ADVERTISEMENT
Tuesday, November 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕಾಂಗ್ರೆಸ್ ನಾಯಕರ ಬೀದಿ ಕಚ್ಚಾಟ, ಆಡಳಿತದಲ್ಲಿ ನಿಯಂತ್ರಣವಿಲ್ಲದ ಹುಚ್ಚಾಟ: ಆರ್. ಅಶೋಕ್ ಟೀಕೆ

admin by admin
November 3, 2026
in Newsbeat, State, ರಾಜ್ಯ
r-ashoka-congress-internal-faction-fight-karnataka-government-administration-criticism

r-ashoka-congress-internal-faction-fight-karnataka-government-administration-criticism

Share on FacebookShare on TwitterShare on WhatsappShare on Telegram

ಬೆಂಗಳೂರು: ಕಾಂಗ್ರೆಸ್ ಪಕ್ಷದ ಆಂತರಿಕ ಬಣ ರಾಜಕೀಯ ಬೀದಿಗೆ ಬಂದಿದ್ದು, ನಾಯಕರ ನಡುವಿನ ಕಿತ್ತಾಟ ಮಿತಿಮೀರಿದೆ. ಸಚಿವ ಬಾಲಕೃಷ್ಣ ಅವರು ಮಾಜಿ ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಯ ಆರೋಪ ಮಾಡಿರುವುದು ಕಾಂಗ್ರೆಸ್‌ನಲ್ಲಿನ ಆಂತರಿಕ ಸಂಘರ್ಷಕ್ಕೆ ಮತ್ತೊಂದು ಸಾಕ್ಷಿಯಾಗಿದೆ. “ರಾಜಣ್ಣ ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ” ಎಂದು ಸಚಿವರೇ ಸವಾಲು ಹಾಕುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಈ ಬೀದಿ ಕಚ್ಚಾಟದಿಂದ ರಾಜ್ಯದ ಆಡಳಿತ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.

ಸ್ಟಿಂಗ್ ಆಪರೇಷನ್ ವಿವಾದ, ವಿಧಾನಪರಿಷತ್ ಚುನಾವಣೆಯಲ್ಲಿನ ಹೀನಾಯ ಸೋಲು, ಬಣ ರಾಜಕೀಯ ಹಾಗೂ ಎಸ್‌ಐಆರ್ ಹೋರಾಟಕ್ಕಾಗಿ ದೆಹಲಿಗೆ ಓಡಾಟ ನಡೆಸುವುದರಲ್ಲೇ ಕಾಂಗ್ರೆಸ್ ನಾಯಕರು ಕಾಲ ಕಳೆಯುತ್ತಿದ್ದಾರೆ. ಇದರಿಂದಾಗಿ ರಾಜ್ಯದ ಆಡಳಿತ ಮಕಾಡೆ ಮಲಗಿದೆ ಎಂದು ಅವರು ಆರೋಪಿಸಿದ್ದಾರೆ.

Related posts

r-ashoka-save-democracy-campaign-congress-evm-sir-protest-karnataka

ಬಿಜೆಪಿಯಿಂದ ಪ್ರಜಾಪ್ರಭುತ್ವ ಉಳಿಸಿ ಆಂದೋಲನ, ಎಲ್ಲ ಕಡೆ ಸೋತ ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ಹರಣ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ

November 3, 2026
basaralu-kannada-utsava-dhruva-sarja-anushree-2500-families-accident-insurance

ಬಸರಾಳು ಕನ್ನಡ ಉತ್ಸವ: ತಾರೆಯರ ಮೆರುಗು, 2,500 ಕುಟುಂಬಗಳಿಗೆ 5 ಲಕ್ಷ ರೂ. ಅಪಘಾತ ವಿಮೆ ವಿತರಣೆ

November 3, 2026

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ರೈತರಿಗೆ ಬರ ಪರಿಹಾರ ಸಿಗುತ್ತಿಲ್ಲ, ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ, ಸರ್ಕಾರಿ ಶಾಲೆಗಳ ಅಭಿವೃದ್ಧಿ ನಡೆಯುತ್ತಿಲ್ಲ, ವಿಕಲಚೇತನರಿಗೆ ಪಿಂಚಣಿ ಸಿಗುತ್ತಿಲ್ಲ. ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಯಾಗಿಲ್ಲ. ಹೀಗೆ ಎಲ್ಲದರಲ್ಲೂ ‘ಇಲ್ಲ’ ಎಂಬುದನ್ನೇ ನಿಮ್ಮ ಕಾಂಗ್ರೆಸ್ ಆಡಳಿತ ತೋರಿಸಿಕೊಟ್ಟಿದೆ ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಸ್ಥಳೀಯ ಮುಖಂಡರಿಂದ ಹಿಡಿದು ಶಾಸಕರು, ಸಚಿವರವರೆಗೆ ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದಾರೆ. ಜನರ ಸಂಕಷ್ಟಗಳನ್ನು ಆಲಿಸುವವರೇ ಇಲ್ಲದಂತಾಗಿದೆ. ಇನ್ನು ಎಲ್ಲರೂ ಬೀದಿಗೆ ಬಂದು ಹೊಡೆದಾಡುವುದೊಂದೇ ಬಾಕಿ ಉಳಿದಿದೆ. ಪಕ್ಷದಲ್ಲಾಗಲಿ, ಸರ್ಕಾರದಲ್ಲಾಗಲಿ ಯಾವುದೇ ತಾಳಮೇಳವಿಲ್ಲ ಎಂದು ಅವರು ಟೀಕಿಸಿದ್ದಾರೆ.

ಕಿತ್ತುಹೋದ ಆಡಳಿತಕ್ಕೆ ತೇಪೆ ಹಾಕುವ ಬದಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಅಧಿಕಾರದಿಂದ ತೊಲಗಬೇಕು ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.

ShareTweetSendShare
Join us on:

Related Posts

r-ashoka-save-democracy-campaign-congress-evm-sir-protest-karnataka

ಬಿಜೆಪಿಯಿಂದ ಪ್ರಜಾಪ್ರಭುತ್ವ ಉಳಿಸಿ ಆಂದೋಲನ, ಎಲ್ಲ ಕಡೆ ಸೋತ ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ಹರಣ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ

by admin
November 3, 2026
0

ಕೋಲಾರ, ಕಾಂಗ್ರೆಸ್‌ ಸರ್ಕಾರ ಅಭಿವೃದ್ಧಿ ಮಾಡದೆ ಎಲ್ಲ ಕಡೆ ಸೋಲುತ್ತಿದೆ. ಆದರೂ ಪ್ರಜಾಪ್ರಭುತ್ವವನ್ನು ಹರಣ ಮಾಡಲು ಇವಿಎಂ, ಎಸ್‌ಐಆರ್‌ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ...

basaralu-kannada-utsava-dhruva-sarja-anushree-2500-families-accident-insurance

ಬಸರಾಳು ಕನ್ನಡ ಉತ್ಸವ: ತಾರೆಯರ ಮೆರುಗು, 2,500 ಕುಟುಂಬಗಳಿಗೆ 5 ಲಕ್ಷ ರೂ. ಅಪಘಾತ ವಿಮೆ ವಿತರಣೆ

by admin
November 3, 2026
0

ಬಸರಾಳು: ಸ್ಥಳೀಯ ಸರ್ಕಾರಿ ಶಾಲಾ ಮೈದಾನದಲ್ಲಿ ‘ದಕ್ಷಿಣ ಪಥೇಶ್ವರ ಬಳಗ’ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ‘ಬಸರಾಳು ಕನ್ನಡ ಉತ್ಸವ’ ಸಂಭ್ರಮ ಹಾಗೂ ಜನಮೆಚ್ಚುಗೆಯೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಸ್ಯಾಂಡಲ್‌ವುಡ್‌ನ...

cognizant-openai-partnership-25000-ai-professionals-frontier-capability-group-chatgpt-codex

ಎಐ ಜಗತ್ತಿನಲ್ಲಿ ಕಾಂಗ್ನಿಜೆಂಟ್ ಭರ್ಜರಿ ಹೆಜ್ಜೆ: ಓಪನ್‌ ಎಐ ಸೇವೆಗಾಗಿ 25,000 ಟೆಕ್ಕಿಗಳ ಬೃಹತ್ ಪಡೆ ಸಜ್ಜು

by admin
November 3, 2026
0

ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಕಾರ್ಪೊರೇಟ್ ಜಗತ್ತಿಗೆ ಮತ್ತಷ್ಟು ಹತ್ತಿರ ತರುವ ನಿಟ್ಟಿನಲ್ಲಿ ಪ್ರಮುಖ ಐಟಿ ದಿಗ್ಗಜ ಸಂಸ್ಥೆ ಕಾಂಗ್ನಿಜೆಂಟ್ ಮಹತ್ವದ ಹೆಜ್ಜೆ ಇಟ್ಟಿದೆ. ಚಾಟ್‌ಜಿಪಿಟಿ...

pi-industries-india-first-indigenously-developed-insecticide-pyoxaniliprole-launch

10 ವರ್ಷಗಳ ಸಂಶೋಧನೆಗೆ ಜಯ: ಭಾರತದ ಮೊಟ್ಟಮೊದಲ ‘ಸ್ವದೇಶಿ’ ಕೀಟನಾಶಕ ಬಿಡುಗಡೆ ಮಾಡಿದ ಪಿಐ ಇಂಡಸ್ಟ್ರೀಸ್!

by admin
November 3, 2026
0

* ಸಂಪೂರ್ಣವಾಗಿ ಭಾರತದಲ್ಲೇ ಸಂಶೋಧಿಸಿ, ಅಭಿವೃದ್ಧಿಪಡಿಸಿದ ಮೊಟ್ಟಮೊದಲ ಕೀಟನಾಶಕ 'ಪಯೋಕ್ಸಾನಿಲಿಪ್ರೋಲ್' ಬಿಡುಗಡೆ. * ಪಿಐ ಇಂಡಸ್ಟ್ರೀಸ್‌ನ 700ಕ್ಕೂ ಹೆಚ್ಚು ವಿಜ್ಞಾನಿಗಳ ಶ್ರಮ, 10 ವರ್ಷಗಳ ನಿರಂತರ ಸಂಶೋಧನೆಗೆ...

swiggy-delivery-partners-insurance-cover-10-lakh-25-lakh-gig-workers-indusind-general-insurance

ಸ್ವಿಗ್ಗಿ ಡೆಲಿವರಿ ಪಾರ್ಟ್ನರ್‌ಗಳಿಗೆ ಬಂಪರ್‌: 25 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗೆ ₹10 ಲಕ್ಷದವರೆಗಿನ ವಿಮಾ ಸೌಲಭ್ಯ

by admin
November 3, 2026
0

ಬೆಂಗಳೂರು: ಭಾರತದ ಪ್ರಮುಖ ಆನ್‌ಲೈನ್‌ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ ಮಳೆ-ಬಿಸಿಲೆನ್ನದೆ ಗ್ರಾಹಕರಿಗೆ ಸೇವೆ ಒದಗಿಸುವ ತನ್ನ ಡೆಲಿವರಿ ಪಾಲುದಾರರ ಆರ್ಥಿಕ ಮತ್ತು ಆರೋಗ್ಯ ಭದ್ರತೆಗಾಗಿ ಮಹತ್ವದ ಹೆಜ್ಜೆಯಿಟ್ಟಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram