ನಟ ಶಿವಣ್ಣನ ಮೇಲೆ
ಸಿಡಿದ ಫ್ಲಾಶ್ ಬ್ಲಾಸ್ಟ್..!
ಚಿತ್ರದುರ್ಗದ ಅಹೋಬಲ ಟಿವಿಎಸ್ ಶೋರೂಂನಲ್ಲಿ ಭೀಕರ ಅವಘಡ
ಚಿತ್ರದುರ್ಗ: ಬೇಲ್ ಸಿನಿಮಾ ಪ್ರಮೋಷನ್ಗಾಗಿ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿದ್ದ ಖ್ಯಾತ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಸ್ವಾಗತ ಕೋರುವ ಸಂದರ್ಭದಲ್ಲಿ ಅವರ ಸಮೀಪದಲ್ಲೇ ಫ್ಲಾಶ್ ಬ್ಲಾಸ್ಟ್ ಡೇಂಜರ್ ಪಟಾಕಿ ಮುಖಕ್ಕೆ ಸಿಡಿದ ಘಟನೆ ಕೆಲಕಾಲ ಆತಂಕದ ವಾತಾವರಣ ನಿರ್ಮಿಸಿತು.
ನಟ ಶಿವರಾಜ್ ಕುಮಾರ್ ಅವರು ಬೇಲ್ ಸಿನಿಮಾ ಪ್ರಮೋಷನ್ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರಕ್ಕೆ ಆಗಮಿಸಿದ್ದರು. ನಗರದ ಆರ್ಟಿಓ ಕಚೇರಿ ರಸ್ತೆಯಲ್ಲಿರುವ ಅಹೋಬಲ ಟಿವಿಎಸ್ ಶೋರೂಂಗೆ ಅವರು ಭೇಟಿ ನೀಡಿದ್ದರು. ನಟ ಶಿವಣ್ಣ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಂಘಟಕ ಅಹೋಬಲ ಟಿವಿಎಸ್ ಮಾಲೀಕ ಅರುಣ್ ವ್ಯವಸ್ಥೆ ಮಾಡಿದ್ದರು ಆದರೆ ಅವರ ನೆಯ ನಿರ್ಲಕ್ಷ್ಯತನ ಮತ್ತು ಬೇಜವಾಬ್ದಾರಿ ಇದಕ್ಕೆ ಕಾರಣ ಎಂದು ಗನ್ ಮ್ಯಾನ್ ಗಳೇ ಆಕ್ರೋಶ ಹೊರಹಾಕಿದ್ದಾರೆ.
ಶೋ ರೂಂ ಗೆ ಹೋಗುವ ಅಗತ್ಯ ಶಿವಣ್ಣಗೆ ಇರಲಿಲ್ಲ. ಆದರೆ ಶಿವಣ್ಣ ಅವರನ್ನು ಕರೆಸಿ ಟಿ.ವಿ.ಎಸ್ ಶೋರೂಮ್ ಪ್ರಚಾರ ಪಡೆಯುವ ಹಿನ್ನೆಲೆಯಲ್ಲಿ ಪ್ಲಾನ್ ಮಾಡಿದ್ದರು ಎಂಬುದು ನಂತರ ತಿಳಿದ ಮೇಲೆ ಶಿವರಾಜ್ ಕುಮಾರ್ ಅವರು ಅಹೋಬಲ ಶೋರೂಂ ಮಾಲೀಕರ ಮೇಲೆ ಸಿಡಿಮಿಡಿಗೊಂಡಿದ್ದಾರೆ.
ಶೋ ರೂಂ
ಆವರಣಕ್ಕೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲು ಫ್ಲಾಶ್ ಬ್ಲಾಸ್ಟ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿ ಫ್ಲಾಶ್ ಬ್ಲಾಸ್ಟ್ ಶಿವಣ್ಣ ಅವರ ಮುಖದ ಸಮೀಪದಲ್ಲೇ ಬಡ್ ಎಂದು ಸಿಡಿದಿದೆ.
ಏಕಾಏಕಿ ಸದ್ದು ಮತ್ತು ಬೆಳಕಿನೊಂದಿಗೆ ಫ್ಲಾಶ್ ಬ್ಲಾಸ್ಟ್ ಸಿಡಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಅಭಿಮಾನಿಗಳು ಹಾಗೂ ಸಾರ್ವಜನಿಕರು ಕೆಲ ಕ್ಷಣ ಗಾಬರಿಗೊಂಡರು.
ತಕ್ಷಣ ಎಚ್ಚೆತ್ತ ಅಂಗರಕ್ಷಕರು:
ಫ್ಲಾಶ್ ಬ್ಲಾಸ್ಟ್ ಸಿಡಿಯುತ್ತಿದ್ದಂತೆ ಶಿವರಾಜ್ ಕುಮಾರ್ ಅವರೊಂದಿಗೆ ಇದ್ದ ಅಂಗರಕ್ಷಕರು ತಕ್ಷಣವೇ ಎಚ್ಚೆತ್ತುಕೊಂಡಿದ್ದಾರೆ. ಪರಿಸ್ಥಿತಿಯನ್ನು ಅರಿತು ಶಿವಣ್ಣ ಅವರನ್ನು ಸುರಕ್ಷಿತವಾಗಿ ಅಲ್ಲಿಂದ ದೂರಕ್ಕೆ ಕರೆದೊಯ್ದಿದ್ದಾರೆ.
ಅಂಗರಕ್ಷಕರ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ. ಘಟನೆಯ ಬಳಿಕ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಅಭಿಮಾನಿಗಳಲ್ಲಿ ಆಕ್ರೋಶ:…
ಘಟನೆಯಿಂದ ಶಿವಣ್ಣ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೆಚ್ಚಿನ ನಟನಿಗೆ ಸ್ವಾಗತ ಕೋರುವ ಉದ್ದೇಶದಿಂದ ಇಂತಹ ಅಪಾಯಕಾರಿ ರೀತಿಯ ಸ್ಫೋಟಕ ಅಥವಾ ಫ್ಲಾಶ್ ವ್ಯವಸ್ಥೆ ಮಾಡುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಎತ್ತಿದ್ದಾರೆ.
“ಅಭಿಮಾನ ತೋರಿಸುವ ಹೆಸರಿನಲ್ಲಿ ನಟನ ಜೀವಕ್ಕೆ ಅಪಾಯವಾಗುವಂತಹ ಯಾವುದೇ ಕೃತ್ಯ ನಡೆಯಬಾರದು” ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದು Tvs ಶೋ ರೂಂ ಮಾಲೀಕ ಅರುಣ್ ವಿರುದ್ಧ ಕೇಸು ದಾಖಲಿಸಬೇಕೆಂದು ಒತ್ತಾಯಿಸಿದರು.
ಮುನ್ನೆಚ್ಚರಿಕೆ ಕ್ರಮಗಳ ಪ್ರಶ್ನೆ :
ಪ್ರಮುಖ ನಟರು ಸಾರ್ವಜನಿಕ ಕಾರ್ಯಕ್ರಮಗಳಿಗೆ ಆಗಮಿಸುವ ಸಂದರ್ಭದಲ್ಲಿ ಭದ್ರತೆ ಅತ್ಯಂತ ಪ್ರಮುಖವಾಗಿರುತ್ತದೆ. ಅದರಲ್ಲೂ ಅಭಿಮಾನಿಗಳ ಹೆಚ್ಚಿನ ಸಂಖ್ಯೆಯ ನಡುವೆ ಪಟಾಕಿ, ಫ್ಲಾಶ್ ಬ್ಲಾಸ್ಟ್ ಅಥವಾ ಇತರ ಸ್ಫೋಟಕ ಮಾದರಿಯ ವಸ್ತುಗಳನ್ನು ಬಳಸುವಾಗ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
ಈ ಘಟನೆಯ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಆಯೋಜಕರು ಮತ್ತು ಭದ್ರತಾ ವ್ಯವಸ್ಥೆಯ ಬಗ್ಗೆ ಕೂಡ ಚರ್ಚೆ ಆರಂಭವಾಗಿದೆ.
ಅದೃಷ್ಟವಶಾತ್, ಘಟನೆಯಲ್ಲಿ ಶಿವರಾಜ್ ಕುಮಾರ್ ಅವರಿಗೆ ಯಾವುದೇ ಗಂಭೀರ ಹಾನಿಯಾಗಿಲ್ಲ ಎಂದು ತಿಳಿದುಬಂದಿದ್ದು, ಅವರು ಸುರಕ್ಷಿತವಾಗಿದ್ದಾರೆ.
ಚಿತ್ರದುರ್ಗದಲ್ಲಿ ಅಭಿಮಾನಿಗಳ ಸಂಭ್ರಮದ ನಡುವೆ ನಡೆದ ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೆ ಕಾರಣವಾಗಿದೆ.




![pandavapura-free-health-camp-darshan-puttannaiah-october-8]](https://saakshatv.com/wp-content/uploads/2026/10/darsan-350x250.png)


