ಸುಂಕಾತೊಣ್ಣೂರಿನ ಆಲೆಮನೆಗಳಿಗೂ ಸೋಲಾರ್ ಬಲ
ಮಂಡ್ಯ: ಪಾಂಡವಪುರ ತಾಲೂಕಿನಲ್ಲಿ ಸಾವಯವ ಕೃಷಿ ಹಾಗೂ ಪರಿಸರ ಸ್ನೇಹಿ ಬೆಲ್ಲ ತಯಾರಿಕೆಯನ್ನು ಮತ್ತಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಮುತುವರ್ಜಿಯಲ್ಲಿ ವಿನೂತನ ಪ್ರಯೋಗಗಳು ಯಶಸ್ವಿಯಾಗಿ ಮುನ್ನಡೆಯುತ್ತಿವೆ. ರೈತರ ಆರ್ಥಿಕ ಹೊರೆಯನ್ನು ತಗ್ಗಿಸುವ ಮತ್ತು ಆಲೆಮನೆಗಳನ್ನು ವಿದ್ಯುತ್ ಅವಲಂಬನೆಯಿಂದ ಮುಕ್ತಿಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಯು ಈಗ ಸುಂಕಾತೊಣ್ಣೂರು ಗ್ರಾಮದಲ್ಲೂ ಪ್ರಗತಿಯಲ್ಲಿದೆ.
ವಿದ್ಯುತ್ ಬಿಲ್ ಹೊರೆಯಿಂದ ಆಲೆಮನೆಗಳಿಗೆ ಮುಕ್ತಿ: ಆಲೆಮನೆಗಳ ಯಂತ್ರಗಳಿಗೆ ವಿದ್ಯುತ್ ಮೇಲಿನ ಅವಲಂಬನೆ ಹಾಗೂ ಅಧಿಕ ವಿದ್ಯುತ್ ಬಿಲ್‌ನಿಂದ ನಿರ್ವಾಹಕರಿಗೆ ಮತ್ತು ರೈತರಿಗೆ ಆರ್ಥಿಕ ಹೊರೆಯಾಗುತ್ತಿತ್ತು. ಇದಕ್ಕೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ, ಸೋಲಾರ್ ಇಂಧನದ ಮೂಲಕ ಜನರೇಟ್ ಆಗುವ ಪವರ್‌ನಲ್ಲೇ ಆಲೆಮನೆ ಮೋಟಾರ್‌ಗಳು ಸರಾಗವಾಗಿ ನಡೆಯುವಂತೆ ಈ ಯೋಜನೆಯನ್ನು ರೂಪಿಸಲಾಗಿದೆ.
ಸುಂಕಾತೊಣ್ಣೂರಿನಲ್ಲಿ ಭರದಿಂದ ಸಾಗಿದ ಕಾರ್ಯ: ಈ ಯೋಜನೆಯ ಮುಂದುವರಿದ ಭಾಗವಾಗಿ, ಸುಂಕಾತೊಣ್ಣೂರಿನ ದೇವೇಗೌಡರು ಮತ್ತು ಸುನೀಲ್ ಅವರ ಆಲೆಮನೆಗಳಲ್ಲಿ ಸೋಲಾರ್ ಅಳವಡಿಸುವ ಕಾರ್ಯ ಭರದಿಂದ ಪ್ರಗತಿಯಲ್ಲಿದೆ. ಈಗಾಗಲೇ ಈ ಭಾಗದಲ್ಲಿ ಸಾವಯವ ಕೃಷಿ ಮತ್ತು ಬೆಲ್ಲ ತಯಾರಿಕೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ನಿರಂತರವಾಗಿ ಬೆಂಬಲಿಸುತ್ತಿದ್ದು, ರೈತರಿಂದ ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬೆಳಗಾವಿ-ಗೋಕಾಕ್ ರೈತರಿಂದ ಸ್ಥಳದಲ್ಲೇ ಅಧ್ಯಯನ: ಇಂದು ಸುಂಕಾತೊಣ್ಣೂರಿನಲ್ಲಿ ಸೋಲಾರ್ ಅಳವಡಿಕೆ ಕಾರ್ಯ ಜಾರಿಯಲ್ಲಿರುವ ದೇವೇಗೌಡರು ಮತ್ತು ಸುನೀಲ್ ಅವರ ಆಲೆಮನೆ ಘಟಕಗಳಿಗೆ ಬೆಳಗಾವಿ ಹಾಗೂ ಗೋಕಾಕ್‌ನಿಂದ ಆಗಮಿಸಿದ ರೈತರು ಭೇಟಿ ನೀಡಿದರು. ಅಲ್ಲಿ ನಡೆಯುತ್ತಿರುವ ಪ್ರಕ್ರಿಯೆಯನ್ನು ಖುದ್ದಾಗಿ ವೀಕ್ಷಿಸಿದ ಅವರು, ಈ ತಂತ್ರಜ್ಞಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ತಮ್ಮ ಕ್ಷೇತ್ರಗಳಲ್ಲೂ ಈ ಪ್ರಯೋಗವನ್ನು ಅನುಸರಿಸಲು ಅವರು ಉತ್ಸುಕರಾಗಿದ್ದು, ಇದು ಸಾವಯವ ಬೆಳೆ ಮತ್ತು ಉತ್ಪನ್ನಗಳ ಉತ್ಪಾದನೆಗೆ ಹೊಸ ದಿಕ್ಕು ತೋರಿಸಲಿದೆ.
ಫೌಂಡೇಶನ್‌ಗಳ ಮೂಲಕ ರೈತರಿಗೆ ನಿರಂತರ ನೆರವು: ಮುಂದಿನ ದಿನಗಳಲ್ಲಿ ಇಂತಹ ಪರಿಸರ ಸ್ನೇಹಿ ಕಾರ್ಯಯೋಜನೆಗಳನ್ನು ಜಾರಿಗೆ ತರಲು ಇತರೆ ರೈತರು ಹಾಗೂ ಸಾವಯವ ಬೆಲ್ಲ ಉತ್ಪಾದಕರು ಮುಂದೆ ಬಂದರೆ, ಪುಟ್ಟಣ್ಣಯ್ಯ ಫೌಂಡೇಶನ್ ಮತ್ತು ಸೆಲ್ಕೋ ಫೌಂಡೇಶನ್ ವತಿಯಿಂದ ಎಲ್ಲ ರೀತಿಯ ಅಗತ್ಯ ತಾಂತ್ರಿಕ ಹಾಗೂ ತಳಮಟ್ಟದ ನೆರವನ್ನು ನೀಡುವುದಾಗಿ ತಿಳಿಸಲಾಗಿದೆ.
ಪಾಂಡವಪುರ ತಾಲೂಕಿನಲ್ಲಿ ಈ ಅರ್ಥಪೂರ್ಣ ಯೋಜನೆಗಳನ್ನು ಜಾರಿಗೆ ತಂದಿರುವ ಪುಟ್ಟಣ್ಣಯ್ಯ ಫೌಂಡೇಶನ್ ಮತ್ತು ಸೆಲ್ಕೋ ಫೌಂಡೇಶನ್ ತಂಡಕ್ಕೆ ರೈತರು ಹಾಗೂ ಸಾರ್ವಜನಿಕರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಎಸ್‌ಐಆರ್ ಕುರಿತು ಹೇಳಿಕೆಗೆ ಸತೀಶ್ ಜಾರಕಿಹೊಳಿ ಸ್ಪಷ್ಟನೆ: ಅರ್ಹ ಮತದಾರರ ಹೆಸರು ಅಳಿಸುವ ಪ್ರಯತ್ನ ವಿಫಲ ಎಂದ ಸಚಿವ
ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಸಮರ್ಪಕವಾಗಿ ನಡೆದಿದೆ ಎಂದು ಹೇಳಿಕೆ ನೀಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಇದೀಗ ತಮ್ಮ ಹೇಳಿಕೆಗೆ...







