ಈ ಐತಿಹಾಸಿಕ ಗೆಲುವು ಎನ್ಡಿಎ ಮೈತ್ರಿಕೂಟದ ಒಗ್ಗಟ್ಟು, ಸಂಘಟನಾ ಶಕ್ತಿ ಹಾಗೂ ಪದವೀಧರ ಮತದಾರರು ನಮ್ಮ ಮೈತ್ರಿಕೂಟದ ಮೇಲೆ ಇಟ್ಟಿರುವ ಅಚಲ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ನಾಲ್ಕು ಕ್ಷೇತ್ರಗಳಲ್ಲಿ ಎನ್ಡಿಎ ಸಾಧಿಸಿರುವ ಈ ವಿಜಯ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳಿಗೆ ಜನರು ನೀಡಿರುವ ಸ್ಪಷ್ಟ ಉತ್ತರವಾಗಿದೆ. ಮುಂಬರುವ ಚುನಾವಣೆಗಳಲ್ಲಿ ರಾಜ್ಯದಲ್ಲಿ ಎನ್ಡಿಎ ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮಲಿದೆ ಎಂಬುದಕ್ಕೆ ಈ ಫಲಿತಾಂಶ ಮುನ್ನುಡಿಯಾಗಿದೆ.
ಪದವೀಧರರ ಆಶಯಗಳಿಗೆ ಧ್ವನಿಯಾಗಿ, ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಕ್ಷೇತ್ರದ ಅಭಿವೃದ್ಧಿ ಹಾಗೂ ಜನಹಿತದ ಕಾರ್ಯಗಳಲ್ಲಿ ಶ್ರೀ ಕೆ.ಎಂ. ಸುರೇಶ್ ಅವರು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
ಈ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಎನ್ಡಿಎ ಮೈತ್ರಿಕೂಟದ ಎಲ್ಲಾ ನಾಯಕರು, ಪದಾಧಿಕಾರಿಗಳು ಹಾಗೂ ಸಮರ್ಪಿತ ಕಾರ್ಯಕರ್ತರ ಪರಿಶ್ರಮ ಶ್ಲಾಘನೀಯ. ಕಾರ್ಯಕರ್ತರ ಸಂಘಟಿತ ಶ್ರಮ ಹಾಗೂ ಮತದಾರರ ಬೆಂಬಲದಿಂದ ಈ ವಿಜಯ ಸಾಧ್ಯವಾಗಿದೆ. ಸರ್ವರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.








