ADVERTISEMENT
Tuesday, October 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ʻಆ್ಯಕ್ಷನ್ ಪ್ರಿನ್ಸ್ʼ ಧ್ರುವ ಸರ್ಜಾ ಹೊಸ ಅವತಾರ; ಪೀಪಲ್ ಮೀಡಿಯಾ ಫ್ಯಾಕ್ಟರಿ ಜೊತೆ ಲವ್‌ & ಫ್ಯಾಮಿಲಿ ಎಮೋಷನ್ಸ್‌ ಇರುವ ‘ಕೆಮಿಸ್ಟ್ರಿ’ ಚಿತ್ರ ಘೋಷಣೆ, ನಾಯಕಿಯಾಗಿ ನಭಾ ನಟೇಶ್‌!

admin by admin
October 6, 2026
in Cinema, Newsbeat, ನ್ಯೂಸ್ ಬೀಟ್, ಮನರಂಜನೆ
Share on FacebookShare on TwitterShare on WhatsappShare on Telegram

ಬೆಂಗಳೂರು: ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ತಮ್ಮ ಮಾಸ್ ಇಮೇಜ್‌ನಿಂದ ಹೊರಬಂದು ಹೊಚ್ಚ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅವರ ಮುಂದಿನ ಚಿತ್ರಕ್ಕೆ ‘ಕೆಮಿಸ್ಟ್ರಿ’ ಎಂಬ ಆಕರ್ಷಕ ಶೀರ್ಷಿಕೆ ಇಡಲಾಗಿದ್ದು, ನಟಿ ನಭಾ ನಟೇಶ್ ನಾಯಕಿಯಾಗಿ ಸಾಥ್ ನೀಡುತ್ತಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ (PMF) ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವಪ್ರಸಾದ್ ಮತ್ತು ಕೃತಿ ಪ್ರಸಾದ್ ಈ ಅದ್ಧೂರಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಯುವ ನಿರ್ದೇಶಕ ವಿಶಾಲ್ ಆತ್ರೇಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಮಾಸ್ ಅಬ್ಬರ ಬಿಟ್ಟು ಭಾವನೆಗಳ ಲೋಕಕ್ಕೆ ಕಾಲಿಟ್ಟ ಧ್ರುವ
ಈವರೆಗೂ ಭರ್ಜರಿ ಸಾಹಸ, ಮಾಸ್ ಡೈಲಾಗ್‌ಗಳ ಮೂಲಕವೇ ಚಿತ್ರಮಂದಿರಗಳಲ್ಲಿ ಸಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದ ಧ್ರುವ ಸರ್ಜಾ, ಈ ಬಾರಿ ಮನಮಿಡಿಯುವ ಪ್ರೇಮಕಥೆ ಮತ್ತು ಅಪ್ಪಟ ಕೌಟುಂಬಿಕ ಕಥಾಹಂದರವನ್ನು ಆಯ್ಕೆ ಮಾಡಿಕೊಂಡಿರುವುದು ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಮೂಡಿಸಿದೆ. ಚಿತ್ರದಲ್ಲಿ ಧ್ರುವ ಅವರ ರೊಮ್ಯಾನ್ಸ್, ಮಮತೆ ಹಾಗೂ ಭಾವನಾತ್ಮಕ ಅಭಿನಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳಲ್ಲಿ ಈಗಾಗಲೇ ದೊಡ್ಡ ಮಟ್ಟದ ಕುತೂಹಲ ಮನೆಮಾಡಿದೆ. ಮಾಸ್‌ ಆಕ್ಷನ್‌ ಸಿನಿಮಾಗಳ ಮೂಲಕ ಅಭಿಮಾನಿಗಳ ನೆಚ್ಚಿನ ಹೀರೋ ಆಗಿರುವ ಧ್ರುವ, ಈಗ ಕೌಟುಂಬಿಕ ಪ್ರೇಕ್ಷಕರು, ಮಹಿಳೆಯರು ಹಾಗೂ ಯುವ ಜೋಡಿಗಳ ಹೃದಯ ಗೆಲ್ಲಲು ಹೊರಟಿದ್ದಾರೆ.

Related posts

shivarajkumar-flash-blast-incident-chitradurga-bail-movie-promotion

ಹ್ಯಾಟ್ರಿಕ್ ಹೀರೋ ಶಿವಣ್ಣ ಸುರಕ್ಷಿತ : ಅಭಿಮಾನಿಗಳಿಗೆ ನೆಮ್ಮದಿ. ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ದುರಂತ

October 6, 2026
pandavapura-free-health-camp-darshan-puttannaiah-october-8]

ಪಾಂಡವಪುರದಲ್ಲಿ ಅಕ್ಟೋಬರ್ 8 ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

October 6, 2026

ಕುಟುಂಬ ಸಮೇತ ಸಂಭ್ರಮಿಸುವ ಅದ್ಧೂರಿ ಸಿನಿಮಾ
ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಬದುಕಿಗೆ ಕನೆಕ್ಟ್ ಮಾಡಿಕೊಳ್ಳುವಂತಹ ಕೌಟುಂಬಿಕ ಬಾಂಧವ್ಯ ಮತ್ತು ಲವ್‌ ಸ್ಟೋರಿ ಈ ಚಿತ್ರದ ಪ್ರಮುಖ ಆಕರ್ಷಣೆ. ಅಭಿಮಾನಿಗಳು ತಮ್ಮ ಇಡೀ ಕುಟುಂಬದೊಂದಿಗೆ ಚಿತ್ರಮಂದಿರಕ್ಕೆ ಬಂದು ಆನಂದಿಸುವಂತಹ ಸಂಪೂರ್ಣ ಮನರಂಜನೆಯನ್ನು ಚಿತ್ರತಂಡ ಕಟ್ಟಿಕೊಡಲಿದೆ. ಧ್ರುವ ಸರ್ಜಾ ಅವರ ಭರ್ಜರಿ ಸ್ಟಾರ್‌ಡಮ್ ಜೊತೆಗೆ ಭಾವನೆಗಳು ಮೇಳೈಸಿದ ಈ ಸಿನಿಮಾ, ಅದ್ಧೂರಿ ಮೇಕಿಂಗ್ ಮೂಲಕ ತೆರೆಯ ಮೇಲೆ ಅರಳಲಿದೆ.

ಅನಿರೀಕ್ಷಿತ ಕಾಂಬಿನೇಷನ್; ಹೊಚ್ಚ ಹೊಸ ದೃಷ್ಟಿಕೋನ
ಸ್ಟಾರ್ ನಟ ಧ್ರುವ ಸರ್ಜಾ ಹಾಗೂ ಯುವ ಪ್ರತಿಭೆ ವಿಶಾಲ್ ಆತ್ರೇಯ ಅವರ ಜೋಡಿ ಈ ಪ್ರಾಜೆಕ್ಟ್‌ನ ಮತ್ತೊಂದು ವಿಶೇಷತೆ. ಒಬ್ಬ ಖ್ಯಾತ ಮಾಸ್ ಹೀರೋ ಯುವ ನಿರ್ದೇಶಕನ ಕ್ರಿಯೇಟಿವ್ ವಿಷನ್‌ಗೆ ಕೈಜೋಡಿಸಿರುವುದು ಸಿನಿಮಾ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯು ಈಗಾಗಲೇ ಕನ್ನಡದ ಸ್ಟಾರ್ ನಟರಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಗಣೇಶ್, ಉಪೇಂದ್ರ ಅವರೊಂದಿಗೆ ಕೈಜೋಡಿಸಿದೆ. ಈಗ ಧ್ರುವ ಸರ್ಜಾ ಜೊತೆ ದೊಡ್ಡ ಪ್ರಾಜೆಕ್ಟ್‌ಗೆ ಕೈಹಾಕಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಯಾಗಿ ಬೇರೂರುವ ಹಾಗೂ ವಿಭಿನ್ನ ಕಥೆಗಳನ್ನು ಕನ್ನಡಿಗರಿಗೆ ನೀಡುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಧ್ರುವ ಸರ್ಜಾ ಅವರ ವೃತ್ತಿಜೀವನದಲ್ಲೇ ಒಂದು ಮಹತ್ವದ ಮೈಲಿಗಲ್ಲಾಗುವ ಎಲ್ಲಾ ಲಕ್ಷಣಗಳು ಈ ಸಿನಿಮಾದ ಮೂಲಕ ಗೋಚರಿಸುತ್ತಿದೆ.

Tags: #DhruvaSarja #Chemistry #NabhaNatesh #PeopleMediaFactory #Sandalwood #KannadaCinema #NewMovieAnnouncement #ಧ್ರುವಸರ್ಜಾ #ಕೆಮಿಸ್ಟ್ರಿ #ನಭಾನಟೇಶ್ #ಸ್ಯಾಂಡಲ್‌ವುಡ್ #ಕನ್ನಡಸಿನಿಮಾ#saakshatv
ShareTweetSendShare
Join us on:

Related Posts

shivarajkumar-flash-blast-incident-chitradurga-bail-movie-promotion

ಹ್ಯಾಟ್ರಿಕ್ ಹೀರೋ ಶಿವಣ್ಣ ಸುರಕ್ಷಿತ : ಅಭಿಮಾನಿಗಳಿಗೆ ನೆಮ್ಮದಿ. ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ದುರಂತ

by admin
October 6, 2026
0

ನಟ ಶಿವಣ್ಣನ ಮೇಲೆ ಸಿಡಿದ ಫ್ಲಾಶ್ ಬ್ಲಾಸ್ಟ್..! ಚಿತ್ರದುರ್ಗದ ಅಹೋಬಲ ಟಿವಿಎಸ್ ಶೋರೂಂನಲ್ಲಿ ಭೀಕರ ಅವಘಡ ಚಿತ್ರದುರ್ಗ: ಬೇಲ್ ಸಿನಿಮಾ ಪ್ರಮೋಷನ್‌ಗಾಗಿ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿದ್ದ ಖ್ಯಾತ...

pandavapura-free-health-camp-darshan-puttannaiah-october-8]

ಪಾಂಡವಪುರದಲ್ಲಿ ಅಕ್ಟೋಬರ್ 8 ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

by admin
October 6, 2026
0

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾರ್ಗದರ್ಶನದಲ್ಲಿ ಆಯೋಜನೆ ಪುಟ್ಟಣ್ಣಯ್ಯ ಫೌಂಡೇಶನ್, ರೋಟರಿ ಕ್ಲಬ್ ಆಫ್ ಬೆಂಗಳೂರು ಜಂಕ್ಷನ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಸಹಯೋಗ ಪಾಂಡವಪುರ: ಸಮಾಜದ...

champions-of-care-vantara-anant-ambani-supports-animal-welfare-organisations

ಚಾಂಪಿಯನ್ಸ್ ಆಫ್ ಕೇರ್’: ರಾಜ್ಯದ 3 ಸಂಸ್ಥೆಗಳೂ ಸೇರಿ ದೇಶದ 50ಕ್ಕೂ ಹೆಚ್ಚು ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ವಂತಾರಾ ಬೆಂಬಲ

by admin
October 6, 2026
0

* ಅನಂತ್ ಅಂಬಾನಿಯವರ ‘ಚಾಂಪಿಯನ್ಸ್ ಆಫ್ ಕೇರ್’ಅಭಿಯಾನ ಆರಂಭ * ಪ್ರತಿವರ್ಷ 20 ಲಕ್ಷ ಅಶಕ್ತ ಪ್ರಾಣಿಗಳಿಗೆ ಸಿಗಲಿದೆ ನೆರವು * ಬೀದಿ ನಾಯಿ, ಬೆಕ್ಕು, ಅನಾಥ...

swiggy-instamart-noice-expansion-business-loan-food-entrepreneurs

ಆಹಾರ ಉದ್ಯಮಿಗಳಿಗೆ ₹5 ಕೋಟಿ ಸಾಲ, ಮಾರುಕಟ್ಟೆಗೆ 500+ ಹೊಸ ಉತ್ಪನ್ನ; ಸ್ವಿಗ್ಗಿ ‘ನಾಯ್ಸ್’ ಮೆಗಾ ಪ್ಲ್ಯಾನ್‌!

by admin
October 6, 2026
0

ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನ ಸ್ವಂತ ಆಹಾರ ಬ್ರ್ಯಾಂಡ್ ನಾಯ್ಸ್ (NOICE) ತನ್ನ ವ್ಯಾಪಾರವನ್ನು ಬೃಹತ್ ಮಟ್ಟದಲ್ಲಿ ವಿಸ್ತರಿಸಲು ಮುಂದಾಗಿದೆ. ಭಾರತದ ಸ್ಥಳೀಯ ಆಹಾರ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, ತನ್ನ...

technologies-aerospace-defense-manufacturing-unit-devanahalli]

ಏರೋಸ್ಪೇಸ್‌, ಡಿಫೆನ್ಸ್‌ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಂಡ ‘ಹೈಕ್ಯಾಲ್ʼ; ದೇವನಹಳ್ಳಿಯಲ್ಲಿ ನೂತನ ಘಟಕ ಆರಂಭ

by admin
October 6, 2026
0

ಬೆಂಗಳೂರು: ಜಾಗತಿಕ ವಾಯುಯಾನ ಮತ್ತು ರಕ್ಷಣಾ ವಲಯಕ್ಕೆ ಅಗತ್ಯವಾದ ಅತ್ಯಾಧುನಿಕ ಹಾಗೂ ನಿಖರವಾದ ಬಿಡಿಭಾಗಗಳನ್ನು ತಯಾರಿಸುವ ಬೆಂಗಳೂರು ಮೂಲದ ಪ್ರತಿಷ್ಠಿತ 'ಹೈಕ್ಯಾಲ್‌ ಟೆಕ್ನಾಲಜೀಸ್' ದೇವನಹಳ್ಳಿಯಲ್ಲಿ ತನ್ನ ನೂತನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram