ADVERTISEMENT
Wednesday, October 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

31 ಲಕ್ಷ ಬೋಗಸ್‌ ಮತದಾರರ ಗುರುತಿನ ಚೀಟಿ ಮುದ್ರಣ, ಎಸ್‌ಐಆರ್ ಬಗ್ಗೆ ಗೊತ್ತಿದ್ದರೂ ಟೆಂಡರ್‌ ಕರೆಯಲಾಗಿದೆ, ಸರ್ಕಾರದಿಂದ ₹20 ಕೋಟಿ ಬೃಹತ್ ಹಗರಣ: ಪ್ರತಿಪಕ್ಷ ನಾಯಕ ಆರ್.ಅಶೋಕ

admin by admin
October 28, 2026
in Newsbeat, State, ರಾಜ್ಯ
r-ashoka-alleges-20-crore-voter-id-scam-31-lakh-duplicate-cards-karnataka

r-ashoka-alleges-20-crore-voter-id-scam-31-lakh-duplicate-cards-karnataka

Share on FacebookShare on TwitterShare on WhatsappShare on Telegram

ಜಿಬಿಎ ಚುನಾವಣೆಯಲ್ಲಿ ವೋಟ್‌ ಚೋರಿ ಮಾಡಲು ಕಾಂಗ್ರೆಸ್‌ ಪ್ಲಾನ್‌, ತಪ್ಪಿಲ್ಲದಿದ್ದರೆ ಕೂಡಲೇ ಗುರುತಿನ ಚೀಟಿ ವಿತರಿಸಲಿ

ಬೆಂಗಳೂರು, ಎಸ್‌ಐಆರ್‌ ನಡೆಯಲಿದೆ ಎಂದು ಗೊತ್ತಿದ್ದರೂ ರಾಜ್ಯ ಚುನಾವಣಾ ಆಯೋಗದಿಂದ 90 ಲಕ್ಷ ಮತದಾರರ ಗುರುತಿನ ಚೀಟಿಗಳನ್ನು ಮುದ್ರಿಸಿ 20 ಕೋಟಿ ರೂ. ಹಗರಣ ನಡೆಸಲಾಗಿದೆ. ಇದರಲ್ಲಿ ಕಾಂಗ್ರೆಸ್‌ ಸರ್ಕಾರ ಭಾಗಿಯಾಗಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ.

Related posts

km-suresh-nda-victory-south-east-graduates-constituency-karnataka-legislative-council

ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶ್ರೀ ಕೆ.ಎಂ. ಸುರೇಶ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

October 28, 2026
parks-land-use-bill-withdrawn-bjp-victory-r-ashoka-seven-day-assembly

ಬಿಜೆಪಿ–ಜೆಡಿಎಸ್‌ ಒಗ್ಗಟ್ಟು 2028ರ ಚುನಾವಣೆಯಲ್ಲೂ ಮುಂದುವರಿಯಲಿದೆ, 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

October 28, 2026

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಚುನಾವಣಾ ಆಯೋಗದ ಮೂಲಕ ಸರ್ಕಾರ ನಡೆಸಿರುವ ಹಗರಣ, ಟೆಂಡರ್‌ ದಾಖಲೆಗಳನ್ನು ಅವರು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಮೂರೂವರೆ ವರ್ಷಗಳಿಂದ ಕಾಂಗ್ರೆಸ್‌ ಸರ್ಕಾರ ಸರಣಿಯಂತೆ ಹಗರಣಗಳನ್ನು ಮಾಡುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಅಬಕಾರಿ ಸೇರಿದಂತೆ ಹಲವಾರು ಅಕ್ರಮಗಳು ನಡೆದಿವೆ. ಬೆಂಗಳೂರಿನ ಕಸ ಹಗರಣಕ್ಕೆ ಸಂಬಂಧಿಸಿದಂತೆ ನಾನು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವುದರ ಬದಲು ಕಾಂಗ್ರೆಸ್‌ ನಾಯಕರು ದೆಹಲಿಗೆ ಹೋಗಿ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಉತ್ಸವ ಮಾಡಲು ಮುಂದಾಗಿದ್ದಾರೆ. ಇವರು ಎಸ್‌ಐಆರ್‌ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದರೆ, ರಾಜ್ಯದಲ್ಲಿ ಚುನಾವಣಾ ಆಯೋಗದ ಮೂಲಕ ಕಾಂಗ್ರೆಸ್‌ ಸರ್ಕಾರ 20 ಕೋಟಿ ರೂ. ಮೊತ್ತದ ಹಗರಣ ನಡೆಸಿದೆ ಎಂದರು.

ಗುರುತಿನ ಚೀಟಿ ಮುದ್ರಣ

ಬೆಂಗಳೂರಿನ ಮತದಾರರಿಗೆ ಎಸ್‌ವಿಐಸಿ ಕಾರ್ಡ್‌ ಎಂದರೆ ಮತದದಾರರ ಗುರುತಿನ ಚೀಟಿ ನೀಡಲು ರಾಜ್ಯ ಚುನಾವಣಾ ಆಯೋಗದಿಂದ ಕ್ರಮ ವಹಿಸಲಾಗಿದೆ. 90 ಲಕ್ಷ ಕಾರ್ಡ್‌ ಮುದ್ರಿಸಲು ಒಂದೇ ಟೆಂಡರ್‌ ಕರೆಯಲಾಗಿದೆ. ಆದರೆ ಆರ್ಥಿಕ ಇಲಾಖೆಯ ಎಲ್ಲ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಪ್ರತಿ ಮನೆಗೆ ಹೋಗಿ ಮಾಹಿತಿ ಸಂಗ್ರಹಿಸಿ, ಫೋಟೋ ಸೆರೆಹಿಡಿದು ನಂತರ ಮುದ್ರಣ ಮಾಡಬೇಕು. ಆದರೆ ಎಲ್ಲಿಗೂ ಹೋಗದೆ ಲೋಕಸಭಾ ಚುನಾವಣೆಯ ಮತದಾರರ ಪಟ್ಟಿಯನ್ನು ಆಧರಿಸಲಾಗಿದೆ. 2026 ರ ಮೇ 14 ರಂದು ಕೇಂದ್ರ ಚುನಾವಣಾ ಆಯೋಗದಿಂದ ಎಸ್‌ಐಆರ್‌ ಮಾಡಲಾಗುವುದು ಎಂದು ಆದೇಶ ನೀಡಲಾಗಿತ್ತು. ಆದರೆ ಮೇ 15 ರಂದು ರಾಜ್ಯ ಚುನಾವಣಾ ಆಯೋಗದಿಂದ ಟೆಂಡರ್‌ ಕರೆಯಲಾಗಿದೆ. ಮೇ 29 ರಂದು ಕಾರ್ಯಾದೇಶ ನೀಡಲಾಗಿದೆ. ಇದೇ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್‌ ಸಲ್ಲಿಸಿದ್ದು, ಎಸ್‌ಐಆರ್‌ ಬಳಿಕ ಮತದಾರರ ಹೊಸ ಪಟ್ಟಿ ಬಂದ ಬಳಿಕ ಸ್ಥಳೀಯ ಚುನಾವಣೆ ನಡೆಸುತ್ತೇವೆ ಎಂದು ಹೇಳಲಾಗಿದೆ ಎಂದರು.

ಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿಯಿಂದಲೇ ಚುನಾವಣೆ ನಡೆಯುವಾಗ, ರಾಜ್ಯ ಚುನಾವಣಾ ಆಯೋಗದಿಂದ ಪ್ರತ್ಯೇಕವಾಗಿ ಹೊಸ ಕಾರ್ಡ್‌ಗಳನ್ನು ಮುದ್ರಿಸಲಾಗಿದೆ. ಬೆಂಗಳೂರಿನಲ್ಲಿ ಎಸ್‌ಐಆರ್‌ ನಂತರ ಒಟ್ಟು 59,09,775 ಮತದಾರರಿದ್ದಾರೆ. ವಿಳಾಸ ಬದಲಾದವರ, ಸ್ಥಳಾಂತರಗೊಂಡವರ ಹೆಸರ ತೆಗೆದುಹಾಕಲಾಗಿದೆ. ಆದರೆ ರಾಜ್ಯ ಚುನಾವಣಾ ಆಯೋಗದಿಂದ 90 ಲಕ್ಷ ಗುರುತಿನ ಚೀಟಿ ಮುದ್ರಿಸಲಾಗಿದೆ ಎಂದರೆ, ಇದರಲ್ಲಿ ಹಗರಣ ನಡೆದಿರುವುದು ಖಚಿತವಾಗಿದೆ. ಈ ಕಾರ್ಡ್‌ಗಳನ್ನು ಈಗ ಯಾರಿಗೆ ವಿತರಣೆ ಮಾಡಲಾಗುತ್ತದೆ? ಮುದ್ರಣವಾಗಿ ಇಷ್ಟು ದಿನಗಳಾದರೂ ಯಾಕೆ ವಿತರಣೆ ಮಾಡಿಲ್ಲ? ಇದಕ್ಕೆ 20 ಕೋಟಿ ರೂ. ಹಣ ಖರ್ಚು ಮಾಡಲಾಗಿದೆ. ಈ ಹಣ ಪೂರ್ತಿಯಾಗಿ ವ್ಯರ್ಥವಾಗಿದೆ ಎಂದರು.

31 ಲಕ್ಷ ಬೋಗಸ್‌ ಕಾರ್ಡ್‌, ವೋಟ್‌ ಚೋರಿ

ವೋಟ್‌ ಚೋರಿ ಎನ್ನುವ ರಾಹುಲ್‌ ಗಾಂಧಿಯವರೇ ಈಗ ಬೆಂಗಳೂರಿಗೆ ಬಂದು ಹೊಸ ಕಾರ್ಡ್‌ಗಳನ್ನು ವಿತರಣೆ ಮಾಡಬೇಕು. ಏಕೆಂದರೆ ಬೆಂಗಳೂರಿನಲ್ಲಿ ವಾಸ್ತವದಲ್ಲಿ 59 ಲಕ್ಷ ಮತದಾರರಿದ್ದರೆ, ರಾಜ್ಯ ಚುನಾವಣಾ ಆಯೋಗದಿಂದ 90 ಲಕ್ಷ ಕಾರ್ಡ್‌ ಮುದ್ರಿಸಲಾಗಿದೆ. ಇದು ಅತಿ ದೊಡ್ಡ ಹಗರಣವಾಗಿದ್ದು, ಸರ್ಕಾರದಿಂದ ಇದಕ್ಕೆ ಉತ್ತರ ನೀಡಬೇಕು. ಅಂದರೆ ವೋಟ್‌ ಚೋರಿಗೆ ಹಾಗೂ 31 ಲಕ್ಷ ಜನರಿಗೆ ಬೋಗಸ್‌ ಕಾರ್ಡ್‌ ನೀಡಲು ಕಾಂಗ್ರೆಸ್‌ ಕಾರಣವಾಗಿದೆ. 31 ಲಕ್ಷ ಮತದಾರರು ಎಲ್ಲಿದ್ದಾರೆ ಎಂಬುದನ್ನು ಈಗ ಸರ್ಕಾರ ಪತ್ತೆ ಮಾಡಬೇಕಿದೆ ಎಂದು ಆಗ್ರಹಿಸಿದರು.

ಆದ್ದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು. 31 ಲಕ್ಷ ಜನರ ಬೋಗಸ್‌ ಕಾರ್ಡ್‌ಗಳನ್ನು ಏಕೆ ಮುದ್ರಿಸಲಾಗಿದೆ ಎಂದು ಎಲ್ಲರಿಗೂ ತಿಳಿಯಬೇಕಿದೆ. ಎಸ್‌ಐಆರ್‌ ಮುಗಿದಿರುವುದರಿಂದ ಕೇಂದ್ರ ಚುನಾವಣಾ ಆಯೋಗದಿಂದ ಹೊಸ ಕಾರ್ಡ್‌ ನೀಡಲಾಗುತ್ತದೆ. ಜಿಬಿಎ ಚುನಾವಣೆಯಲ್ಲಿ ಅಕ್ರಮ ಮಾಡಲು ಕಾಂಗ್ರೆಸ್‌ ಸರ್ಕಾರ ಇದನ್ನು ಮಾಡಿಸಿದೆ. ಒಂದು ವೇಳೆ ತಪ್ಪಿಲ್ಲವಾದರೆ ಸರ್ಕಾರದಿಂದ ಈ ಗುರುತಿನ ಚೀಟಿಗಳನ್ನು ಕೂಡಲೇ ವಿತರಣೆ ಮಾಡಬೇಕು ಎಂದರು.

ಕೇಂದ್ರ ಸಚಿವ ಅಮಿತ್‌ ಶಾ ಅವರು ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಸ್ಟಿಂಗ್‌ ಆಪರೇಶನ್‌ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿಗೆ ಅನ್ಯಾಯವಾಗಿದ್ದು, ಅದರ ಬಗ್ಗೆ ಸರಿಯಾಗಿ ತನಿಖೆ ನಡೆಯಬೇಕು. ಕೇವಲ ಹಂಚಿದವರನ್ನು ಅಲ್ಲ, ವೀಡಿಯೋ ಮಾಡಿಸಿದವರನ್ನು ಪತ್ತೆ ಮಾಡಬೇಕಿದೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಇದನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದರು.

ಆರ್ಥಿಕ ಇಲಾಖೆ ದಿವಾಳಿ

ಆರ್ಥಿಕ ಇಲಾಖೆ ಸಂಕಷ್ಟದಲ್ಲಿರುವ ಕುರಿತು ಅಧಿವೇಶನದಲ್ಲಿ ನಾನು ಮಾತಾಡಿದ್ದೆ. ಸಾಲದ ಮಿತಿ 3% ಇದ್ದರೆ, 2.95% ಗೆ ತಲುಪಿರುವುದನ್ನು ತೋರಿಸಿದ್ದೆ. ಆದರೆ ನಮ್ಮ ಖಜಾನೆ ತುಂಬಿದೆ ಎಂದು ಸಿಎಂ ಹೇಳಿದ್ದರು. ಈಗ ಕಬ್ಬು ಬೆಳೆಗಾರರ ಜೊತೆ ಸಭೆ ನಡೆಸಿದ ಸಿಎಂ ಡಿ.ಕೆ.ಶಿವಕುಮಾರ್‌ ಖಜಾನೆ ಖಾಲಿಯಾಗಿದೆ, ಹಣವಿಲ್ಲ ಎಂದು ಹೇಳಿದ್ದಾರೆ. ರೈತರಿಗೆ ಪರಿಹಾರ ಕೊಡಲು ಕೂಡ ಈ ಸರ್ಕಾರದ ಬಳಿ ಹಣವಿಲ್ಲ ಎಂದರು.

ಎಲ್ಲ ಕಡೆ ಎನ್‌ಡಿಎ ಗೆದ್ದಿದೆ

ವಿಧಾನಪರಿಷತ್‌ ಚುನಾವಣೆಯಲ್ಲಿ ರಾಜ್ಯದಲ್ಲಿ ನಾಲ್ಕು ಸ್ಥಾನಗಳನ್ನು ಹಾಗೂ ದೇಶದಲ್ಲಿ 28 ಸ್ಥಾನಗಳನ್ನು ಎನ್‌ಡಿಎ ಗೆದ್ದಿದೆ. ಇದು ಬ್ಯಾಲೆಟ್‌ ಕಾಗದದಲ್ಲಿ ಆಗಿರುವ ಚುನಾವಣೆಯಾಗಿದ್ದು, ಅದರಲ್ಲೂ ಬಿಜೆಪಿ ಗೆದ್ದಿದೆ. ಅಂದರೆ ಕಾಂಗ್ರೆಸ್‌ ವೋಟ್‌ ಚೋರಿ ಆರೋಪ ಸುಳ್ಳಾಗಿದ್ದು, ಎಲ್ಲದರಲ್ಲೂ ಕಾಂಗ್ರೆಸ್‌ಗೆ ಸೋಲಾಗಿದೆ. ಸಿಎಂ ಡಿ.ಕೆ.ಶಿವಕುಮಾರ್‌ ಅವರ ಸಾಧನೆ ಶೂನ್ಯ ಎನ್ನುವುದು ಇದರಿಂದ ತಿಳಿದುಬಂದಿದೆ. ಈ ಬಾರಿ ಜೆಡಿಎಸ್‌-ಬಿಜೆಪಿ ಸಮನ್ವಯ ಸಭೆಗಳು ನಡೆದಿದ್ದು, ಜೆಡಿಎಸ್‌ನ ಎಲ್ಲ ಮುಖಂಡರು ಸಂಪೂರ್ಣ ಸಹಕಾರ ನೀಡಿ ಶ್ರಮಿಸಿದ್ದಾರೆ. ಎಲ್ಲರಿಗೂ ಅಭಿನಂದನೆ ತಿಳಿಸುತ್ತೇನೆ ಎಂದರು.

ShareTweetSendShare
Join us on:

Related Posts

km-suresh-nda-victory-south-east-graduates-constituency-karnataka-legislative-council

ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶ್ರೀ ಕೆ.ಎಂ. ಸುರೇಶ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

by admin
October 28, 2026
0

ಈ ಐತಿಹಾಸಿಕ ಗೆಲುವು ಎನ್‌ಡಿಎ ಮೈತ್ರಿಕೂಟದ ಒಗ್ಗಟ್ಟು, ಸಂಘಟನಾ ಶಕ್ತಿ ಹಾಗೂ ಪದವೀಧರ ಮತದಾರರು ನಮ್ಮ ಮೈತ್ರಿಕೂಟದ ಮೇಲೆ ಇಟ್ಟಿರುವ ಅಚಲ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ನಾಲ್ಕು ಕ್ಷೇತ್ರಗಳಲ್ಲಿ...

parks-land-use-bill-withdrawn-bjp-victory-r-ashoka-seven-day-assembly

ಬಿಜೆಪಿ–ಜೆಡಿಎಸ್‌ ಒಗ್ಗಟ್ಟು 2028ರ ಚುನಾವಣೆಯಲ್ಲೂ ಮುಂದುವರಿಯಲಿದೆ, 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
October 28, 2026
0

ಬ್ಯಾಲೆಟ್‌ ಪೇಪರ್‌ನಲ್ಲೂ ಎನ್‌ಡಿಎಗೆ ಗೆಲುವು, ಕಾಂಗ್ರೆಸ್‌ಗೆ ಜನರೇ ತಕ್ಕ ಉತ್ತರ ನೀಡಿದ್ದಾರೆ. ಬೆಂಗಳೂರು, ವಿಧಾನಪರಿಷತ್‌ ನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ಸಾಧಿಸಿರುವ ಗೆಲುವು 2028 ರ...

radisson-purple-palms-resort-spa-madikeri-coorg-karnataka

ಕರ್ನಾಟಕದ ಕಾಶ್ಮೀರ ಕೊಡಗಿಗೆ ಲಗ್ಗೆ ಇಟ್ಟ ‘ರಾಡಿಸನ್’: ಪ್ರವಾಸಿಗರಿಗಾಗಿ ಅತ್ಯಾಧುನಿಕ ‘ಪರ್ಪಲ್ ಪಾಮ್ಸ್ ರೆಸಾರ್ಟ್ ಆಂಡ್ ಸ್ಪಾ’ ಆರಂಭ

by admin
October 28, 2026
0

ಮಂಜಿನ ನಗರಿ, ಕಾಫಿ ನಾಡು ಕೊಡಗಿಗೆ ಪ್ರತಿಷ್ಠಿತ 'ರಾಡಿಸನ್ ಹೋಟೆಲ್ ಗ್ರೂಪ್' ಲಗ್ಗೆ ಇಟ್ಟಿದೆ. 'ರಾಡಿಸನ್ ಇಂಡಿವಿಜುವಲ್ಸ್ ಪ್ರೀಮಿಯರ್' ಬ್ರಾಂಡ್‌ನ ಅಡಿಯಲ್ಲಿ 'ಪರ್ಪಲ್ ಪಾಮ್ಸ್ ರೆಸಾರ್ಟ್ ಆಂಡ್...

mentos-fresh-action-candy-new-tv-advertisement-perfetti-van-melle-india

ಮೆಂಟೋಸ್ ತಿಂದ್ರೆ ಇಂಥಾ ಬಿರುಗಾಳಿ ಏಳುತ್ತಾ? ನಕ್ಕು ನಗಿಸುತ್ತೆ ‘ಫ್ರೆಶ್ ಆಕ್ಷನ್’ ಕ್ಯಾಂಡಿಯ ಹೊಸ ಜಾಹೀರಾತು

by admin
October 28, 2026
0

ಪರ್ಫೆಟ್ಟಿ ವ್ಯಾನ್ ಮೆಲ್ಲೆ ಕಂಪನಿಯ ಜನಪ್ರಿಯ ಬ್ರಾಂಡ್ ಆಗಿರುವ 'ಮೆಂಟೋಸ್' ಸದಾ ತನ್ನ ವಿಭಿನ್ನ ಹಾಗೂ ಹಾಸ್ಯಭರಿತ ಜಾಹೀರಾತುಗಳಿಗೆ ಹೆಸರುವಾಸಿ. ಇದೀಗ ಮಾರುಕಟ್ಟೆಗೆ ಹೊಸದಾಗಿ ಲಗ್ಗೆ ಇಟ್ಟಿರುವ...

jio-platforms-blockbuster-listing-reliance-becomes-indias-most-valuable-business-group-2026

ಸ್ಟಾಕ್‌ ಮಾರುಕಟ್ಟೆಗೆ ಜಿಯೋ ಬ್ಲಾಕ್‌ಬಸ್ಟರ್ ಪದಾರ್ಪಣೆ: ಭಾರತದ ಅತ್ಯಂತ ಮೌಲ್ಯಯುತ ಉದ್ಯಮ ಸಮೂಹವಾದ ರಿಲಯನ್ಸ್!

by admin
October 28, 2026
0

  * ದ್ವಿತೀಯ ಸ್ಥಾನಕ್ಕೆ ಸರಿದ ಟಾಟಾ ಗ್ರೂಪ್; ಮೂರನೇ ಸ್ಥಾನದಲ್ಲಿ ಅದಾನಿ ಗ್ರೂಪ್ * ರಿಲಯನ್ಸ್ ಸಮೂಹದ ಒಟ್ಟು ಮಾರುಕಟ್ಟೆ ಮೌಲ್ಯ ₹28.9 ಲಕ್ಷ ಕೋಟಿಗೆ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram