ADVERTISEMENT
Thursday, November 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ʻಹುಬ್ಬಳ್ಳಿ ಹಂಟರ್ಸ್ʼ ಚಿತ್ರದ ‘ಹುಬ್ಬಳ್ಳಿ ದ ಜಾದು..’ ಲಿರಿಕಲ್ ಸಾಂಗ್ ಬಿಡುಗಡೆ: ಉತ್ತರ ಕರ್ನಾಟಕ ಸೊಗಡಿನ ಚಿತ್ರಕ್ಕೆ ಪ್ರತಾಪ್ ಸಿಂಹ ಶುಭಹಾರೈಕೆ

admin by admin
November 19, 2026
in Cinema, Newsbeat, ಮನರಂಜನೆ
hubballi-hunters-hubballi-da-jadoo-lyrical-song-release-pratap-simha-december-11

hubballi-hunters-hubballi-da-jadoo-lyrical-song-release-pratap-simha-december-11

Share on FacebookShare on TwitterShare on WhatsappShare on Telegram

ಬೆಂಗಳೂರು: ಉತ್ತರ ಕರ್ನಾಟಕದ ವಿಶಿಷ್ಟ ಭಾಷಾ ಸೊಗಡು ಮತ್ತು ಹಾಸ್ಯದ ಹಿನ್ನೆಲೆಯನ್ನಿಟ್ಟುಕೊಂಡು ತಯಾರಾಗುತ್ತಿರುವ ‘ಹುಬ್ಬಳ್ಳಿ ಹಂಟರ್ಸ್’ ಚಿತ್ರದ ಬಹುನಿರೀಕ್ಷಿತ ‘ಹುಬ್ಬಳ್ಳಿ ದ ಜಾದು..’ ಲಿರಿಕಲ್ ವಿಡಿಯೋ ಹಾಡು ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ. ಜನಪ್ರಿಯ ‘ರಿಷಬ್ ಶೆಟ್ಟಿ ಮ್ಯೂಸಿಕ್’ ಆಡಿಯೋ ಸಂಸ್ಥೆಯ ಮೂಲಕ ಬಿಡುಗಡೆಯಾಗಿರುವ ಈ ಇಂಪಾದ ಗೀತೆಯನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಪ್ರಸನ್ನ ಕೇಶವ ಕೆ.ಎಸ್. ಸಂಗೀತ ಸಂಯೋಜಿಸಿರುವ ಈ ಹಾಡಿಗೆ ತ್ರಿಲೋಕ್ ತ್ರಿವಿಕ್ರಮ ಅರ್ಥಪೂರ್ಣ ಸಾಹಿತ್ಯ ರಚಿಸಿದ್ದು, ಗಾಯಕ ವ್ಯಾಸರಾಜ್ ಸೋಸಲೆ ಧ್ವನಿ ನೀಡಿದ್ದಾರೆ.

ಹಾಡು ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, “ನಾನು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಲದಿಂದಲೂ ಉತ್ತರ ಕರ್ನಾಟಕದ ಜನರ ಜೊತೆ ಒಡನಾಟ ಹೊಂದಿದ್ದೇನೆ. ಹಾಗಾಗಿ, ಅಲ್ಲಿನ ಭಾಷೆ, ಶೈಲಿ ಹಾಗೂ ಬೈಗುಳಗಳು ನನಗೆ ಬಹಳ ಚೆನ್ನಾಗಿ ಅರ್ಥವಾಗುತ್ತವೆ. ಅಲ್ಲಿನ ಬೈಗುಳಗಳಲ್ಲೂ ಒಂದು ರೀತಿಯ ಮುಗ್ಧತೆ ಹಾಗೂ ಅಕ್ಕರೆ ಇರುತ್ತದೆ. ಉತ್ತರ ಕರ್ನಾಟಕದ ಭಾಷೆ ನೇರವಾಗಿ ಮನಸ್ಸಿಗೆ ತಟ್ಟುವಂತಹ ಅಪರೂಪದ ಆಪ್ತತೆಯನ್ನು ಹೊಂದಿದೆ. ಈ ಚಿತ್ರದ ಮೂಲಕ ಆ ಭಾಷೆಯ ಸೊಗಡು ಇಡೀ ಕರ್ನಾಟಕದ ಜನರನ್ನು ತಲುಪಲಿ ಹಾಗೂ ಸಿನಿಮಾ ದೊಡ್ಡ ಯಶಸ್ಸು ಕಾಣಲಿ” ಎಂದು ಹಾರೈಸಿದರು.

Related posts

bhavantara-kannada-movie-karthik-sharma-audience-response-review

ಕಂಟೆಂಟ್‌ ಸಿನಿಮಾಗಳಿಗೆ ಕನ್ನಡಿಗರ ಜೈಕಾರ; ಕಾರ್ತಿಕ್‌ ಶರ್ಮಾ ನಿರ್ದೇಶನದ ‘ಭಾವಾಂತರ’ ಚಿತ್ರಕ್ಕೆ ಪ್ರೇಕ್ಷಕರ ಮನದಾಳದ ಮೆಚ್ಚುಗೆ

November 19, 2026
lambodara-2-0-kiran-mazumdar-shaw-praises-simple-suni-movie-november-13-release

‘ಲಂಬೋದರ 2.0’ ಚಿತ್ರಕ್ಕೆ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಮೆಚ್ಚುಗೆ; ನ.13ರಂದು ಕನ್ನಡ ಮತ್ತು ಹಿಂದಿಯಲ್ಲಿ ಅದ್ಧೂರಿ ಬಿಡುಗಡೆ

November 19, 2026

ಚಿತ್ರದಲ್ಲಿ ‘ಪಾಂಡು ಅಣ್ಣ’ ಎಂಬ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಖ್ಯಾತ ನಟ ಪ್ರಮೋದ್ ಶೆಟ್ಟಿ ಚಿತ್ರದ ಭಾಷಾ ಪ್ರಯೋಗದ ಬಗ್ಗೆ ಮಾತನಾಡುತ್ತಾ, “ಇದು ಸಂಪೂರ್ಣ ಮನರಂಜನೆಯಿಂದ ಕೂಡಿದ, ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಸಿನಿಮಾ. ಆರಂಭದಲ್ಲಿ ಕಥೆ ಕೇಳಿದಾಗ, ಇಡೀ ಚಿತ್ರವನ್ನು ಉತ್ತರ ಕರ್ನಾಟಕ ಸ್ಲ್ಯಾಂಗ್‌ನಲ್ಲೇ ಮಾಡಬೇಕೇ ಅಥವಾ ಬೆಂಗಳೂರು ಕನ್ನಡವನ್ನೂ ಬೆರೆಸಬೇಕೇ ಎಂಬ ಬಗ್ಗೆ ನಿರ್ದೇಶಕ ಸಾಮರ್ಥ್ ಮತ್ತು ನಿರ್ಮಾಪಕರ ಜೊತೆ ಸಾಕಷ್ಟು ಚರ್ಚೆ ನಡೆಯಿತು. ಪ್ರೇಕ್ಷಕರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕ ಕೆಲವರಿಗಿತ್ತು. ಆದರೆ, ಹಿಂದೆ ಕರಾವಳಿ ಕನ್ನಡ ಕೇವಲ ಹಾಸ್ಯಕ್ಕೆ ಸೀಮಿತವಾಗಿದ್ದು, ಇಂದು ಅದೇ ಭಾಷೆಯ ಸಿನಿಮಾಗಳನ್ನು ಕನ್ನಡಿಗರು ಮುಗಿಬಿದ್ದು ನೋಡುತ್ತಿರುವುದನ್ನು ಉದಾಹರಣೆಯಾಗಿ ನೀಡಿ ಹಠ ಹಿಡಿದು ಪೂರ್ಣ ಪ್ರಮಾಣದಲ್ಲಿ ಉತ್ತರ ಕರ್ನಾಟಕದ ಶೈಲಿಯಲ್ಲೇ ಸಿನಿಮಾ ಮಾಡಲು ಒಪ್ಪಿಸಿದೆ. ಆ ಭಾಗದಲ್ಲಿ ಅದ್ಭುತ ಪ್ರತಿಭೆಗಳಿದ್ದು, ವಿವಿಧ ಪ್ರಾದೇಶಿಕ ಭಾಷೆಗಳು ಚಿತ್ರರಂಗಕ್ಕೆ ಬಂದಷ್ಟೂ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚುತ್ತದೆ” ಎಂದು ಚಿತ್ರೀಕರಣದ ದಿನಗಳನ್ನು ಮೆಲುಕು ಹಾಕಿದರು.

ಗೋಲ್ಡನ್ ಹಾರ್ಸ್ ಸಿನಿಮಾ ಬ್ಯಾನರ್ ಅಡಿಯಲ್ಲಿ ಸಂತೋಷ್ ಕುಮಾರ್ ಕೆ.ಸಿ. ನಿರ್ಮಿಸಿರುವ ಈ ಚಿತ್ರಕ್ಕೆ ಸಮರ್ಥ್ ಬಿ. ಕಡಕೋಳ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಿರುವ ಪ್ರತಿಭಾವಂತ ಕಂಟೆಂಟ್ ಕ್ರಿಯೇಟರ್ಸ್‌ ತಂಡವೊಂದು ಈ ಸಿನಿಮಾದ ಮೂಲಕ ಹಿರಿತೆರೆಯಲ್ಲಿ ಹೊಸ ಪ್ರಯೋಗಕ್ಕೆ ಮುನ್ನುಡಿ ಬರೆದಿದೆ. ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ನಮನ್ ಅರೋರ, ಚೇತನ್ ಮಾರಂಬೀಡ್, ಪವನ್ ಕೃಷ್ಣರಾವ್ ಕುಲಕರ್ಣಿ, ಸುಮಿತ್ ಸಂಕೋಜಿ, ಧನ್ಯಶ್ರೀ ಸುಜಿತ್, ದೀಪಕ್ ರಾವ್, ಶಿವು ಎನ್.ಜಿ., ವನು ಪಾಟೀಲ್, ಪವನ್ ಆನೆಗೇರಿ, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ರಮೇಶ್ ಭಟ್, ವಿನಯ್ ದೊಡ್ಡಮನಿ ಸೇರಿದಂತೆ ದೊಡ್ಡ ತಾರಾಗಣವಿದೆ.

ಧಾರವಾಡ ಮತ್ತು ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ರಾಹುಲ್ ವಿ. ಪಾರ್ವತಿಕರ್, ಅಮಿತ್ ಕಾರ್ವರ್ ಹಾಗೂ ಚೇತನ್ ಮರಂಬೀದ್ ಸಂಭಾಷಣೆ ಹೆಣೆದಿದ್ದು, ಅಭಿಮನ್ಯು ಸದಾನಂದನ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಪ್ರಸನ್ನ ಕೇಶವ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಕೂಡ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸದ್ಯ ಮೊದಲ ಹಾಡಿನ ಮೂಲಕ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಚಿತ್ರತಂಡ, ಶೀಘ್ರದಲ್ಲೇ ಟೀಸರ್ ಹಾಗೂ ಉಳಿದ ಹಾಡುಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಸಿನಿಮಾವು ಡಿಸೆಂಬರ್ 11ರಂದು ತೆರೆಕಾಣಲಿದೆ.

ShareTweetSendShare
Join us on:

Related Posts

bhavantara-kannada-movie-karthik-sharma-audience-response-review

ಕಂಟೆಂಟ್‌ ಸಿನಿಮಾಗಳಿಗೆ ಕನ್ನಡಿಗರ ಜೈಕಾರ; ಕಾರ್ತಿಕ್‌ ಶರ್ಮಾ ನಿರ್ದೇಶನದ ‘ಭಾವಾಂತರ’ ಚಿತ್ರಕ್ಕೆ ಪ್ರೇಕ್ಷಕರ ಮನದಾಳದ ಮೆಚ್ಚುಗೆ

by admin
November 19, 2026
0

ಬೆಂಗಳೂರು: ಕಮರ್ಷಿಯಲ್ ಚಿತ್ರಗಳ ಅಬ್ಬರದ ನಡುವೆಯೂ, ನೈಜ ಕಥಾವಸ್ತು ಮತ್ತು ಭಾವನಾತ್ಮಕ ನಿರೂಪಣೆಯನ್ನು ಹೊತ್ತು ಬಂದಿರುವ ಕನ್ನಡದ ‘ಭಾವಾಂತರ’ ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಗಾಢವಾಗಿ ತಟ್ಟುವಲ್ಲಿ ಯಶಸ್ವಿಯಾಗಿದೆ....

lambodara-2-0-kiran-mazumdar-shaw-praises-simple-suni-movie-november-13-release

‘ಲಂಬೋದರ 2.0’ ಚಿತ್ರಕ್ಕೆ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಮೆಚ್ಚುಗೆ; ನ.13ರಂದು ಕನ್ನಡ ಮತ್ತು ಹಿಂದಿಯಲ್ಲಿ ಅದ್ಧೂರಿ ಬಿಡುಗಡೆ

by admin
November 19, 2026
0

ಬೆಂಗಳೂರು: ನಿರ್ದೇಶಕ ‘ಸಿಂಪಲ್’ ಸುನಿ ಸಾರಥ್ಯದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ‘ಲಂಬೋದರ 2.0’ ಸಿನಿಮಾ ಬಿಡುಗಡೆಗೂ ಮುನ್ನವೇ ಸಿನಿಪ್ರಿಯರ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ನವೆಂಬರ್ 13ರಂದು ಚಿತ್ರ...

my-baby-movie-maathu-neene-first-song-release-november-11-ar-rahman-pritham-gubbi

ಪ್ರೀತಮ್ ಗುಬ್ಬಿ ನಿರ್ದೇಶನದ ‘ಮೈ ಬೇಬಿ’ ಮೊದಲ ಹಾಡಿಗೆ ಎ.ಆರ್‌. ರೆಹಮಾನ್ ಸಾಥ್; ನವೆಂಬರ್ 11ರಂದು ‘ಮಾತು ನೀನೆ’ ಸಾಂಗ್‌ ರಿಲೀಸ್!

by admin
November 19, 2026
0

ಬೆಂಗಳೂರು: ರೊಮ್ಯಾಂಟಿಕ್ ಸಿನಿಮಾಗಳ ಮೂಲಕ ಮೋಡಿ ಮಾಡೋ ಪ್ರೀತಮ್ ಗುಬ್ಬಿ ನಿರ್ದೇಶನದ ಹೊಸ ಸಿನಿಮಾ 'ಮೈ ಬೇಬಿ'ಯಿಂದ ಒಂದು ಬಿಗ್ ಅಪ್ಡೇಟ್ ಬಂದಿದೆ. ಚಿತ್ರದ ಮೊದಲ ಸಾಂಗ್...

polimera-3-arjun-sarja-viravi-first-look-glimpse-multilingual-release

‘ಪೊಲಿಮೇರ 3’ ಚಿತ್ರದಲ್ಲಿ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ‘ವಿರಾವಿ’ ಫಸ್ಟ್ ಲುಕ್ ಅನಾವರಣ: ಶೀಘ್ರದಲ್ಲೇ ಬಹುಭಾಷೆಗಳಲ್ಲಿ ಅದ್ಧೂರಿ ಬಿಡುಗಡೆ

by admin
November 19, 2026
0

ಹೈದರಾಬಾದ್: ​ತೆಲುಗು ಚಿತ್ರರಂಗದಲ್ಲಿ ಅಪಾರ ಮೆಚ್ಚುಗೆ ಪಡೆದ ಮಿಸ್ಟಿಕ್ ಥ್ರಿಲ್ಲರ್ ಸರಣಿಯ ಬಹುನಿರೀಕ್ಷಿತ ಮೂರನೇ ಭಾಗ ‘ಪೊಲಿಮೇರ 3’ ಸಿನಿಮಾದಿಂದ ವಿಶೇಷ ಅಪ್‌ಡೇಟ್ ಹೊರಬಿದ್ದಿದೆ. ದೀಪಾವಳಿ ಹಬ್ಬದ...

devi-mahatme-movie-ede-suduthide-gaaya-video-song-ananya-bhat-rangayana-raghu-december-4-release

ಹೊಂಬಾಳೆ ಮ್ಯೂಸಿಕ್‌ನಲ್ಲಿ ಬಿಡುಗಡೆಯಾಯ್ತು ‘ದೇವಿ ಮಹಾತ್ಮೆ’ ಚಿತ್ರದ ‘ಎದೆ ಸುಡುತಿದೆ ಗಾಯ’ ವಿಡಿಯೋ ಸಾಂಗ್; ಈ ಹಾಡಿನಲ್ಲಿ ಮಿಂಚಿದ ಗಾಯಕಿ ಅನನ್ಯಾ ಭಟ್

by admin
November 19, 2026
0

ಕನ್ನಡ ಚಿತ್ರರಂಗದ ಖ್ಯಾತ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ‘ದೇವಿ ಮಹಾತ್ಮೆ’ ಚಿತ್ರದ ‘ಎದೆ ಸುಡುತಿದೆ ಗಾಯ’ ಎಂಬ ಭಾವಪೂರ್ಣ ವಿಡಿಯೋ ಸಾಂಗ್‌...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram