ADVERTISEMENT
Monday, November 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಪಾಂಡವಪುರದ ಆಲೆಮನೆಗಳಿಗೆ ಸೋಲಾರ್ ಬಲ ತುಂಬಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ

admin by admin
November 2, 2026
in National, Newsbeat, ದೇಶ - ವಿದೇಶ
darshan-puttannaiah-solar-powered-organic-jaggery-unit-chikkabadaralli-pandavapura

darshan-puttannaiah-solar-powered-organic-jaggery-unit-chikkabadaralli-pandavapura

Share on FacebookShare on TwitterShare on WhatsappShare on Telegram

ಪರಿಸರ ಸ್ನೇಹಿ ಬೆಲ್ಲ ತಯಾರಿಕೆ

ಮಂಡ್ಯ: ಕೃಷಿ ಕ್ಷೇತ್ರದಲ್ಲಿ ವಿನೂತನ ಪ್ರಯೋಗಗಳು ಹಾಗೂ ರೈತರ ಪರ ಕಾಳಜಿಗೆ ಸದಾ ಮುಂದಿರುವ ಮೇಲುಕೋಟೆ ಕ್ಷೇತ್ರದ ಜನಪ್ರಿಯ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು, ರೈತರ ಆರ್ಥಿಕ ಹೊರೆಯನ್ನು ತಗ್ಗಿಸಲು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಪಾಂಡವಪುರ ತಾಲೂಕಿನಲ್ಲಿ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವ ಹಾಗೂ ಆಲೆಮನೆಗಳನ್ನು ವಿದ್ಯುತ್ ಅವಲಂಬನೆಯಿಂದ ಮುಕ್ತಿಗೊಳಿಸುವ ನಿಟ್ಟಿನಲ್ಲಿ ‘ಪುಟ್ಟಣ್ಣಯ್ಯ ಫೌಂಡೇಶನ್’ ಮತ್ತು ‘ಸೆಲ್ಕೋ ಫೌಂಡೇಶನ್’ ಸಹಯೋಗದೊಂದಿಗೆ ವಿನೂತನ ಸೋಲಾರ್ ಯೋಜನೆಗೆ ಚಾಲನೆ ನೀಡಲಾಗಿದೆ.
ಸಾವಯವ ಕೃಷಿ ಹಾಗೂ ಬೆಲ್ಲ ತಯಾರಿಕೆಗೆ ಭರ್ಜರಿ ಬೆಂಬಲ: ಕಬ್ಬು ಪ್ರಮುಖ ಬೆಳೆಯಾಗಿರುವ ಈ ಪ್ರದೇಶದಲ್ಲಿ, ಕಬ್ಬನ್ನು ಅರೆಯಲು ಮತ್ತು ಸಾವಯವ ಬೆಲ್ಲ ತಯಾರಿಸಲು ಇರುವ ಆಲೆಮನೆಗಳಿಗೆ ವಿದ್ಯುತ್ ಬಿಲ್‌ನ ಹೊರೆ ದೊಡ್ಡದಾಗಿ ಕಾಡುತ್ತಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಮುತುವರ್ಜಿಯಲ್ಲಿ ಆಲೆಮನೆಗಳ ಮೋಟಾರ್‌ಗಳನ್ನು ಸೋಲಾರ್ ಇಂಧನದ ಮೂಲಕ ಚಲಾಯಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಸೋಲಾರ್‌ನಿಂದ ಜನರೇಟ್ ಆಗುವ ವಿದ್ಯುತ್‌ ನಿಂದ ಆಲೆಮನೆಗಳು ಕಾರ್ಯನಿರ್ವಹಿಸುವುದರಿಂದ ಮಾಲೀಕರು ಮತ್ತು ರೈತರಿಗೆ ಆರ್ಥಿಕವಾಗಿ ದೊಡ್ಡ ಉಪಶಮನ ಸಿಕ್ಕಂತಾಗಿದೆ.
ಚಿಕ್ಕಬಾಡರಳ್ಳಿಯಲ್ಲಿ ಯಶಸ್ವಿ ಅನುಷ್ಠಾನ: ಈ ಮಹತ್ವಾಕಾಂಕ್ಷೆಯ ಯೋಜನೆಯಡಿ, ಚಿಕ್ಕಬಾಡರಳ್ಳಿಯಲ್ಲಿರುವ ಸೌಮ್ಯ ಅವರ ಆಲೆಮನೆಯಲ್ಲಿ (ಸಾವಯವ ಬೆಲ್ಲ ತಯಾರಿಕಾ ಘಟಕ) ಸೋಲಾರ್ ಯುನಿಟ್ ಅಳವಡಿಸುವ ಕಾರ್ಯ ಈಗಾಗಲೇ ಸಂಪೂರ್ಣವಾಗಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ.
ಬೆಳಗಾವಿ-ಗೋಕಾಕ್ ರೈತರಿಂದ ಅಧ್ಯಯನ: ಚಿಕ್ಕಬಾಡರಳ್ಳಿಯ ಈ ಯಶಸ್ವಿ ಆಲೆಮನೆಗೆ ಇಂದು ಬೆಳಗಾವಿ ಮತ್ತು ಗೋಕಾಕ್‌ನಿಂದ ಆಗಮಿಸಿದ ರೈತರು ಭೇಟಿ ನೀಡಿ, ಸೋಲಾರ್ ಮೂಲಕ ಆಲೆಮನೆ ನಡೆಯುವ ಪ್ರಕ್ರಿಯೆಯನ್ನು ಖುದ್ದಾಗಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ತಮ್ಮ ಕ್ಷೇತ್ರಗಳಲ್ಲೂ ಈ ಪ್ರಯೋಗವನ್ನು ಅನುಸರಿಸಲು ಅವರು ಉತ್ಸುಕರಾಗಿದ್ದು, ಇದು ರಾಜ್ಯದಲ್ಲಿ ಸಾವಯವ ಬೆಳೆ ಮತ್ತು ಸಾವಯವ ಉತ್ಪನ್ನಗಳ ಉತ್ಪಾದನೆಗೆ ಮತ್ತಷ್ಟು ಬಲ ತುಂಬಲಿದೆ.
ರೈತರಿಗೆ ಫೌಂಡೇಶನ್‌ಗಳ ಬೆಂಬಲದ ಭರವಸೆ: ಮುಂದಿನ ದಿನಗಳಲ್ಲಿ ಇಂತಹ ಪರಿಸರ ಸ್ನೇಹಿ ಕಾರ್ಯಯೋಜನೆಗಳನ್ನು ಜಾರಿಗೊಳಿಸಲು ರಾಜ್ಯದ ಇತರೆ ರೈತರು ಹಾಗೂ ಸಾವಯವ ಬೆಲ್ಲ ಉತ್ಪಾದಕರು ಮುಂದೆ ಬಂದರೆ, ಪುಟ್ಟಣ್ಣಯ್ಯ ಫೌಂಡೇಶನ್‌ ಮತ್ತು ಸೆಲ್ಕೋ ಫೌಂಡೇಶನ್‌ ವತಿಯಿಂದ ಎಲ್ಲ ರೀತಿಯ ಅಗತ್ಯ ತಾಂತ್ರಿಕ ಹಾಗೂ ತಳಮಟ್ಟದ ನೆರವನ್ನು ನೀಡುವುದಾಗಿ ತಿಳಿಸಲಾಗಿದೆ. ರೈತರ ಶ್ರೇಯೋಭಿವೃದ್ಧಿಗಾಗಿ ಮತ್ತು ಸಾವಯವ ಕೃಷಿಯ ಉಳಿವಿಗಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ನೀಡುತ್ತಿರುವ ನಿರಂತರ ಬೆಂಬಲಕ್ಕೆ ರೈತ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

Related posts

sunkathonnur-solar-powered-jaggery-units-darshan-puttannaiah-pandavapura

ಸಾವಯವ ಕೃಷಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತೊಂದು ಬಲವಾದ ಹೆಜ್ಜೆ

November 2, 2026
instamart-kalyan-jewellers-diwali-dhanteras-gold-coins-10-minute-delivery-free-silver-coin-offers

ದೀಪಾವಳಿ, ಧನತ್ರಯೋದಶಿಗೆ ಬಂಪರ್‌ ಆಫರ್: ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ಚಿನ್ನ, ಜೊತೆಗೆ ಬೆಳ್ಳಿ ಫ್ರೀ!

November 2, 2026
ShareTweetSendShare
Join us on:

Related Posts

sunkathonnur-solar-powered-jaggery-units-darshan-puttannaiah-pandavapura

ಸಾವಯವ ಕೃಷಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತೊಂದು ಬಲವಾದ ಹೆಜ್ಜೆ

by admin
November 2, 2026
0

ಸುಂಕಾತೊಣ್ಣೂರಿನ ಆಲೆಮನೆಗಳಿಗೂ ಸೋಲಾರ್ ಬಲ ಮಂಡ್ಯ: ಪಾಂಡವಪುರ ತಾಲೂಕಿನಲ್ಲಿ ಸಾವಯವ ಕೃಷಿ ಹಾಗೂ ಪರಿಸರ ಸ್ನೇಹಿ ಬೆಲ್ಲ ತಯಾರಿಕೆಯನ್ನು ಮತ್ತಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ...

instamart-kalyan-jewellers-diwali-dhanteras-gold-coins-10-minute-delivery-free-silver-coin-offers

ದೀಪಾವಳಿ, ಧನತ್ರಯೋದಶಿಗೆ ಬಂಪರ್‌ ಆಫರ್: ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ಚಿನ್ನ, ಜೊತೆಗೆ ಬೆಳ್ಳಿ ಫ್ರೀ!

by admin
November 2, 2026
0

ಬೆಂಗಳೂರು: ದೀಪಾವಳಿ ಹಾಗೂ ಧನತ್ರಯೋದಶಿ ಹಬ್ಬದ ಪ್ರಯುಕ್ತ ಆನ್‌ಲೈನ್‌ನಲ್ಲಿ ಚಿನ್ನ ಖರೀದಿಸುವ ಗ್ರಾಹಕರಿಗೆ ಪ್ರಮುಖ ಕ್ವಿಕ್-ಕಾಮರ್ಸ್ ವೇದಿಕೆ ಇನ್‌ಸ್ಟಾಮಾರ್ಟ್ ಬಂಪರ್‌ ಆಫರ್‌ ಘೋಷಿಸಿದೆ. ಖ್ಯಾತ ಆಭರಣ ಮಳಿಗೆ...

divyasree-developers-hdfc-capital-1500-crore-residential-development-platform-india

ಎಚ್‌ಡಿಎಫ್‌ಸಿ ಕ್ಯಾಪಿಟಲ್‌ನ ಜೊತೆ ಕೈ ಜೋಡಿಸಿದ ಬೆಂಗಳೂರಿನ ದಿವ್ಯಶ್ರೀ ಡೆವಲಪರ್ಸ್‌, ₹1,500 ಕೋಟಿಯ ‘ವಸತಿ ಅಭಿವೃದ್ಧಿ ವೇದಿಕೆ’ ಸ್ಥಾಪನೆ

by admin
November 2, 2026
0

ಬೆಂಗಳೂರು: ಸಿಲಿಕಾನ್‌ ಸಿಟಿ ಮೂಲದ ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆ 'ದಿವ್ಯಶ್ರೀ ಡೆವಲಪರ್ಸ್', ತನ್ನ ವಸತಿ ಯೋಜನೆಗಳನ್ನು ಬೃಹತ್ ಮಟ್ಟದಲ್ಲಿ ವಿಸ್ತರಿಸಲು 'ಎಚ್‌ಡಿಎಫ್‌ಸಿ ಕ್ಯಾಪಿಟಲ್...

lord-of-the-western-sea-novel-trailer-release-november-15-kiccha-sudeep-dolly-dhananjaya

ನವೆಂಬರ್ 15ರಂದು ‘Lord of the Western Sea’ ಕಾದಂಬರಿಯ ಟ್ರೈಲರ್ ಬಿಡುಗಡೆ

by admin
November 2, 2026
0

ಇಂಗ್ಲಿಷ್‌ಗೆ ಕಿಚ್ಚ ಸುದೀಪ್, ಕನ್ನಡಕ್ಕೆ ಡಾಲಿ ಧನಂಜಯ ಧ್ವನಿ ಲೇಖಕ ಎಸ್. ಶ್ಯಾಮ್ ಪ್ರಸಾದ್ ಅವರ ಐತಿಹಾಸಿಕ ಕಾದಂಬರಿ Lord of the Western Sea (ಪಡುಗಡಲೊಡೆಯ)...

ayyana-mane-2-zee5-100-million-viewing-minutes-kannada-web-series-success

ಡಿಜಿಟಲ್ ಜಗತ್ತಿನಲ್ಲಿ ಹೊಸ ದಾಖಲೆ: Zee5 ನಲ್ಲಿ 10 ಕೋಟಿ ವೀಕ್ಷಣೆ ನಿಮಿಷಗಳನ್ನು ದಾಟಿ ಮುನ್ನುಗ್ಗುತ್ತಿರುವ ‘ಅಯ್ಯನ ಮನೆ 2’

by admin
November 2, 2026
0

ಬೆಂಗಳೂರು: ಕನ್ನಡ ಒಟಿಟಿ ಲೋಕದಲ್ಲಿ ಥ್ರಿಲ್ಲರ್ ಸರಣಿಯೊಂದು ಅಭೂತಪೂರ್ವ ದಾಖಲೆ ಬರೆದಿದೆ. ಜೀ5 ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿರುವ ಬ್ಲಾಕ್‌ಬಸ್ಟರ್ ವೆಬ್ ಸರಣಿ 'ಅಯ್ಯನ ಮನೆ 2', ಡಿಜಿಟಲ್...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram