ADVERTISEMENT
Wednesday, October 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮುಖ್ಯಮಂತ್ರಿಗಳೇ, ಗಾಳಿಯಲ್ಲಿ ಗುಂಡು ಬೇಡ, ಕೂಡಲೇ ಎಫ್‌ಐಆರ್‌ ದಾಖಲಿಸಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

admin by admin
October 14, 2026
in Newsbeat, State, ರಾಜ್ಯ
r-ashoka-demands-fir-sting-operation-case-karnataka

r-ashoka-demands-fir-sting-operation-case-karnataka

Share on FacebookShare on TwitterShare on WhatsappShare on Telegram

ಬೆಂಗಳೂರು,  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸ್ಟಿಂಗ್‌ ಆಪರೇಶನ್‌ ಬಗ್ಗೆ ಗಾಳಿಯಲ್ಲಿ ಗುಂಡು ಹಾರಿಸುವ ಬದಲು ಎಫ್‌ಐಆರ್‌ ದಾಖಲಿಸಿ ತನಿಖೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹತ್ತು ಸಚಿವರ ವಿರುದ್ಧ ಸ್ಟಿಂಗ್‌ ಆಪರೇಶನ್‌ ಆಗಿದೆ, ಸಿ.ಡಿ. ಇದೆ, ಭ್ರಷ್ಟಾಚಾರದ ಬಗ್ಗೆ ಮಾಹಿತಿ ಇದೆ ಎಂದೆಲ್ಲ ಹೇಳಿದ್ದಾರೆ. ಇಡೀ ಸಚಿವ ಸಂಪುಟ ಈಗ ಮಲಿನವಾಗಿದೆ. ಸಚಿವರು ಭ್ರಷ್ಟಾಚಾರಿಗಳಾಗಿದ್ದು, ಯಾರೋ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಜನರು ಮಾತಾಡುತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿ ತಮ್ಮದೇ ಸಚಿವ ಸಂಪುಟದವರ ಮೇಲೆ ಸ್ಟಿಂಗ್‌ ಆಪರೇಶನ್‌ ಆಗಿದೆ ಎಂದರೆ, ಸಚಿವರ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡುತ್ತದೆ. ಈಗ ಸಚಿವರು ಸಂಕೋಚದಲ್ಲೇ ಇರಬೇಕಾ, ರಾಜೀನಾಮೆ ನೀಡಬೇಕಾ ಎಂದು ಗೊತ್ತಿಲ್ಲ. ಏಕೆಂದರೆ ಎಲ್ಲ ಸಚಿವರ ಮೇಲೂ ಈಗ ಅನುಮಾನ ಇದೆ ಎಂದರು.

Related posts

r-ashoka-demands-fir-honey-trap-allegations-karnataka

ಹನಿ ಟ್ರ್ಯಾಪ್’ ಬಗ್ಗೆ ಗಾಳಿಯಲ್ಲಿ ಗುಂಡು ಹಾರಿಸುವುದನ್ನು ನಿಲ್ಲಿಸಿ, ಸತ್ಯವನ್ನು ಬಹಿರಂಗಪಡಿಸಿ: ಆರ್. ಅಶೋಕ್

October 14, 2026
cubbon-park-walkers-association-international-women-youth-achievers-awards-2026

ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ & ಫೋರಂ: 6ನೇ ಅಂತರರಾಷ್ಟ್ರೀಯ ಮಹಿಳಾ ಮತ್ತು ಯುವ ಸಾಧಕರ ಪ್ರಶಸ್ತಿ ಪ್ರದಾನ ಸಮಾರಂಭ 2026

October 14, 2026

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಲ್ಲೇ ಹೋದರೂ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ತಾಕತ್ತಿದ್ದರೆ ಸ್ಟಿಂಗ್‌ ಆಪರೇಶನ್‌ ಮಾಡಿದವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು. ಹೀಗೆ ಮಾಡಿದವರು ಇದೇ ರಾಜ್ಯದವರಾ? ಹೊರ ರಾಜ್ಯದವರಾ? ಇದಕ್ಕೆ ಎಷ್ಟು ಹಣ ಖರ್ಚಾಗಿದೆ ಹೀಗೆ ಎಲ್ಲ ವಿಷಯಗಳು ತನಿಖೆಯಿಂದ ಹೊರಗೆ ಬರಬೇಕಿದೆ. ಇದು ಕೇವಲ ವ್ಯಕ್ತಿಗಳ ಪ್ರಶ್ನೆಯಲ್ಲ. ಇದು ಸರ್ಕಾರದ ಸಚಿವ ಸಂಪುಟದ ಗೌರವದ ಪ್ರಶ್ನೆ. ಎಫ್‌ಐಆರ್‌ ದಾಖಲಿಸುವುದಿಲ್ಲ ಎಂದರೆ, ಮುಖ್ಯಮಂತ್ರಿ ಕೇವಲ ಗಾಳಿಯಲ್ಲಿ ಗುಂಡು ಹೊಡೆಯುವವರು ಎಂದು ಸಾಬೀತಾಗುತ್ತದೆ. ಬಿಜೆಪಿ, ಜೆಡಿಎಸ್‌ ವಿರುದ್ಧ ಸುಮ್ಮನೆ ಆರೋಪ ಮಾಡುವುದನ್ನು ನಿಲ್ಲಿಸಿ, ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡ ನಂತರ ಮೌನಕ್ಕೆ ಜಾರಿದ್ದಾರೆ. ಕಳೆದ ಅಧಿವೇಶನದಲ್ಲೂ ಮೌನ ವ್ರತ ಮಾಡಿದ್ದರು. ಅವರಿಗೆ ಈಗ ಗರ ಬಡಿದಂತೆ ಆಗಿದೆ. ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದು, ಜನರಿಗೆ ಅವರ ಮೇಲೆ ಅಪಾರ ಗೌರವ ಇದೆ. ಈ ಸಂದರ್ಭದಲ್ಲಾದರೂ ಅವರು ಮಾತಾಡಿ ಜನರ ಮನಸ್ಸಿನ ಗೊಂದಲವನ್ನು ಬಗೆಹರಿಸಬೇಕು ಎಂದರು.

Tags: #ಸ್ಟಿಂಗ್‌ಆಪರೇಶನ್ #ಆರ್ಅಶೋಕ್ #ಡಿಕೆಶಿವಕುಮಾರ್ #ಎಫ್‌ಐಆರ್ #ಕರ್ನಾಟಕರಾಜಕೀಯ #ಸಿದ್ದರಾಮಯ್ಯ #ಬಿಜೆಪಿ #ಜೆಡಿಎಸ್ #StingOperation #RAshoka #DKShivakumar #FIR #KarnatakaPolitics #PoliticalNews #saakshatv
ShareTweetSendShare
Join us on:

Related Posts

r-ashoka-demands-fir-honey-trap-allegations-karnataka

ಹನಿ ಟ್ರ್ಯಾಪ್’ ಬಗ್ಗೆ ಗಾಳಿಯಲ್ಲಿ ಗುಂಡು ಹಾರಿಸುವುದನ್ನು ನಿಲ್ಲಿಸಿ, ಸತ್ಯವನ್ನು ಬಹಿರಂಗಪಡಿಸಿ: ಆರ್. ಅಶೋಕ್

by admin
October 14, 2026
0

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಮೇಲೆಯೇ ಹಾಗೂ ತಮ್ಮ ಸಂಪುಟದ ಐದಾರು ಸಚಿವರ ಮೇಲೆ ‘ಹನಿ ಟ್ರ್ಯಾಪ್’ ಪ್ರಯತ್ನ ನಡೆದಿದೆ ಎಂದು ಹೇಳುತ್ತಿದ್ದಾರೆ. ತಮ್ಮ...

cubbon-park-walkers-association-international-women-youth-achievers-awards-2026

ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ & ಫೋರಂ: 6ನೇ ಅಂತರರಾಷ್ಟ್ರೀಯ ಮಹಿಳಾ ಮತ್ತು ಯುವ ಸಾಧಕರ ಪ್ರಶಸ್ತಿ ಪ್ರದಾನ ಸಮಾರಂಭ 2026

by admin
October 14, 2026
0

ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಮತ್ತು ಫೋರಂ (Cubbon Park Walkers Association & Forum) ವತಿಯಿಂದ ಆಯೋಜಿಸಲಾದ '6ನೇ ಅಂತರರಾಷ್ಟ್ರೀಯ ಮಹಿಳಾ ಮತ್ತು ಯುವ ಸಾಧಕರ...

bengaluru-teachers-constituency-election-ap-ranganath-r-ashoka-campaign

ಬೆಂಗಳೂರು ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಪರ ವಿಪಕ್ಷ ನಾಯಕ ಆರ್. ಅಶೋಕ್ ಮತಯಾಚನೆ

by admin
October 14, 2026
0

ಮುಂಬರುವ ಅಕ್ಟೋಬರ್ 23 ರಂದು ನಡೆಯಲಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ಆರ್. ಅಶೋಕ್ ಅವರು...

r-ashoka-demands-white-paper-karnataka-drought-management

ದೆಹಲಿ ಪ್ರವಾಸದಲ್ಲಿ ಕಾಲ ಕಳೆಯುತ್ತಿರುವ ಸಿಎಂ, ಬರ ನಿರ್ವಹಣೆಗೆ ಏನು ಮಾಡಿದ್ದಾರೆ ಎಂದು ಶ್ವೇತಪತ್ರ ಹೊರಡಿಸಲಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
October 14, 2026
0

ಬಾಂಡೆಡ್‌ ಲೇಬರ್‌ ಆದ ಮುಖ್ಯಮಂತ್ರಿ, ಕತ್ತು ಪಟ್ಟಿ ಹಿಡಿದು ತಳ್ಳಿದ ರಾಹುಲ್‌ ಗಾಂಧಿ, ಇದು ಜನತೆಗೆ ಮಾಡಿದ ಅಪಮಾನ ಬೆಂಗಳೂರು, ಅಕ್ಟೋಬರ್‌ 13 ಬರಗಾಲದ ತೀವ್ರತೆ ಇದ್ದರೂ...

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

ಬರಗಾಲದ ತೀವ್ರತೆ ಅರ್ಥ ಮಾಡಿಕೊಳ್ಳಲು ಕರ್ನಾಟಕಕ್ಕೆ ಭೇಟಿ ನೀಡಿ, ರೈತರಿಗೆ ಹೆಚ್ಚಿನ ಪರಿಹಾರ ಕೊಡಿಸಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

by admin
October 14, 2026
0

ಬರಗಾಲದ ತೀವ್ರತೆ ಅರ್ಥ ಮಾಡಿಕೊಳ್ಳಲು ಕರ್ನಾಟಕಕ್ಕೆ ಭೇಟಿ ನೀಡಿ, ರೈತರಿಗೆ ಹೆಚ್ಚಿನ ಪರಿಹಾರ ಕೊಡಿಸಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram