ADVERTISEMENT
Wednesday, October 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಸ್ಟಾಕ್‌ ಮಾರುಕಟ್ಟೆಗೆ ಜಿಯೋ ಬ್ಲಾಕ್‌ಬಸ್ಟರ್ ಪದಾರ್ಪಣೆ: ಭಾರತದ ಅತ್ಯಂತ ಮೌಲ್ಯಯುತ ಉದ್ಯಮ ಸಮೂಹವಾದ ರಿಲಯನ್ಸ್!

admin by admin
October 28, 2026
in National, Newsbeat, ದೇಶ - ವಿದೇಶ
jio-platforms-blockbuster-listing-reliance-becomes-indias-most-valuable-business-group-2026

jio-platforms-blockbuster-listing-reliance-becomes-indias-most-valuable-business-group-2026

Share on FacebookShare on TwitterShare on WhatsappShare on Telegram

 

* ದ್ವಿತೀಯ ಸ್ಥಾನಕ್ಕೆ ಸರಿದ ಟಾಟಾ ಗ್ರೂಪ್; ಮೂರನೇ ಸ್ಥಾನದಲ್ಲಿ ಅದಾನಿ ಗ್ರೂಪ್
* ರಿಲಯನ್ಸ್ ಸಮೂಹದ ಒಟ್ಟು ಮಾರುಕಟ್ಟೆ ಮೌಲ್ಯ ₹28.9 ಲಕ್ಷ ಕೋಟಿಗೆ ಏರಿಕೆ (ಟಾಟಾ ಗ್ರೂಪ್‌ಗಿಂತ ₹3.23 ಲಕ್ಷ ಕೋಟಿ ಅಧಿಕ)*
* ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಜಿಯೋ ಪ್ಲಾಟ್‌ಫಾರ್ಮ್ಸ್‌ಗಳ ಜಂಟಿ ಮೌಲ್ಯವೇ ₹28.7 ಲಕ್ಷ ಕೋಟಿ.*

Related posts

mentos-fresh-action-candy-new-tv-advertisement-perfetti-van-melle-india

ಮೆಂಟೋಸ್ ತಿಂದ್ರೆ ಇಂಥಾ ಬಿರುಗಾಳಿ ಏಳುತ್ತಾ? ನಕ್ಕು ನಗಿಸುತ್ತೆ ‘ಫ್ರೆಶ್ ಆಕ್ಷನ್’ ಕ್ಯಾಂಡಿಯ ಹೊಸ ಜಾಹೀರಾತು

October 28, 2026
jio-platforms-ipo-listing-share-price-investors-wealth-rises-2-76-lakh-crore

ಜಿಯೋ ಪ್ಲಾಟ್‌ಫಾರ್ಮ್ಸ್ ಬಂಪರ್ ಲಿಸ್ಟಿಂಗ್: ಮೊದಲ ದಿನವೇ ಹೂಡಿಕೆದಾರರ ಸಂಪತ್ತು ₹2.76 ಲಕ್ಷ ಕೋಟಿ ಹೆಚ್ಚಳ

October 28, 2026

ಮುಂಬಯಿ : ಜಿಯೋ ಪ್ಲಾಟ್‌ಫಾರ್ಮ್ಸ್ ಕಂಪನಿಯ ಅದ್ದೂರಿ ಷೇರು ಮಾರುಕಟ್ಟೆ ಪ್ರವೇಶದೊಂದಿಗೆ ಭಾರತದ ಅತ್ಯಂತ ಮೌಲ್ಯಯುತ ಉದ್ಯಮ ಸಮೂಹಗಳ ಶ್ರೇಯಾಂಕದಲ್ಲೇ ಮಹತ್ತರ ಬದಲಾವಣೆಯಾಗಿದೆ. ಬುಧವಾರದಂದು ಜಿಯೋ ಷೇರುಗಳು ಪ್ರತಿ ಷೇರಿಗೆ ₹1,358 ರಂತೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗುತ್ತಿದ್ದಂತೆ, ರಿಲಯನ್ಸ್ ಸಮೂಹವು ಟಾಟಾ ಗ್ರೂಪ್ ಅನ್ನು ಹಿಂದಿಕ್ಕಿ ಭಾರತದ ಅತ್ಯಂತ ಮೌಲ್ಯಯುತ ಉದ್ಯಮ ಸಮೂಹವಾಗಿ ಹೊರಹೊಮ್ಮಿದೆ.

ಜಿಯೋ ಲಿಸ್ಟಿಂಗ್ ನಂತರ ರಿಲಯನ್ಸ್ ಸಮೂಹದ ನೋಂದಾಯಿತ (ಲಿಸ್ಟೆಡ್) ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯವು ಭರ್ಜರಿ ₹28.9 ಲಕ್ಷ ಕೋಟಿಗೆ ತಲುಪಿದೆ. ಈ ಪಟ್ಟಿಯಲ್ಲಿ ಟಾಟಾ ಗ್ರೂಪ್ ₹25.6 ಲಕ್ಷ ಕೋಟಿ ಮೌಲ್ಯದೊಂದಿಗೆ ಎರಡನೇ ಸ್ಥಾನಕ್ಕೆ ಸರಿದರೆ, ಅದಾನಿ ಗ್ರೂಪ್ ₹16.6 ಲಕ್ಷ ಕೋಟಿ ಮೌಲ್ಯದೊಂದಿಗೆ ಮೂರನೇ ಸ್ಥಾನದಲ್ಲಿದೆ.

ಜಿಯೋ ಐಪಿಒ ಧಮಾಕಾ: 21.4% ಪ್ರೀಮಿಯಂ ಲಿಸ್ಟಿಂಗ್:
ಜಿಯೋ ಮಾರುಕಟ್ಟೆ ಪ್ರವೇಶವು ರಿಲಯನ್ಸ್ ಸಮೂಹದ ಒಟ್ಟು ಮೌಲ್ಯವರ್ಧನೆಗೆ ಬೃಹತ್ ಕೊಡುಗೆ ನೀಡಿದೆ. ಇದರ ಇಶ್ಯೂ ಬೆಲೆ: 1,119 ರುಪಾಯಿಗಳಾಗಿತ್ತು. ಆದರೆ ಲಿಸ್ಟಿಂಗ್ ಬೆಲೆ: 1,358 ರೂ.ಗಳಾಗಿದೆ. (ಶೇ. 21.4 ರಷ್ಟು ಭಾರಿ ಪ್ರೀಮಿಯಂ!) ಇದರೊಂದಿಗೆ ಐಪಿಒದಲ್ಲಿ ಹೂಡಿಕೆ ಮಾಡಿದವರಿಗೆ ಲಿಸ್ಟ್‌ ಸಂದರ್ಭದಲ್ಲಿ ಲಾಭದಾಯಕವಾಗಿದೆ. ಜಿಯೋ ಮಾರುಕಟ್ಟೆ ಬಂಡವಾಳ ಮೌಲ್ಯವು 12.5 ಲಕ್ಷ ಕೋಟಿ ರುಪಾಯಿಗಳಾಗಿದೆ.
ಪ್ರಸ್ತುತ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಜಿಯೋ ಪ್ಲಾಟ್‌ಫಾರ್ಮ್ಸ್ ಎರಡು ಕಂಪನಿಗಳ ಜಂಟಿ ಮೌಲ್ಯವೇ ₹28.7 ಲಕ್ಷ ಕೋಟಿಗೆ ತಲುಪಿದೆ. ಅಷ್ಟೇ ಅಲ್ಲದೆ, 7.98 ಮಿಲಿಯನ್ (ಸುಮಾರು 79.8 ಲಕ್ಷ) ಷೇರುದಾರರೊಂದಿಗೆ ಜಿಯೋ ಪ್ಲಾಟ್‌ಫಾರ್ಮ್ಸ್ ಭಾರತದಲ್ಲೇ ಅತ್ಯಂತ ಹೆಚ್ಚು ಷೇರುದಾರರನ್ನು ಹೊಂದಿದ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮುಂಬಯಿನ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ ಎಸ್‌ಇ) ನಲ್ಲಿ ಸಾಂಪ್ರದಾಯಿಕ ಗಂಟೆ ಬಾರಿಸುವ ಮೂಲಕ ಲಿಸ್ಟಿಂಗ್ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲಾಯಿತು. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ, ನೀತಾ ಅಂಬಾನಿ, ಆಕಾಶ್ ಅಂಬಾನಿ, ಇಶಾ ಅಂಬಾನಿ ಮತ್ತು ಅನಂತ್ ಅಂಬಾನಿ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಲಿಸ್ಟಿಂಗ್‌ಗೂ ಮುನ್ನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಯೋ ಪ್ಲಾಟ್‌ಫಾರ್ಮ್ಸ್ ನ ವ್ಯವಸ್ಥಾಪಕ ನಿರ್ದೇಶಕರಾದ ಆಕಾಶ್ ಅಂಬಾನಿಯವರು, “ಇಂದಿನ ಲಿಸ್ಟಿಂಗ್ ನಮಗೆ ಅಂತಿಮ ಗೆರೆಯಲ್ಲ, ಬದಲಿಗೆ ಹೊಸ ಪಯಣದ ಆರಂಭದ ರೇಖೆಯಾಗಿದೆ. ನಾವು ಮುಕ್ತವಾಗಿ ಸಂವಹನ ನಡೆಸುತ್ತೇವೆ, ನೀಡಿದ ಭರವಸೆಗಳನ್ನು ಬದ್ಧತೆಯಿಂದ ಈಡೇರಿಸುತ್ತೇವೆ ಮತ್ತು ನಮ್ಮ ಕಾರ್ಯಗಳ ಮೂಲಕ ನಿಮ್ಮ ವಿಶ್ವಾಸವನ್ನು ಗಳಿಸುತ್ತೇವೆ,” ಎಂದು ಭರವಸೆ ನೀಡಿದರು.

ಈ ಲಿಸ್ಟಿಂಗ್‌ನ ಮತ್ತೊಂದು ವಿಶೇಷವೆಂದರೆ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಜಿಯೋ ಪ್ಲಾಟ್‌ಫಾರ್ಮ್ಸ್ ಕ್ರಮವಾಗಿ ಭಾರತದ ಮೊದಲನೇ ಮತ್ತು ಎರಡನೇ ಅತ್ಯಂತ ಮೌಲ್ಯಯುತ ನೋಂದಾಯಿತ ಕಂಪನಿಗಳಾಗಿ ಹೊರಹೊಮ್ಮಿವೆ. ಈ ಎರಡು ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯವೇ ಟಾಟಾ ಗ್ರೂಪ್‌ನ ಎಲ್ಲಾ ನೋಂದಾಯಿತ ಕಂಪನಿಗಳ ಒಟ್ಟು ಮೌಲ್ಯಕ್ಕಿಂತ ₹3.1 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ! ಜಿಯೋದ ಈ ಚಾರಿತ್ರಿಕ ಪದಾರ್ಪಣೆಯು ಭಾರತದ ಅತ್ಯಂತ ಮೌಲ್ಯಯುತ ಕಂಪನಿಗಳ ಪಟ್ಟಿಯನ್ನಷ್ಟೇ ಅಲ್ಲದೆ, ದೇಶದ ದೈತ್ಯ ಉದ್ಯಮ ಸಮೂಹಗಳ ಶ್ರೇಯಾಂಕವನ್ನೇ ಸಂಪೂರ್ಣವಾಗಿ ಬದಲಾಯಿಸಿ ಹೊಸ ದಾಖಲೆ ಬರೆದಿದೆ.

ಈ ಹೋಲಿಕೆಯನ್ನು ಪ್ರತಿಯೊಂದು ಉದ್ಯಮ ಸಮೂಹದ ನೋಂದಾಯಿತ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯದ ಆಧಾರದ ಮೇಲೆ ಲೆಕ್ಕಹಾಕಲಾಗಿದೆ. ರಿಲಯನ್ಸ್ ಸಮೂಹದ ಲೆಕ್ಕಾಚಾರದಿಂದ ‘ಜಿಯೋ ಫೈನಾನ್ಶಿಯಲ್ ಸರ್ವಿಸಸ್’ ಅನ್ನು ಹೊರಗಿಡಲಾಗಿದೆ.

ShareTweetSendShare
Join us on:

Related Posts

mentos-fresh-action-candy-new-tv-advertisement-perfetti-van-melle-india

ಮೆಂಟೋಸ್ ತಿಂದ್ರೆ ಇಂಥಾ ಬಿರುಗಾಳಿ ಏಳುತ್ತಾ? ನಕ್ಕು ನಗಿಸುತ್ತೆ ‘ಫ್ರೆಶ್ ಆಕ್ಷನ್’ ಕ್ಯಾಂಡಿಯ ಹೊಸ ಜಾಹೀರಾತು

by admin
October 28, 2026
0

ಪರ್ಫೆಟ್ಟಿ ವ್ಯಾನ್ ಮೆಲ್ಲೆ ಕಂಪನಿಯ ಜನಪ್ರಿಯ ಬ್ರಾಂಡ್ ಆಗಿರುವ 'ಮೆಂಟೋಸ್' ಸದಾ ತನ್ನ ವಿಭಿನ್ನ ಹಾಗೂ ಹಾಸ್ಯಭರಿತ ಜಾಹೀರಾತುಗಳಿಗೆ ಹೆಸರುವಾಸಿ. ಇದೀಗ ಮಾರುಕಟ್ಟೆಗೆ ಹೊಸದಾಗಿ ಲಗ್ಗೆ ಇಟ್ಟಿರುವ...

jio-platforms-ipo-listing-share-price-investors-wealth-rises-2-76-lakh-crore

ಜಿಯೋ ಪ್ಲಾಟ್‌ಫಾರ್ಮ್ಸ್ ಬಂಪರ್ ಲಿಸ್ಟಿಂಗ್: ಮೊದಲ ದಿನವೇ ಹೂಡಿಕೆದಾರರ ಸಂಪತ್ತು ₹2.76 ಲಕ್ಷ ಕೋಟಿ ಹೆಚ್ಚಳ

by admin
October 28, 2026
0

ಮುಂಬೈ, -  ಷೇರು ಮಾರುಕಟ್ಟೆಯಲ್ಲಿ ಈ ಬಾರಿ ದೀಪಾವಳಿ ಅಕ್ಟೋಬರ್ ನಲ್ಲಿಯೇ ಬಂದಂಥ ಸಂಭ್ರಮ ಕಂಡುಬಂದಿದೆ. ಲಿಸ್ಟಿಂಗ್ ಆದ ಮೊದಲ ದಿನವೇ ಜಿಯೋ ಪ್ಲಾಟ್‌ಫಾರ್ಮ್ಸ್ ಹೂಡಿಕೆದಾರರಿಗೆ ಭರ್ಜರಿ...

ಅಂಬಾರಿಗೂ ಬೆಲೆ ಕಟ್ಟಿದ ಸಚಿವ ಯತೀಂದ್ರ ಹೇಳಿಕೆಗೆ ತಕ್ಕ ಉತ್ತರ: ರಾಜಮನೆತನದ ಬೆನ್ನಿಗೆ ನಿಂತ ಕರ್ನಾಟಕದ ಜನತೆ!

ಅಂಬಾರಿಗೂ ಬೆಲೆ ಕಟ್ಟಿದ ಸಚಿವ ಯತೀಂದ್ರ ಹೇಳಿಕೆಗೆ ತಕ್ಕ ಉತ್ತರ: ರಾಜಮನೆತನದ ಬೆನ್ನಿಗೆ ನಿಂತ ಕರ್ನಾಟಕದ ಜನತೆ!

by Shwetha
October 28, 2026
0

ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದ ನಡುವೆಯೇ ಹೊತ್ತಿಕೊಂಡಿದ್ದ ಸರ್ಕಾರ ಮತ್ತು ರಾಜಮನೆತನದ ನಡುವಿನ ಶೀತಲ ಸಮರ ಈಗ ಜನಸಾಮಾನ್ಯರ ಆಕ್ರೋಶಕ್ಕೆ ನಾಂದಿ ಹಾಡಿದೆ. ಅರಮನೆ ಬೋರ್ಡ್ ಸರ್ಕಾರದ್ದು,...

ಆಸ್ತಿ ಮಾರ್ಗಸೂಚಿ ದರ ಶೇ. 10ರಿಂದ 40ರವರೆಗೆ ಹೆಚ್ಚಳಕ್ಕೆ ಚಿಂತನೆ: 2027ರ ಜನವರಿಯಿಂದ ಹೊಸ ದರ ಜಾರಿ ಸಾಧ್ಯತೆ

ಆಸ್ತಿ ಮಾರ್ಗಸೂಚಿ ದರ ಶೇ. 10ರಿಂದ 40ರವರೆಗೆ ಹೆಚ್ಚಳಕ್ಕೆ ಚಿಂತನೆ: 2027ರ ಜನವರಿಯಿಂದ ಹೊಸ ದರ ಜಾರಿ ಸಾಧ್ಯತೆ

by Shwetha
October 28, 2026
0

ಕರ್ನಾಟಕದಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಶೇ. 10ರಿಂದ ಶೇ. 40ರವರೆಗೆ ಹೆಚ್ಚಿಸುವ ಸಾಧ್ಯತೆ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಮಾರುಕಟ್ಟೆಯಲ್ಲಿನ ಆಸ್ತಿ ಮೌಲ್ಯಕ್ಕೆ...

ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗಳ ಪರಿಷ್ಕರಣೆ: 1.22 ಕೋಟಿ ಮಹಿಳೆಯರಿಗೆ ₹79,404 ಕೋಟಿ ವಿತರಣೆ ಎಂದ ಎಚ್‌.ಎಂ. ರೇವಣ್ಣ

ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗಳ ಪರಿಷ್ಕರಣೆ: 1.22 ಕೋಟಿ ಮಹಿಳೆಯರಿಗೆ ₹79,404 ಕೋಟಿ ವಿತರಣೆ ಎಂದ ಎಚ್‌.ಎಂ. ರೇವಣ್ಣ

by Shwetha
October 28, 2026
0

ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಫಲಾನುಭವಿಗಳ ಪಟ್ಟಿಯನ್ನು ಮರುಪರಿಶೀಲಿಸುತ್ತಿದೆ. ಈಗಾಗಲೇ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪರಿಶೀಲನೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram