ADVERTISEMENT
Wednesday, October 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ದೆಹಲಿ ಪ್ರವಾಸದಲ್ಲಿ ಕಾಲ ಕಳೆಯುತ್ತಿರುವ ಸಿಎಂ, ಬರ ನಿರ್ವಹಣೆಗೆ ಏನು ಮಾಡಿದ್ದಾರೆ ಎಂದು ಶ್ವೇತಪತ್ರ ಹೊರಡಿಸಲಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

admin by admin
October 14, 2026
in Newsbeat, State, ರಾಜ್ಯ
r-ashoka-demands-white-paper-karnataka-drought-management

r-ashoka-demands-white-paper-karnataka-drought-management

Share on FacebookShare on TwitterShare on WhatsappShare on Telegram

ಬಾಂಡೆಡ್‌ ಲೇಬರ್‌ ಆದ ಮುಖ್ಯಮಂತ್ರಿ, ಕತ್ತು ಪಟ್ಟಿ ಹಿಡಿದು ತಳ್ಳಿದ ರಾಹುಲ್‌ ಗಾಂಧಿ, ಇದು ಜನತೆಗೆ ಮಾಡಿದ ಅಪಮಾನ

ಬೆಂಗಳೂರು, ಅಕ್ಟೋಬರ್‌ 13

Related posts

bengaluru-teachers-constituency-election-ap-ranganath-r-ashoka-campaign

ಬೆಂಗಳೂರು ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಪರ ವಿಪಕ್ಷ ನಾಯಕ ಆರ್. ಅಶೋಕ್ ಮತಯಾಚನೆ

October 14, 2026
ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

ಬರಗಾಲದ ತೀವ್ರತೆ ಅರ್ಥ ಮಾಡಿಕೊಳ್ಳಲು ಕರ್ನಾಟಕಕ್ಕೆ ಭೇಟಿ ನೀಡಿ, ರೈತರಿಗೆ ಹೆಚ್ಚಿನ ಪರಿಹಾರ ಕೊಡಿಸಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

October 14, 2026

ಬರಗಾಲದ ತೀವ್ರತೆ ಇದ್ದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿ ಪ್ರವಾಸದಲ್ಲಿ ಹಾಗೂ ಸ್ಟಿಂಗ್‌ ಆಪರೇಶನ್‌ ಚರ್ಚೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಬರ ನಿರ್ವಹಣೆಗೆ ಈವರೆಗೆ ಏನು ಮಾಡಲಾಗಿದೆ ಎಂದು ತಿಳಿಸಲು ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲದ ಪರಿಸ್ಥಿತಿ ತೀವ್ರವಾಗಿದ್ದು, ಕಾಂಗ್ರೆಸ್‌ ಸರ್ಕಾರ ನೀಡಿದ 2,500 ರೂ. ಪರಿಹಾರವನ್ನು ರೈತರು ವಾಪಸ್‌ ಜಿಲ್ಲಾಧಿಕಾರಿಗೆ ನೀಡುತ್ತಿದ್ದಾರೆ. ಇದ್ಯಾವುದೂ ನನಗೆ ಗೊತ್ತಿಲ್ಲ ಎನ್ನುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಟಿಂಗ್‌ ಆಪರೇಶನ್‌, ಸಿಡಿ ಎಂದು ಮಾತಾಡುತ್ತಿದ್ದಾರೆ. ಕರ್ನಾಟಕಕ್ಕಿಂತ ಹೆಚ್ಚು ಕಾಲ ದೆಹಲಿಯಲ್ಲೇ ಕಳೆದಿದ್ದಾರೆ. ಅವರಿಗೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಹತ್ತು ದಿನಗಳಲ್ಲಿ ಕೇವಲ ಸ್ಟಿಂಗ್‌ ಬಗ್ಗೆ ಚರ್ಚೆ ನಡೆದಿದೆ. 217 ತಾಲೂಕುಗಳಲ್ಲಿ ಬರಗಾಲವಿದ್ದು, 46,324 ಕೋಟಿ ರೂ. ನಷ್ಟವಾಗಿದೆ. ಆದರೆ ಸರ್ಕಾರ ಭಿಕ್ಷಯಂತೆ 1,500 ಕೋಟಿ ರೂ. ನೀಡುತ್ತಿದೆ ಎಂದು ದೂರಿದರು.

ಅಂತರ್ಜಲ ಮಟ್ಟ ಕುಸಿದಿದ್ದು, ಸಾವಿರಾರು ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಬಳ್ಳಾರಿ ಮೊದಲಾದ ಕಡೆ ಫ್ಲೋರೈಡ್‌ ನೀರು ಸಿಗುತ್ತಿದೆ. ಜನರ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ಕಾಳಜಿಯೂ ಇಲ್ಲ, ಕುಡಿಯುವ ನೀರು ಪೂರೈಸುವ ಬಗ್ಗೆ ಯೋಚಿಸಿಲ್ಲ. ಆಡಂಬರ, ಜಾಹೀರಾತು, ರಿಯಲ್‌ ಎಸ್ಟೇಟ್‌ನಲ್ಲೇ ಸಿಎಂ ಕಾಲ ಕಳೆಯುತ್ತಿದ್ದಾರೆ. ಒಬ್ಬ ಸಚಿವರು ಕೂಡ ಹಳ್ಳಿಗಳಿಗೆ ಭೇಟಿ ನೀಡಿಲ್ಲ. ಬೋರ್‌ವೆಲ್‌ ಕೊರೆಯುವುದರ ಬಗ್ಗೆ ಇನ್ನೂ ಕ್ರಮ ವಹಿಸಿಲ್ಲ. ಹೊಲ ಉಳುಮೆ ಮಾಡಲು ನಾಲ್ಕೈದು ಸಾವಿರ ರೂ. ಖರ್ಚಾಗುವಾಗ ಇಷ್ಟು ಕಡಿಮೆ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ವಿಶೇಷ ಅಧಿವೇಶನದಲ್ಲಿ ಕೋಟ್ಯಂತರ ರೂಪಾಯಿ ಪರಿಹಾರ ಸಿಗಲಿದೆ ಎಂದುಕೊಂಡಿದ್ದೆ. ಕೊನೆಗೆ ರೈತರಿಗೆ ನಾಮ ಹಾಕಿದರು ಎಂದರು.

ಶ್ವೇತಪತ್ರ ಬಿಡುಗಡೆ ಮಾಡಿ

ಬ್ಯಾಂಕ್‌ಗಳು ಸಾಲ ವಸೂಲಾತಿಗೆ ನೋಟಿಸ್‌ ನೀಡುತ್ತಿವೆ. ಮೈಕ್ರೋ ಫೈನಾನ್ಸ್‌ಗಳು ಸಾಲ ವಸೂಲಿಗೆ ಬರುತ್ತಿವೆ. ಹಾಲಿನ ಪ್ರೋತ್ಸಾಹಧನವನ್ನು 5 ರಿಂದ 8 ರೂ. ಮಾಡಲಾಗುವುದೆಂದು ಘೋಷಣೆ ಮಾಡಿ ಅದನ್ನು ಜಾರಿ ಮಾಡಿಲ್ಲ. ಬದಲಾಗಿ ಹಾಲಿನ ದರ ಹೆಚ್ಚಿಸಲಾಗಿದೆ. ಸರ್ಕಾರ ಈಗ ಬರದ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಬೇಕು. ಎಷ್ಟು ಪರಿಹಾರ ಬಿಡುಗಡೆಯಾಗಿದೆ? ರೈತರಿಗೆ ಎಷ್ಟು ಹಣ ನೀಡಲಾಗಿದೆ? ಯಾವ ಕೆಲಸಗಳಾಗಿವೆ ಎಂದು ಜನರಿಗೆ ತಿಳಿಯಬೇಕು ಎಂದರು.

ಪತ್ರ ಬರೆದಿದ್ದೇನೆ

ಸೋನಿಯಾ ಗಾಂಧಿ ಮದುವೆಯಾಗಿ 15 ವರ್ಷಗಳಾದ ನಂತರ ಭಾರತೀಯರಾದರು. ಅಂತಹ ವಂಶದಿಂದ ಬಂದ ರಾಹುಲ್‌ ಗಾಂಧಿ ವೋಟ್‌ ಚೋರಿ ಬಗ್ಗೆ ಮಾತಾಡುತ್ತಾರೆ. ಇದರ ಬದಲು ಕರ್ನಾಟಕದಲ್ಲಿ ಖಜಾನೆ ಚೋರಿ ಬಗ್ಗೆ ಮಾತಾಡಬೇಕು. ರೈತರ ಸಮಸ್ಯೆ ಆಲಿಸುವಂತೆ ಆಗ್ರಹಿಸಿ ರಾಹುಲ್‌ ಗಾಂಧಿಯವರಿಗೆ ಪತ್ರ ಬರೆದಿದ್ದೇನೆ ಎಂದರು.

ಸಚಿವ ಸಂಪುಟದಲ್ಲಿ ಅನ್ನದಾತರ ಬಗ್ಗೆ, ಮೇಕೆದಾಟು, ಕುಡಿಯುವ ನೀರಿನ ಬಗ್ಗೆ ಚರ್ಚೆಯಾಗಬೇಕು. ಅದರ ಬದಲು ಸ್ಟಿಂಗ್‌ ಆಪರೇಶನ್‌ ಬಗ್ಗೆ ಚರ್ಚೆ ಮಾಡಿದರೆ ಸರ್ಕಾರದ ಮಾನ ಹೋಗುತ್ತದೆ. ಇದರಿಂದಾಗಿ ಸಚಿವ ಸಂಪುಟ ಮಲಿನವಾಗಿದೆ. ಜನರ ಕಷ್ಟಗಳ ಬಗ್ಗೆ ಸಭೆಯಲ್ಲಿ ಮಾತಾಡಬೇಕಿದ್ದರೂ ಪಾಪರ್‌ ಆಗಿರುವುದರಿಂದ ವಿಷಯಾಂತರ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಮಾಡಿರುವ ಸಾಲಮನ್ನಾ ಬಗ್ಗೆ ಅಧ್ಯಯನ ಮಾಡಿ ಅದನ್ನು ಇಲ್ಲಿ ಜಾರಿ ಮಾಡುವ ಬಗ್ಗೆ ಚರ್ಚಿಸಬೇಕಿತ್ತು ಎಂದರು.

ಸ್ಟಿಂಗ್‌ ಆಪರೇಶನ್‌ ಬಗ್ಗೆ ಎಫ್‌ಐಆರ್‌ ಮಾಡಲಿ

ಮಾಜಿ ಸಿಎಂ ಸಿದ್ದರಾಮಯ್ಯ ಅತಿ ಹೆಚ್ಚು ಮುಖ್ಯಮಂತ್ರಿಯಾಗಿದ್ದರು. ಅಂತಹವರಿಗೆ ಕೋರ್ಟ್‌ ಮೆಟ್ಟಿಲು ಹತ್ತುವ ನೋವನ್ನು ಕಾಂಗ್ರೆಸ್‌ನವರು ನೀಡಿದ್ದಾರೆ. ಸಿದ್ದರಾಮಯ್ಯನವರಿಗೆ ಈಗ ಕಾಂಗ್ರೆಸ್‌ನ ಸಂಸ್ಕೃತಿ ಗೊತ್ತಾಗಿದೆ. ಅವರ ಬೆನ್ನಿಗೆ ಕಾಂಗ್ರೆಸ್‌ ನಾಯಕರು ಚೂರಿ ಹಾಕಿದ್ದಾರೆ. ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರುವ ದಯನೀಯ ಸ್ಥಿತಿ ಅವರಿಗೆ ಬಂದಿದೆ. ಅವರನ್ನು ಯೂಸ್‌ ಅಂಡ್‌ ತ್ರೋ ಮಾಡಿದ್ದಾರೆ ಎಂದರು.

ಸ್ಟಿಂಗ್‌ ಆಪರೇಶನ್‌ ಮಾಡಿದ್ದು ಯಾರೆಂದು ಬೆಳಕಿಗೆ ಬರಬೇಕೆಂದು ಅವರು ಹೇಳಿದ್ದರು. ಆದ್ದರಿಂದ ಮೊದಲು ಎಫ್‌ಐಆರ್‌ ಆಗಬೇಕು. ಕೆಲವರನ್ನು ಬಂಧಿಸಿ ಪ್ರಭಾವಿಗಳ ಸುಪರ್ದಿಯಲ್ಲಿ ಇಟ್ಟಿದ್ದಾರೆ ಎಂಬ ಮಾಹಿತಿ ಇದೆ. ಸೈದ್ಧಾಂತಿಕವಾಗಿ ಸಿದ್ದರಾಮಯ್ಯನವರನ್ನು ನಾನು ವಿರೋಧ ಮಾಡುತ್ತೇನೆ. ಆದರೆ ಹಿರಿಯರಾದ ಅವರಿಗೆ ಹೀಗೆ ಮಾಡಬಾರದಿತ್ತು. ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಅವರು ಸಚಿವರಾಗಿದ್ದರು ಹಾಗೂ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ್ದರು. ಫಾರ್ಮ್‌ 7 ಕೊಟ್ಟವರನ್ನು ಕೂಡಲೇ ಬಂಧಿಸಿದ್ದಾರೆ. ಆದರೆ ಸ್ಟಿಂಗ್‌ ಆಪರೇಶನ್‌ ಮಾಡಿದವರು ಯಾರೆಂದು ಕೂಡ ಹೇಳಿಲ್ಲ. ಧೈರ್ಯವಿದ್ದರೆ ಈ ಕುರಿತು ತನಿಖೆ ಮಾಡಲಿ, ಸಿಬಿಐಗೆ ವಹಿಸಲಿ. ಮೊದಲು ಎಫ್‌ಐಆರ್‌ ಆಗಲಿ ಎಂದರು.

ಮಾಜಿ ಸಚಿವ ರಾಜಣ್ಣ ಈ ಬಗ್ಗೆ ಮಾತಾಡಿರುವುದರಿಂದ ಅವರ ಮೂಲಕವೇ ದೂರು ಸ್ವೀಕಾರ ಮಾಡಲಿ. ಸ್ವಯಂಪ್ರೇರಿತವಾಗಿಯೂ ದೂರು ದಾಖಲಿಸಬಹುದು. ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕೋರ್ಟ್‌ಗೆ ಹೋಗಿರುವುದರಿಂದ ದೂರು ದಾಖಲಿಸಬಹುದು. ಸುಮ್ಮನೆ ಮಾತಾಡುವುದು ಬೇಡ ಎಂದರು.

ದೆಹಲಿ ಪ್ರತಿಭಟನೆ

ಸಿಎಂ ಡಿ.ಕೆ.ಶಿವಕುಮಾರ್‌ ದೆಹಲಿ ಪ್ರತಿಭಟನೆಯಲ್ಲಿ ಭಾಗವಹಿಸಿದಾಗ, ರಾಹುಲ್‌ ಗಾಂಧಿ ಅವರ ಕತ್ತಿನ ಪಟ್ಟಿ ಹಿಡಿದು ತಳ್ಳುತ್ತಿರುವ ವೀಡಿಯೋ ನೋಡಿದೆ. ಇದು ರಾಜ್ಯದ ಜನರಿಗೆ ಮಾಡಿದ ಅಪಮಾನ. ಇತಿಹಾಸದಲ್ಲಿ ಯಾವುದೇ ಮುಖ್ಯಮಂತ್ರಿ ಅದೇ ಪಕ್ಷದ ನಾಯಕರು ಈ ರೀತಿ ಅವಮಾನ ಮಾಡಿಲ್ಲ. ಕತ್ತಿನ ಪಟ್ಟಿ ಹಿಡಿದು ತಳ್ಳಿರುವುದು ಎಲ್ಲರೂ ತಲೆ ತಗ್ಗಿಸುವ ಘಟನೆ. ಇದು ಏಳು ಕೋಟಿ ಕನ್ನಡಿಗರಿಗೆ ಮಾಡಿದ ಅಪಮಾನ. ರಾಹುಲ್‌ ಗಾಂಧಿ ಕೂಡಲೇ ಜನರ ಕ್ಷಮೆ ಕೇಳಬೇಕು. ಇಲ್ಲವಾದರೆ ಅವರಿಗೆ ರಾಜ್ಯಕ್ಕೆ ಬರಲು ಬಿಡಬಾರದು. ಇದೇ ಕಾಂಗ್ರೆಸ್‌ನ ಸಂಸ್ಕೃತಿ. ಇಂತಹ ಸಂಸ್ಕೃತಿಯನ್ನು ಬೆಳೆಸಬಾರದು. ಇದು ಗುಲಾಮಗಿರಿಗಿಂತಲೂ ಕೆಟ್ಟ ಸ್ಥಿತಿ. ಸಿಎಂ ಡಿ.ಕೆ.ಶಿವಕುಮಾರ್‌ ಹೈಕಮಾಂಡ್‌ಗೆ ಹಣ ನೀಡುವ ಬಾಂಡೆಡ್‌ ಲೇಬರ್‌ ರೀತಿ ಆಗಿದ್ದಾರೆ. ಗಾಂಧಿ ಕುಟುಂಬವೇ ಅವರನ್ನು ತಳ್ಳಿಹಾಕಿದೆ ಎಂದರು.

ShareTweetSendShare
Join us on:

Related Posts

bengaluru-teachers-constituency-election-ap-ranganath-r-ashoka-campaign

ಬೆಂಗಳೂರು ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಪರ ವಿಪಕ್ಷ ನಾಯಕ ಆರ್. ಅಶೋಕ್ ಮತಯಾಚನೆ

by admin
October 14, 2026
0

ಮುಂಬರುವ ಅಕ್ಟೋಬರ್ 23 ರಂದು ನಡೆಯಲಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ಆರ್. ಅಶೋಕ್ ಅವರು...

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

ಬರಗಾಲದ ತೀವ್ರತೆ ಅರ್ಥ ಮಾಡಿಕೊಳ್ಳಲು ಕರ್ನಾಟಕಕ್ಕೆ ಭೇಟಿ ನೀಡಿ, ರೈತರಿಗೆ ಹೆಚ್ಚಿನ ಪರಿಹಾರ ಕೊಡಿಸಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

by admin
October 14, 2026
0

ಬರಗಾಲದ ತೀವ್ರತೆ ಅರ್ಥ ಮಾಡಿಕೊಳ್ಳಲು ಕರ್ನಾಟಕಕ್ಕೆ ಭೇಟಿ ನೀಡಿ, ರೈತರಿಗೆ ಹೆಚ್ಚಿನ ಪರಿಹಾರ ಕೊಡಿಸಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ...

r-ashoka-sting-operation-fir-congress-statement-october-2026

ಎಫ್‌ಐಆರ್‌ ದಾಖಲಿಸದಿದ್ದರೆ ಸ್ಟಿಂಗ್‌ ಆಪರೇಶನ್‌ ಮಾಡಿಸಿದ್ದು ಕಾಂಗ್ರೆಸ್ಸೇ ಎಂದು ಖಚಿತವಾಗುತ್ತದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
October 14, 2026
0

ಈ ಬಾರಿ ವಿಧಾನಪರಿಷತ್‌ ಎಲ್ಲ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಆನೇಕಲ್‌, ಸ್ಟಿಂಗ್‌ ಆಪರೇಶನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸದೇ ಇದ್ದಲ್ಲಿ, ಇದನ್ನು ಮಾಡಿಸಿದ್ದು ಕಾಂಗ್ರೆಸ್‌ ನಾಯಕರೇ ಎಂಬುದು ಖಚಿತವಾಗುತ್ತದೆ...

instamart-sale-2026-home-kitchen-decor-discounts

ಹಬ್ಬದ ಸೀಸನ್‌ಗೆ ಇನ್‌ಸ್ಟಾಮಾರ್ಟ್ ಬಂಪರ್ ಆಫರ್: ಗೃಹೋಪಯೋಗಿ ವಸ್ತುಗಳ ಮೇಲೆ 50-90% ರಿಯಾಯಿತಿ

by admin
October 14, 2026
0

ಹಬ್ಬದ ಸೀಸನ್‌ನಲ್ಲಿ ಮನೆಗೆ ಹೊಸ ವಸ್ತುಗಳನ್ನು ಖರೀದಿಸಲು ಹೊರಟವರಿಗೆ 'ಇನ್‌ಸ್ಟಾಮಾರ್ಟ್ ಕ್ವಿಕ್ ಇಂಡಿಯಾ ಮೂವ್‌ಮೆಂಟ್ 2026' ಭರ್ಜರಿ ಆಫರ್‌ ಘೋಷಿಸಿದೆ. ಈ ಸೇಲ್‌ನಲ್ಲಿ ಗೃಹೋಪಯೋಗಿ ವಸ್ತುಗಳು, ಅಡುಗೆಮನೆಗೆ...

java-motorcycles-history-india-check-day-2026

ಚೆಕ್‌ ರಿಪಬ್ಲಿಕ್‌ನಲ್ಲಿ ಹುಟ್ಟಿ ಭಾರತೀಯರ ಹಾರ್ಟ್‌ ಬೀಟ್ ಆದ ‘ಜಾವಾ’: ಇದು ಕ್ಲಾಸಿಕ್ ಬೈಕ್‌ನ ಶತಮಾನದ ಕಹಾನಿ!

by admin
October 14, 2026
0

ಹೊಸದಿಲ್ಲಿ: ದೆಹಲಿಯಲ್ಲಿರುವ ಚೆಕ್‌ ರಿಪಬ್ಲಿಕ್ ರಾಯಭಾರ ಕಚೇರಿಯಲ್ಲಿ 'ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್' ವತಿಯಿಂದ 'ಚೆಕ್‌ ಡೇ 2026' ಅನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಸುಮಾರು ಒಂದು ಶತಮಾನದ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram