ADVERTISEMENT
Friday, November 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ನಾವು ನಿಮ್ಮಂತಹ ಕಾರ್ಪೋರೇಟ್ ಓತಿಕ್ಯಾತಗಳಲ್ಲ: ಪ್ರಿಯಾಂಕ್ ಖರ್ಗೆಯ ವಿಲೇಜ್ ಈಡಿಯಟ್ ಹೇಳಿಕೆಯನ್ನೇ ಬ್ರಹ್ಮಾಸ್ತ್ರವಾಗಿಸಿಕೊಂಡ ಜೆಡಿಎಸ್

Shwetha by Shwetha
November 6, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದ ಸುತ್ತ ಆರಂಭವಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ಜಿದ್ದಾಜಿದ್ದಿನ ವಾಕ್ಸಮರ ಇದೀಗ ಹಳ್ಳಿ ಮತ್ತು ನಗರ ಸಂಸ್ಕೃತಿಯ ನಡುವಿನ ಸ್ವಾಭಿಮಾನದ ಸಂಘರ್ಷವಾಗಿ ಮಾರ್ಪಟ್ಟಿದೆ. ವಾಗ್ದಾಳಿಯ ಭರದಲ್ಲಿ ಪ್ರಿಯಾಂಕ್ ಖರ್ಗೆ ಅವರು ಕುಮಾರಸ್ವಾಮಿ ಅವರನ್ನು ಕುರಿತು ನೀಡಿದ್ದ ವಿಲೇಜ್ ಈಡಿಯಟ್ ಅಂದರೆ ಹಳ್ಳಿ ಗುಗ್ಗು ಎಂಬ ಒಂದು ಹೇಳಿಕೆಯು ಈಗ ಕಾಂಗ್ರೆಸ್ ಪಾಲಿಗೆ ತಿರುಗುಬಾಣವಾಗಿದ್ದು, ಜೆಡಿಎಸ್ ಇದನ್ನೇ ಪ್ರಬಲ ರಾಜಕೀಯ ಬ್ರಹ್ಮಾಸ್ತ್ರವನ್ನಾಗಿ ಪ್ರಯೋಗಿಸಿದೆ.

ಬೀದಿಗೆ ಬಂದ ಫ್ಲೆಕ್ಸ್ ಸಮರ, ರಾಜ್ಯವ್ಯಾಪಿ ಹೋರಾಟಕ್ಕೆ ಸಿದ್ಧತೆ

Related posts

ರೈತರಿಗೆ ದೀಪಾವಳಿ ಉಡುಗೊರೆ; ಬರ ಪರಿಹಾರ ₹5,000ಕ್ಕೆ ಹೆಚ್ಚಳ, ₹1,250 ಕೋಟಿ ಹಣ ವರ್ಗಾವಣೆಗೆ ಚಾಲನೆ

ರೈತರಿಗೆ ದೀಪಾವಳಿ ಉಡುಗೊರೆ; ಬರ ಪರಿಹಾರ ₹5,000ಕ್ಕೆ ಹೆಚ್ಚಳ, ₹1,250 ಕೋಟಿ ಹಣ ವರ್ಗಾವಣೆಗೆ ಚಾಲನೆ

November 6, 2026
ರಣಬೀರ್ ಕಪೂರ್–ಯಶ್ ಅಭಿನಯದ ‘ರಾಮಾಯಣ’: ರಾಮನಾಗಿ ರಣಬೀರ್, ರಾವಣನಾಗಿ ರಾಕಿಂಗ್ ಸ್ಟಾರ್

ರಣಬೀರ್ ಕಪೂರ್–ಯಶ್ ಅಭಿನಯದ ‘ರಾಮಾಯಣ’: ರಾಮನಾಗಿ ರಣಬೀರ್, ರಾವಣನಾಗಿ ರಾಕಿಂಗ್ ಸ್ಟಾರ್

November 6, 2026

ಕುಮಾರಸ್ವಾಮಿ ಅವರು ವಿಲೇಜ್ ಈಡಿಯಟ್ ರೀತಿ ವರ್ತಿಸುತ್ತಾರೆ ಎಂಬ ಗೃಹ ಸಚಿವರ ಹೇಳಿಕೆಯ ವಿರುದ್ಧ ಜೆಡಿಎಸ್ ಪಾಳಯವು ಬೃಹತ್ ಅಭಿಯಾನವನ್ನೇ ಹುಟ್ಟುಹಾಕಿದೆ. ಗೃಹ ಸಚಿವರೇ ನಾವು ಹಳ್ಳಿಯವರೇ ಏನಿವಾಗ ಎಂಬ ಘೋಷವಾಕ್ಯದೊಂದಿಗೆ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಸಮರವನ್ನೇ ಸಾರಿದ್ದಾರೆ. ಅಷ್ಟೇ ಅಲ್ಲದೆ, ರಾಮನಗರ ತಾಲೂಕಿನ ಬಿಡದಿ ಬಳಿ ಇದೇ ಬರಹವಿರುವ ಬೃಹತ್ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದು, ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿ ರಾಜ್ಯವ್ಯಾಪಿ ಹೋರಾಟ ನಡೆಸಲು ದಳಪತಿಗಳು ನಿರ್ಧರಿಸಿದ್ದಾರೆ.

ಹಟ್ಟಿಯಲ್ಲಿ ಆಡಿ ಬೆಳೆದ ಹಳ್ಳಿಯವನು ಎಂಬ ಹೆಮ್ಮೆಯಿದೆ ಎಂದ ಎಚ್‌ಡಿಕೆ

ನಗರದಲ್ಲೇ ಹುಟ್ಟಿ ಬೆಳೆದ ಪ್ರಿಯಾಂಕ್ ಖರ್ಗೆ ಅವರ ಟೀಕೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಹಾತ್ಮ ಗಾಂಧೀಜಿಯವರ ಮಾತುಗಳನ್ನು ಉಲ್ಲೇಖಿಸುವ ಮೂಲಕ ಅತ್ಯಂತ ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ. ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಭಾರತದ ನೈಜ ಆತ್ಮ ಇರುವುದೇ ಹಳ್ಳಿಗಳಲ್ಲಿ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರೇ ಹೇಳಿದ್ದಾರೆ. ಹೌದು, ನಾನು ಹಳ್ಳಿಯವನೇ ಎಂಬುದು ನಿಜ. ಅಲ್ಲಿಯೇ ಹುಟ್ಟಿ, ಹಟ್ಟಿಯಲ್ಲಿಯೇ ಆಡಿ ಬೆಳೆದವನು. ನಾನೊಬ್ಬ ಹಳ್ಳಿಯವನು ಎಂದು ಎದೆತಟ್ಟಿ ಹೇಳಿಕೊಳ್ಳಲು ನನಗೆ ಅಪಾರ ಹೆಮ್ಮೆಯಿದೆ ಎಂದು ಹೇಳುವ ಮೂಲಕ ಗ್ರಾಮೀಣ ಅಸ್ಮಿತೆಯ ದಾಳ ಉರುಳಿಸಿದ್ದಾರೆ.

ಎಸಿ ಕೊಠಡಿಯ ಗುಲಾಮರಿಗೆ ಬೆವರಿನ ಬೆಲೆ ಏನು ಗೊತ್ತು?

ಮತ್ತೊಂದೆಡೆ ಜೆಡಿಎಸ್ ತನ್ನ ಅಧಿಕೃತ ಎಕ್ಸ್ ಖಾತೆಯ ಮೂಲಕ ಪ್ರಿಯಾಂಕ್ ಖರ್ಗೆ ವಿರುದ್ಧ ಹಿಂದೆಂದೂ ಕಾಣದ ರೀತಿಯಲ್ಲಿ ಕೆಂಡಕಾರಿದೆ. ನಾವು ನಿಮ್ಮಂತಹ ಕಾರ್ಪೋರೇಟ್ ಓತಿಕ್ಯಾತಗಳಲ್ಲ ಎಂದು ಗುಡುಗಿರುವ ಜೆಡಿಎಸ್, ಮಿಸ್ಟರ್ ನಿಷ್ಪ್ರಯೋಜಕ ವ್ಯಕ್ತಿ ಇಟಲಿ ಪ್ರಿಯಾಂಕ್ ಖರ್ಗೆ ಅವರೇ, ನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರನ್ನು ಹಳ್ಳಿ ಗುಗ್ಗು ಹಾಗೂ ಈಡಿಯಟ್ ಎಂದು ಜರಿಯುವ ಮೂಲಕ ನಿಮ್ಮ ಹೈಟೆಕ್ ಅಹಂಕಾರವನ್ನು ಮತ್ತು ನಿಮ್ಮ ಸಂಸ್ಕಾರವನ್ನು ಜಗತ್ತಿಗೆ ಪ್ರದರ್ಶಿಸಿದ್ದೀರಿ ಎಂದು ಜರಿದಿದೆ.

ಅಧಿಕಾರದ ಮದದಲ್ಲಿ ನೀವು ಆಡಿರುವ ಈ ಮಾತುಗಳು ಕೇವಲ ಕುಮಾರಸ್ವಾಮಿ ಅವರಿಗೆ ಮಾತ್ರವಲ್ಲ, ಇಡೀ ದೇಶದ ಹಳ್ಳಿಗಳ ಮಣ್ಣಿನ ಮಕ್ಕಳಿಗೆ ಹಾಗೂ ಹಗಲಿರುಳು ಕಷ್ಟಪಟ್ಟು ದುಡಿಯುವ ಅನ್ನದಾತ ರೈತರಿಗೆ ಮಾಡಿದ ಘೋರ ಅಪಮಾನವಾಗಿದೆ. ದೆಹಲಿ ಮತ್ತು ಇಟಲಿ ನಾಯಕರ ಮುಂದೆ ನಿಂತು ಜೀ ಹುಜೂರ್ ಎನ್ನುವ ನಿಮ್ಮಂತಹ ಗುಲಾಮರಿಗೆ ಹಳ್ಳಿಗರ ಸ್ವಾಭಿಮಾನ ಎಂದಿಗೂ ಅರ್ಥವಾಗುವುದಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದೆ.

2028ಕ್ಕೆ ಕಾಂಗ್ರೆಸ್ ಪಕ್ಷವನ್ನು ತಿಪ್ಪೆಗುಂಡಿಗೆ ಎಸೆಯುತ್ತಾರೆ

ಸರ್ಕಾರದ ಆಡಳಿತ ವೈಖರಿಯನ್ನು ಪ್ರಶ್ನಿಸಿರುವ ಜೆಡಿಎಸ್, ನಿಮ್ಮ ಆಡಳಿತದಲ್ಲಿ ಜನಸಾಮಾನ್ಯರಿಗೆ ಕಿಂಚಿತ್ತೂ ಒಳಿತಾಗಿಲ್ಲ, ಆದರೆ ನಿಮ್ಮ ಶೋಕಿ ಹಾಗೂ ವ್ಯಂಗ್ಯದ ಮಾತುಗಳಿಗೆ ಮಾತ್ರ ಯಾವುದೇ ಕೊರತೆಯಿಲ್ಲ. ಹವಾನಿಯಂತ್ರಿತ ಎಸಿ ಕೊಠಡಿಯಲ್ಲಿ ಕುಳಿತುಕೊಳ್ಳುವ ಇಟಲಿ ಕಾಂಗ್ರೆಸ್‌ನ ಗುಲಾಮರಿಗೆ ಹಳ್ಳಿಯ ಮಣ್ಣಿನ ಬೆವರಿನ ಬೆಲೆ ಏನು ಗೊತ್ತು ಎಂದು ಪ್ರಶ್ನಿಸಿದೆ.

ಇದೇ ವೇಳೆ ಮುಂದಿನ ಚುನಾವಣೆಯ ಎಚ್ಚರಿಕೆ ನೀಡಿರುವ ಜೆಡಿಎಸ್, ಮರೆಯಬೇಡಿ ಇಟಲಿ ಪ್ರಿಯಾಂಕ್ ಖರ್ಗೆಯವರೇ, ಚುನಾವಣೆ ಬಂದಾಗ ನೀವು ಇದೇ ಹಳ್ಳಿ ಗುಗ್ಗುಗಳ ಮನೆ ಬಾಗಿಲಿಗೆ ವೋಟು ಭಿಕ್ಷೆ ಬೇಡಿಕೊಂಡು ಬರಲೇಬೇಕು. ಹಳ್ಳಿಯ ಜನರು ಸ್ವಭಾವತಃ ಮುಗ್ಧರಿರಬಹುದು, ಆದರೆ ನಿಮ್ಮ ಕಪಟ ರಾಜಕಾರಣವನ್ನು ಅರ್ಥಮಾಡಿಕೊಳ್ಳಲಾಗದಷ್ಟು ದಡ್ಡರೇನಲ್ಲ. ನೀವು ಅವಮಾನಿಸಿದ ಇದೇ ಹಳ್ಳಿಗರು 2028ರ ಚುನಾವಣೆಯಲ್ಲಿ ಮತಯಂತ್ರದ ಗುಂಡಿ ಒತ್ತುವಾಗ ನಿಮ್ಮನ್ನು ಮತ್ತು ನಿಮ್ಮ ಕಾಂಗ್ರೆಸ್ ಪಕ್ಷವನ್ನು ಶಾಶ್ವತವಾಗಿ ತಿಪ್ಪೆಗುಂಡಿಗೆ ಎಸೆಯುತ್ತಾರೆ ಎಂದು ಭವಿಷ್ಯ ನುಡಿದಿದೆ.

ShareTweetSendShare
Join us on:

Related Posts

ರೈತರಿಗೆ ದೀಪಾವಳಿ ಉಡುಗೊರೆ; ಬರ ಪರಿಹಾರ ₹5,000ಕ್ಕೆ ಹೆಚ್ಚಳ, ₹1,250 ಕೋಟಿ ಹಣ ವರ್ಗಾವಣೆಗೆ ಚಾಲನೆ

ರೈತರಿಗೆ ದೀಪಾವಳಿ ಉಡುಗೊರೆ; ಬರ ಪರಿಹಾರ ₹5,000ಕ್ಕೆ ಹೆಚ್ಚಳ, ₹1,250 ಕೋಟಿ ಹಣ ವರ್ಗಾವಣೆಗೆ ಚಾಲನೆ

by Shwetha
November 6, 2026
0

ರಾಜ್ಯದ ಬರಪೀಡಿತ ರೈತರಿಗೆ ದೀಪಾವಳಿ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಸಿಹಿ ಸುದ್ದಿ ನೀಡಿದೆ. ಈ ಹಿಂದೆ ಪ್ರತಿ ರೈತರಿಗೆ ಘೋಷಿಸಿದ್ದ ₹2,500 ಬರ ಪರಿಹಾರದ ಮೊತ್ತವನ್ನು ಒಟ್ಟು...

ರಣಬೀರ್ ಕಪೂರ್–ಯಶ್ ಅಭಿನಯದ ‘ರಾಮಾಯಣ’: ರಾಮನಾಗಿ ರಣಬೀರ್, ರಾವಣನಾಗಿ ರಾಕಿಂಗ್ ಸ್ಟಾರ್

ರಣಬೀರ್ ಕಪೂರ್–ಯಶ್ ಅಭಿನಯದ ‘ರಾಮಾಯಣ’: ರಾಮನಾಗಿ ರಣಬೀರ್, ರಾವಣನಾಗಿ ರಾಕಿಂಗ್ ಸ್ಟಾರ್

by Shwetha
November 6, 2026
0

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ರಾಮಾಯಣ’ ಇದೀಗ ದೇಶಾದ್ಯಂತ ಸಿನಿಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಕನ್ನಡದ ರಾಕಿಂಗ್ ಸ್ಟಾರ್ ಯಶ್...

ಹಾಲು, ಬಸ್ ದರ ಏರಿಕೆ ಬಿಸಿಯ ನಡುವೆಯೇ ಸಿದ್ದರಾಮಯ್ಯನವರ ಹಳೆಯ ವಿಡಿಯೋ ವೈರಲ್: ಬೆಲೆ ಇಳಿಸುತ್ತೇವೆ ಎಂದವರು ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ನೆಟ್ಟಿಗರ ಆಕ್ರೋಶ

ಹಾಲು, ಬಸ್ ದರ ಏರಿಕೆ ಬಿಸಿಯ ನಡುವೆಯೇ ಸಿದ್ದರಾಮಯ್ಯನವರ ಹಳೆಯ ವಿಡಿಯೋ ವೈರಲ್: ಬೆಲೆ ಇಳಿಸುತ್ತೇವೆ ಎಂದವರು ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ನೆಟ್ಟಿಗರ ಆಕ್ರೋಶ

by Shwetha
November 6, 2026
0

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗಷ್ಟೇ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಏರಿಸಿ ಜನಸಾಮಾನ್ಯರಿಗೆ ಶಾಕ್ ನೀಡಿದ್ದ ರಾಜ್ಯ ಸರ್ಕಾರವು, ಇದೀಗ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಪ್ರಯಾಣ...

ದಿನ ಭವಿಷ್ಯ (19-10-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (6-11-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
November 6, 2026
0

ದಿನ ಭವಿಷ್ಯ: 6-11-2026 1. ಮೇಷ ರಾಶಿ (ಅಶ್ವಿನಿ, ಭರಣಿ, ಕೃತ್ತಿಕಾ 1ನೇ ಪಾದ) ಗ್ರಹ ಸ್ಥಿತಿ: ಚಂದ್ರನು ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿ (ರೋಗ ಮತ್ತು...

congress-government-bus-fare-hike-people-extortion-r-ashoka-protest

ಹಬ್ಬದ ಸಮಯದಲ್ಲಿ ಕರಾಳ ಮುಖ ತೋರಿಸಿದ ಕಾಂಗ್ರೆಸ್‌, ಕಲೆಕ್ಷನ್‌ನಲ್ಲಿ ಫಸ್ಟ್‌, ಜನಸೇವೆಯಲ್ಲಿ ಲಾಸ್ಟ್‌

by admin
November 5, 2026
0

ಬೆಂಗಳೂರು, ಕಾಂಗ್ರೆಸ್‌ ಸರ್ಕಾರ ಉಚಿತ ಗ್ಯಾರಂಟಿಗಳಿಗಾಗಿ ಜನರಿಂದ ಸುಲಿಗೆ ಮಾಡುತ್ತಿದೆ. ಇದರ ವಿರುದ್ಧ ಇನ್ನೂ ಒಂದು ವಾರ ಪ್ರತಿಭಟಿಸಲಾಗುವುದು. ಹಾಗೆಯೇ ಅಧಿವೇಶನದಲ್ಲೂ ಪ್ರಶ್ನೆ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram