51ನೇ ವಸಂತಕ್ಕೆ ಕಾಲಿಟ್ಟ ಜಗದ್ಗುರು ಡಾ|| ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ
ರಾಮನಗರ : ಇಂದು ಪುರಾಣ ಪ್ರಸಿದ್ಧ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಾಥ ಪರಂಪರೆಯ 72ನೇ ಪೀಠಾಧ್ಯಕ್ಷರಾದ ಜಗದ್ಗುರು ಡಾ|| ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಜನುಮ ದಿನ. 51 ನೇ ವಸಂತಕ್ಕೆ ಕಾಲಿಡುತ್ತಿರುವ ಶ್ರೀಗಳಿಗೆ ಶುಭಾಶಯಗಳ ಮಹಾ ಪೂರವೇ ಹರಿದು ಬರುತ್ತಿದೆ.
1969 ಜುಲೈ 20 ಜನಿಸಿದ ಶ್ರೀಗಳು, ಪೂರ್ವ ಶ್ರಮದಲ್ಲಿ ನಾಗರಾಜು ಎಂಬ ಹೆಸರಿನಿಂದ ಐಐಟಿಯಲ್ಲಿ
ಎಂ ಟೆಕ್ ಪದವಿ ಪಡೆದಿದ್ದಾರೆ. ಇವರಿಗೆ 1994-95 ರಲ್ಲಿ ಚಿಕ್ಕಬಳ್ಳಾಪುರ ಶಾಖಾ ಮಠದ ಪೀಠಾಧ್ಯಕ್ಷರಾಗುವ ವೇಳೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಎಂದು ನಾಮಕರಣ ಮಾಡಲಾಯಿತು.
ಇವರನ್ನು ಪರಮಪೂಜ್ಯ ಭೈರವೈಕ್ಯ ಶ್ರಿ ಶ್ರೀ ಶ್ರಿ ಬಾಲಗಂಗಾಧರನಾಥ ಸ್ವಾಮೀಜಿಗಳ ಅಣತಿಯಂತೆ 14 ಜನವರಿ 2013ರಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನದ ಮಠದ ನೂತನ ಉತ್ತರಾಧಿಕಾರಿಗಳನ್ನಾಗಿ ನೇಮಕ ಮಾಡಲಾಯಿತು. ಅಂದಿನಿಂದ ಶ್ರೀಗಳು ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ನಿರಂತರವಾಗಿ ಸಮಾಜದ ಏಳಿಗಾಗಿ ಶ್ರಮಿಸುತ್ತಿದ್ದಾರೆ.








