೋಜನೆ
ಪುಟ್ಟಣ್ಣಯ್ಯ ಫೌಂಡೇಶನ್, ರೋಟರಿ ಕ್ಲಬ್ ಆಫ್ ಬೆಂಗಳೂರು ಜಂಕ್ಷನ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಸಹಯೋಗ
ಪಾಂಡವಪುರ: ಸಮಾಜದ ಪ್ರತಿಯೊಬ್ಬ ನಾಗರಿಕನಿಗೂ ಗುಣಮಟ್ಟದ ಆರೋಗ್ಯ ಸೇವೆ ತಲುಪಬೇಕು ಎಂಬ ಧ್ಯೇಯದೊಂದಿಗೆ, ಮೇಲುಕೋಟೆ ಶಾಸಕರಾದ ಶ್ರೀ ದರ್ಶನ್ ಪುಟ್ಟಣ್ಣಯ್ಯ ಅವರ ಮಾರ್ಗದರ್ಶನದಲ್ಲಿ ತಾಲೂಕಿನ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಪುಟ್ಟಣ್ಣಯ್ಯ ಫೌಂಡೇಶನ್, ರೋಟರಿ ಕ್ಲಬ್ ಆಫ್ ಬೆಂಗಳೂರು ಜಂಕ್ಷನ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಸಹತಯೋಗದಲ್ಲಿ ಈ ಶಿಬಿರ ನಡೆಯಲಿದ್ದು, ಬೆಂಗಳೂರಿನ ಖ್ಯಾತ ಆಸ್ಪತ್ರೆಗಳ ನುರಿತ ತಜ್ಞ ವೈದ್ಯರು ಭಾಗವಹಿಸಿ ತಪಾಸಣೆ ನಡೆಸಲಿದ್ದಾರೆ.
ಶಿಬಿರದ ವಿವರ:
ದಿನಾಂಕ: 8 ಅಕ್ಟೋಬರ್ 2026 ಗುರುವಾರ
ಸಮಯ: ಬೆಳಿಗ್ಗೆ 9:30 ರಿಂದ ಸಂಜೆ 5:30 ರವರೆಗೆ
ಸ್ಥಳ: TAPCMS ಕಲ್ಯಾಣ ಮಂಟಪ, ಪಾಂಡವಪುರ
ಶಿಬಿರದಲ್ಲಿ ದೊರೆಯುವ ಉಚಿತ ವೈದ್ಯಕೀಯ ಸೇವೆಗಳು:
• ದಂತ ತಪಾಸಣೆ
• ಕಣ್ಣಿನ ತಪಾಸಣೆ
• ಸಾಮಾನ್ಯ ಕ್ಯಾನ್ಸರ್ ತಪಾಸಣೆ
• ಬಾಯಿಯ ಕ್ಯಾನ್ಸರ್ ತಪಾಸಣೆ
• ಪಾದ ತಪಾಸಣೆ (Podiatry)
• ಮೂಳೆರೋಗ ತಪಾಸಣೆ
ಗ್ರಾಮೀಣ ಭಾಗದ ಜನರಿಗೆ ಬೆಂಗಳೂರಿನ ತಜ್ಞ ವೈದ್ಯರಿಂದ ಉಚಿತವಾಗಿ ಸೂಕ್ತ ಚಿಕಿತ್ಸಾ ಸಲಹೆ ಹಾಗೂ ತಪಾಸಣೆ ಒದಗಿಸುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಪಾಂಡವಪುರ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಸಾರ್ವಜನಿಕರು ಮತ್ತು ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ಸಂಘಟಕರು ಮನವಿ ಮಾಡಿದ್ದಾರೆ.
![pandavapura-free-health-camp-darshan-puttannaiah-october-8]](https://saakshatv.com/wp-content/uploads/2026/10/darsan.png)




![technologies-aerospace-defense-manufacturing-unit-devanahalli]](https://saakshatv.com/wp-content/uploads/2026/10/areo-350x247.png)

