ಕಡಬ: ಸ್ನೇಹಿತರ ಜೊತೆ ಸ್ನಾನಕ್ಕೆ ತೆರಳಿದ್ದ ಯುವಕ ನೀರು ಪಾಲಾದ ಘಟನೆ ಕಡಬದ ಕುಮಾರಧಾರ ನದಿಯಲ್ಲಿ ನಡೆದಿದೆ. ನೀರುಪಾಲಾಗಿ ಮೃತಪಟ್ಟ ಯುವಕನನ್ನು ಕೊಯಿಲ ಜನತಾ ಕಾಲೋನಿ ನಿವಾಸಿ ಅರ್ಫಾದ್ ಎಂದು ಗುರುತಿಸಲಾಗಿದೆ. ಅರ್ಫಾದ್ ತನ್ನ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಕೊಯಿಲ ಗ್ರಾಮದ ಸುದೆಂಗಳ ಸಮೀಪದ ಕುಮಾರಧಾರ ನದಿಗಿಳಿದಿದ್ದ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಕಣ್ಮರೆಯಾಗಿದ್ದ. ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯ ಈಜುಗಾರರು, ಕಡಬ ಅಗ್ನಿಶಾಮಕ ದಳ ಹಾಗೂ ಕಡಬ ಪೊಲೀಸರ ನಿರಂತರ ಕಾರ್ಯಾಚರಣೆ ಬಳಿಕ ಯುವಕನ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಟ್ಟಿಕಾ ಗೋಲ್ಡ್ ಸಾಮ್ರಾಜ್ಯಕ್ಕೆ ಇಡಿ ಶಾಕ್: 4 ರಾಜ್ಯಗಳ 19 ಕಡೆ ಮಹಾ ದಾಳಿ, ಮಾಲೀಕ ಬಾಬು ಪರಾರಿ
ಹಳೆಯ ಚಿನ್ನ ಖರೀದಿ ಮತ್ತು ಅಡವಿಟ್ಟ ಚಿನ್ನ ಬಿಡಿಸಿಕೊಡುವ ಹೆಸರಿನಲ್ಲಿ ಜನಪ್ರಿಯವಾಗಿದ್ದ ಅಟ್ಟಿಕಾ ಗೋಲ್ಡ್ ಕಂಪನಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. ಅಕ್ರಮ ಹಣ...








