ADVERTISEMENT
Friday, October 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

‘BGMI Air’ ಆಗಿ ಬದಲಾದ ‘BGMI Lite’: ಬಿಡುಗಡೆಗೂ ಮುನ್ನವೇ 1 ಕೋಟಿಗೂ ಅಧಿಕ ಪ್ರಿ-ರಿಜಿಸ್ಟ್ರೇಷನ್ ದಾಖಲೆ!

admin by admin
October 16, 2026
in National, Newsbeat, ದೇಶ - ವಿದೇಶ
saakshatv-bgmi-air-krafton-india-1-crore-pre-registrations

saakshatv-bgmi-air-krafton-india-1-crore-pre-registrations

Share on FacebookShare on TwitterShare on WhatsappShare on Telegram

ಬೆಂಗಳೂರು: ಪ್ರಸಿದ್ಧ ಗೇಮಿಂಗ್ ಕಂಪನಿ ಕ್ರಾಫ್ಟನ್ ಇಂಡಿಯಾ ತನ್ನ ಮುಂಬರುವ ಮೊಬೈಲ್ ಗೇಮ್ ‘ಬಿಜಿಎಂಐ ಲೈಟ್’ ಹೆಸರನ್ನು ‘ಬಿಜಿಎಂಐ ಏರ್’ ಎಂದು ಅಧಿಕೃತವಾಗಿ ಬದಲಾಯಿಸಿದೆ. ಭಾರತದಲ್ಲಿ ಈ ಗೇಮ್‌ನ ಬಿಡುಗಡೆಗೂ ಮುನ್ನವೇ ಬರೋಬ್ಬರಿ 1 ಕೋಟಿಗೂ ಅಧಿಕ ಗೇಮರ್‌ಗಳು ಪ್ರಿ-ರಿಜಿಸ್ಟ್ರೇಷನ್ ಮಾಡಿಕೊಂಡಿದ್ದು, ಹೊಸ ಮೈಲಿಗಲ್ಲು ತಲುಪಿದೆ.

ಕಡಿಮೆ ಸ್ಟೋರೇಜ್ ಸಾಮರ್ಥ್ಯವಿರುವ ಸ್ಮಾರ್ಟ್‌ಫೋನ್‌ಗಳಲ್ಲೂ ಸುಲಲಿತವಾಗಿ ಗೇಮ್ ಆಡಲು ಅನುಕೂಲವಾಗುವಂತೆ ಈ ಲೈಟ್ ಆವೃತ್ತಿಯನ್ನು ಪರಿಚಯಿಸಲಾಗುತ್ತಿದೆ. ಮೂಲ ಬಿಜಿಎಂಐ ಗೇಮ್‌ನ ಆಕರ್ಷಣೆ ಮತ್ತು ರೋಚಕತೆಯನ್ನು ಉಳಿಸಿಕೊಂಡೇ, ಮೊಬೈಲ್‌ನಲ್ಲಿ ಕಡಿಮೆ ಜಾಗವನ್ನು ತೆಗೆದುಕೊಳ್ಳುವಂತೆ ‘ಬಿಜಿಎಂಐ ಏರ್’ ಅನ್ನು ವಿನ್ಯಾಸಗೊಳಿಸಲಾಗಿದೆ.

Related posts

ಜಿಯೋ ಐಪಿಒ ಬಗ್ಗೆ ವಿಶ್ಲೇಷಕರು ಪಾಸಿಟಿವ್; ಲಿಸ್ಟಿಂಗ್‌ನಲ್ಲಿ ಶೇ 15-20ರಷ್ಟು ಲಾಭದ ನಿರೀಕ್ಷೆ

October 16, 2026
saakshatv-bengaluru-vancouver-airports-sister-airport-agreement-direct-flights

ಕೆನಡಾದ ವ್ಯಾಂಕೋವರ್ – ಬೆಂಗಳೂರು ಏರ್‌ಪೋರ್ಟ್‌ಗಳ ನಡುವೆ ಐತಿಹಾಸಿಕ ಒಪ್ಪಂದ, ನೇರ ವಿಮಾನ ಸೇವೆಗೆ ಭದ್ರ ಬುನಾದಿ!

October 16, 2026

ಗೇಮ್‌ನ ಪ್ರಮುಖ ಅಂಶಗಳು

ಕಳೆದ ಆಗಸ್ಟ್ 25, 2026 ರಂದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಂಡ್ರಾಯ್ಡ್ ಬಳಕೆದಾರರಿಗಾಗಿ ಇದರ ಪ್ರಿ-ರಿಜಿಸ್ಟ್ರೇಷನ್ ಆರಂಭಿಸಲಾಗಿತ್ತು. ಈ ಗೇಮ್‌ನ ಆರಂಭಿಕ ಡೌನ್‌ಲೋಡ್ ಗಾತ್ರವು ಕೇವಲ ಅಂದಾಜು 1ಜಿಬಿ ಇರಲಿದೆ. ಇದು ಮೊಬೈಲ್‌ನ ಮೆಮೊರಿ ಉಳಿಸಲು ಸಹಕಾರಿಯಾಗಿದೆ.

ಬಳಕೆದಾರರ ಪ್ರತಿಕ್ರಿಯೆಗಳನ್ನು ಪಡೆದು ಗೇಮ್ ಅನ್ನು ಮತ್ತಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಶೀಘ್ರದಲ್ಲೇ ‘ಓಪನ್ ಬೀಟಾ’ ಆವೃತ್ತಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.

ಈಗಾಗಲೇ ಮೂಲ ಬಿಜಿಎಂಐ ಗೇಮ್ ಆಡುತ್ತಿರುವವರು ಗಮನಿಸಬೇಕಾದ ಮುಖ್ಯ ಅಂಶವೆಂದರೆ, ‘ಬಿಜಿಎಂಐ ಏರ್’ ಆಡಲು ತಮ್ಮ ಹಳೆಯ ಅಕೌಂಟ್ ಅನ್ನು ಟ್ರಾನ್ಸ್‌ಫರ್ ಮಾಡುವ ಅಗತ್ಯವಿಲ್ಲ. ಹಳೆಯ ಅಕೌಂಟ್ ಅನ್ನು ಬದಲಾಯಿಸದೆಯೇ, ಸಂಪೂರ್ಣವಾಗಿ ಪ್ರತ್ಯೇಕವಾಗಿ ಈ ಹೊಸ ‘ಬಿಜಿಎಂಐ ಏರ್’ ಗೇಮ್ ಅನ್ನು ಆಡಬಹುದು.

ಗೇಮ್ ಬಿಡುಗಡೆಯ ದಿನಾಂಕ ಮತ್ತು ಮುಂದಿನ ಅಪ್‌ಡೇಟ್‌ಗಳನ್ನು ‘ಬಿಜಿಎಂಐ ಏರ್’ನ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್ ಹಾಗೂ ಇತರೆ ಅಧಿಕೃತ ವಾಹಿನಿಗಳ ಮೂಲಕ ಹಂಚಿಕೊಳ್ಳಲಾಗುವುದು ಎಂದು ಕ್ರಾಫ್ಟನ್ ಹೇಳಿದೆ.

ದಕ್ಷಿಣ ಕೊರಿಯಾ ಮೂಲದ ಕ್ರಾಫ್ಟನ್, ಜಾಗತಿಕ ಮಟ್ಟದ ಪ್ರಮುಖ ಗೇಮ್ ಡೆವಲಪರ್ ಕಂಪನಿಯಾಗಿದೆ.
ಭಾರತದಲ್ಲಿ ಬಿಜಿಎಂಐ ಮೂಲಕ ಭಾರಿ ಜನಪ್ರಿಯತೆ ಗಳಿಸಿರುವ ಕಂಪನಿ, ಈವರೆಗೆ 26 ಕೋಟಿಗೂ ಅಧಿಕ ಡೌನ್‌ಲೋಡ್ ದಾಖಲಿಸಿದೆ. ಕೇವಲ ಗೇಮ್ ಬಿಡುಗಡೆಗೆ ಸೀಮಿತವಾಗದೆ, 2021 ರಿಂದ ಭಾರತದ ಗೇಮಿಂಗ್, ಇ-ಸ್ಪೋರ್ಟ್ಸ್ ಮತ್ತು ಟೆಕ್ ಸ್ಟಾರ್ಟ್‌ಅಪ್‌ಗಳಲ್ಲಿ 250 ಮಿಲಿಯನ್ ಡಾಲರ್‌ಗೂ ಹೆಚ್ಚು ಹೂಡಿಕೆ ಮಾಡಿದೆ.

ಭಾರತದ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಲು 6,000 ಕೋಟಿ ರೂ. ಮೊತ್ತದ ‘ಕ್ರಾಫ್ಟನ್ ಇಂಡಿಯಾ ಯುನಿಕಾರ್ನ್ ಗ್ರೋಥ್ ಫಂಡ್’ ಅನ್ನು ಸ್ಥಾಪಿಸಿದೆ. ಅಲ್ಲದೆ, ದೇಶದ ಹೊಸ ಗೇಮ್ ಡೆವಲಪರ್‌ಗಳಿಗೆ ಆರ್ಥಿಕ ನೆರವು ಮತ್ತು ಮಾರ್ಗದರ್ಶನ ನೀಡಲು ಕ್ಯಾಫ್ಟನ್‌ ಇಂಡಿಯಾ ಗೇಮಿಂಗ್‌ ಇನ್‌ಕ್ಯೂಬೇಟರ್‌ (KIGI) ಕಾರ್ಯಕ್ರಮವನ್ನು ಸಹ ನಡೆಸುತ್ತಿದೆ. ಇತ್ತೀಚೆಗಷ್ಟೇ ಮದ್ರಾಸ್ ಐಐಟಿ ಜೊತೆಗೂಡಿ ಹೊಸ ಪ್ರತಿಭೆಗಳನ್ನು ಬೆಳೆಸಲು ‘ಕಿಜಿ ಅಕಾಡೆಮಿ’ಯನ್ನೂ ಆರಂಭಿಸಿದೆ.

ShareTweetSendShare
Join us on:

Related Posts

ಜಿಯೋ ಐಪಿಒ ಬಗ್ಗೆ ವಿಶ್ಲೇಷಕರು ಪಾಸಿಟಿವ್; ಲಿಸ್ಟಿಂಗ್‌ನಲ್ಲಿ ಶೇ 15-20ರಷ್ಟು ಲಾಭದ ನಿರೀಕ್ಷೆ

by admin
October 16, 2026
0

ಮುಂಬೈ,: ಜಿಯೋ ಪ್ಲಾಟ್‌ಫಾರ್ಮ್ಸ್‌ನ ಪ್ರೈಸ್ ಬ್ಯಾಂಡ್ (ಬೆಲೆ ಶ್ರೇಣಿ) ಪ್ರಕಟವಾದ ನಂತರ ವಿಶ್ಲೇಷಕರ ಅಭಿಪ್ರಾಯಗಳು ಬಹುತೇಕ ಉತ್ಸಾಹದಿಂದ ಕೂಡಿದೆ. ಹಲವು ವರದಿಗಳು ಐಪಿಒಗೆ ಧನಾತ್ಮಕ ಮೌಲ್ಯಮಾಪನ ನೀಡಿವೆ....

saakshatv-bengaluru-vancouver-airports-sister-airport-agreement-direct-flights

ಕೆನಡಾದ ವ್ಯಾಂಕೋವರ್ – ಬೆಂಗಳೂರು ಏರ್‌ಪೋರ್ಟ್‌ಗಳ ನಡುವೆ ಐತಿಹಾಸಿಕ ಒಪ್ಪಂದ, ನೇರ ವಿಮಾನ ಸೇವೆಗೆ ಭದ್ರ ಬುನಾದಿ!

by admin
October 16, 2026
0

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬಿಎಲ್‌ಆರ್‌) ಮತ್ತು ಕೆನಡಾದ ವ್ಯಾಂಕೋವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ವೈವಿಆರ್‌) ನಡುವೆ ಐತಿಹಾಸಿಕ 'ಸಿಸ್ಟರ್ ಏರ್‌ಪೋರ್ಟ್' ಒಪ್ಪಂದಕ್ಕೆ ಸಹಿ ಹಾಕಲಾಗಿದೆ....

ಚುನಾವಣಾ ಆಯುಕ್ತರ ವಿರುದ್ಧದ ಹೋರಾಟವೇ ಮುಳುವಾಯಿತೇ? ರಾಜಕೀಯ ಪ್ರತಿಭಟನೆಯಲ್ಲಿ ಭಾಗಿಯಾದ ಅಮೆರಿಕ ಪ್ರಜೆ:ಅಕ್ಟೋಬರ್ 28ರ ಒಳಗೆ ಭಾರತ ಬಿಟ್ಟು ತೊಲಗಿ ಬಾಲಿವುಡ್ ನಟ ಇಮ್ರಾನ್ ಖಾನ್‌ಗೆ ಮುಂಬೈ ಪೊಲೀಸರ ಖಡಕ್ ಡೆಡ್‌ಲೈನ್

ಚುನಾವಣಾ ಆಯುಕ್ತರ ವಿರುದ್ಧದ ಹೋರಾಟವೇ ಮುಳುವಾಯಿತೇ? ರಾಜಕೀಯ ಪ್ರತಿಭಟನೆಯಲ್ಲಿ ಭಾಗಿಯಾದ ಅಮೆರಿಕ ಪ್ರಜೆ:ಅಕ್ಟೋಬರ್ 28ರ ಒಳಗೆ ಭಾರತ ಬಿಟ್ಟು ತೊಲಗಿ ಬಾಲಿವುಡ್ ನಟ ಇಮ್ರಾನ್ ಖಾನ್‌ಗೆ ಮುಂಬೈ ಪೊಲೀಸರ ಖಡಕ್ ಡೆಡ್‌ಲೈನ್

by Shwetha
October 16, 2026
0

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಹಾಗೂ ಸೂಪರ್ ಸ್ಟಾರ್ ಆಮಿರ್ ಖಾನ್ ಅವರ ಸೋದರಳಿಯ ಇಮ್ರಾನ್ ಖಾನ್ ಅವರಿಗೆ ಮುಂಬೈ ಪೊಲೀಸರು ಗಡಿಪಾರು ನೋಟಿಸ್ ಜಾರಿ ಮಾಡಿದ್ದಾರೆ....

ಕನ್ನಡದ ಪ್ರೇಮದ ಊರಲಿ ಬಿಟ್ಟು ತೆಲುಗು ನಟರ ಬೆನ್ನತ್ತಿದ್ರಾ ಅನುಶ್ರೀ: ನಮ್ಮ ಸಿನಿಮಾಗಳು ನಿಮಗೆ ಕಾಣಿಸುವುದಿಲ್ಲವೇ?ರಶ್ಮಿಕಾ ವಿಜಯ್ ಸಂದರ್ಶನಕ್ಕೆ ನೆಟ್ಟಿಗರ ಕಿಡಿ

ಕನ್ನಡದ ಪ್ರೇಮದ ಊರಲಿ ಬಿಟ್ಟು ತೆಲುಗು ನಟರ ಬೆನ್ನತ್ತಿದ್ರಾ ಅನುಶ್ರೀ: ನಮ್ಮ ಸಿನಿಮಾಗಳು ನಿಮಗೆ ಕಾಣಿಸುವುದಿಲ್ಲವೇ?ರಶ್ಮಿಕಾ ವಿಜಯ್ ಸಂದರ್ಶನಕ್ಕೆ ನೆಟ್ಟಿಗರ ಕಿಡಿ

by Shwetha
October 16, 2026
0

ಕನ್ನಡದ ಜನಪ್ರಿಯ ನಿರೂಪಕಿ ಆಂಕರ್ ಅನುಶ್ರೀ ಅವರು ಸುದೀರ್ಘ ವಿರಾಮದ ನಂತರ ತಮ್ಮ ಯೂಟ್ಯೂಬ್ ಚಾನಲ್ ಗೆ ಮರಳಿದ್ದಾರೆ. ಆದರೆ ಈ ಪುನರಾಗಮನವು ಅವರಿಗೆ ಶುಭ ಸುದ್ದಿಗಿಂತ...

ಮನೆ ಮುಂದೆ ವಾಹನ ನಿಲ್ಲಿಸಲೂ ಶುಲ್ಕ? ಜಿಬಿಎ ಪಾರ್ಕಿಂಗ್ ಪ್ರಸ್ತಾವನೆಗೆ ತಾತ್ಕಾಲಿಕ ತಡೆ

ಮನೆ ಮುಂದೆ ವಾಹನ ನಿಲ್ಲಿಸಲೂ ಶುಲ್ಕ? ಜಿಬಿಎ ಪಾರ್ಕಿಂಗ್ ಪ್ರಸ್ತಾವನೆಗೆ ತಾತ್ಕಾಲಿಕ ತಡೆ

by Shwetha
October 16, 2026
0

ನಗರದ ಮನೆಗಳ ಮುಂದೆ ಕಾರು ಅಥವಾ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದಕ್ಕೂ ಶುಲ್ಕ ವಿಧಿಸುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಪ್ರಸ್ತಾವನೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ,...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram