ADVERTISEMENT
Saturday, November 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಎ.ಪಿ. ಅರ್ಜುನ್‌ ನಿರ್ಮಾಣದ ‘ಲಕ್ಷ್ಮೀಪುತ್ರ’ ಟ್ರೇಲರ್ ರಿಲೀಸ್: ಚಿಕ್ಕಣ್ಣನ ಡ್ಯಾನ್ಸ್-ನಟನೆಗೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಫಿದಾ

admin by admin
November 19, 2026
in Cinema, Newsbeat, ಮನರಂಜನೆ
lakshmiputra-trailer-release-chikkanna-shivarajkumar-ap-arjun lakshmiputra-trailer-release-chikkanna-shivarajkumar-ap-arjun

lakshmiputra-trailer-release-chikkanna-shivarajkumar-ap-arjun

Share on FacebookShare on TwitterShare on WhatsappShare on Telegram

ಬೆಂಗಳೂರು: ಎ.ಪಿ. ಅರ್ಜುನ್ ಸಾರಥ್ಯದಲ್ಲಿ ಮೂಡಿಬಂದಿರುವ ‘ಲಕ್ಷ್ಮೀಪುತ್ರ’ ಚಿತ್ರವನ್ನು ಅನ್ನಪೂರ್ಣ ಎ.ಪಿ. ಅರ್ಜುನ್ ನಿರ್ಮಾಣ ಮಾಡಿದ್ದು, ರವಿಕುಮಾರ್ ಅವರು ಸಹ ನಿರ್ಮಾಪಕರಾಗಿದ್ದಾರೆ.

​ಎ.ಪಿ. ಅರ್ಜುನ್ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದಿದ್ದು, ಸಂಭಾಷಣೆಯಲ್ಲಿ ಪ್ರಶಾಂತ್ ರಾಜಪ್ಪ ಮತ್ತು ವಿಜಯ್ ಈಶ್ವರ್ ಕೈಜೋಡಿಸಿದ್ದಾರೆ. ಹಾಗೂ ವಿಜಯ್ ಎಸ್. ಸ್ವಾಮಿ ಅವರ ಚೊಚ್ಚಲ ನಿರ್ದೇಶನ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

Related posts

ನಿಮ್ಮ ಮಗುವಿನ ಅತಿಯಾದ (ಉದ್ಧಟತನದಿಂದ) ತುಂಟತನದ ಸರಿಪಡಿಸುವ ಮಾರ್ಗಗಳು

ನಿಮ್ಮ ಮಗುವಿನ ಅತಿಯಾದ (ಉದ್ಧಟತನದಿಂದ) ತುಂಟತನದ ಸರಿಪಡಿಸುವ ಮಾರ್ಗಗಳು

November 20, 2026
ಗುಪ್ತ ಆಂಜನೇಯ ಸ್ವಾಮಿಯ ಮಂತ್ರ ಇದನ್ನು ಕೇವಲ ಹೇಳಿದರೆ ಸಹ ನಿಮ್ಮ ಎಲ್ಲ ತೊಂದರೆಗಳು ದೂರವಾಗುತ್ತದೆ 24ಗಂಟೆಯಲ್ಲಿ ಪ್ರಭುವ ನೀವೇ ನೋಡಿ..

ಗುಪ್ತ ಆಂಜನೇಯ ಸ್ವಾಮಿಯ ಮಂತ್ರ ಇದನ್ನು ಕೇವಲ ಹೇಳಿದರೆ ಸಹ ನಿಮ್ಮ ಎಲ್ಲ ತೊಂದರೆಗಳು ದೂರವಾಗುತ್ತದೆ 24ಗಂಟೆಯಲ್ಲಿ ಪ್ರಭುವ ನೀವೇ ನೋಡಿ..

November 20, 2026

‘ಉಪಾಧ್ಯಕ್ಷ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಟ ಚಿಕ್ಕಣ್ಣ ನಾಯಕನಾಗಿ ನಟಿಸಿರುವ ಎರಡನೇ ಸಿನಿಮಾ ಈ ಚಿತ್ರದ ಟ್ರೇಲರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಹಾಸ್ಯದ ಜೊತೆಗೆ ಭರ್ಜರಿ ಆ್ಯಕ್ಷನ್ ಮತ್ತು ಭಾವನಾತ್ಮಕ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಅನ್ನು ‘ಕರುನಾಡ ಚಕ್ರವರ್ತಿ’ ಡಾ. ಶಿವರಾಜ್‌ಕುಮಾರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಹಳ್ಳಿ ಹುಡುಗನ ಗೆಟಪ್‌ನಲ್ಲಿ ಚಿಕ್ಕಣ್ಣ ಗಮನ ಸೆಳೆದಿದ್ದು, ಹಿರಿಯ ನಟಿ ತಾರಾ ಅವರು ಚಿಕ್ಕಣ್ಣನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎ.ಪಿ. ಅರ್ಜುನ್ ಅವರ ನಿರ್ಮಾಣ ಹಾಗೂ ಸಾರಥ್ಯದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದು, ಇದೇ 27ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ನಟ ಶಿವರಾಜ್‌ಕುಮಾರ್, ಚಿಕ್ಕಣ್ಣ ಅವರ ನಟನೆ ಮತ್ತು ನೃತ್ಯವನ್ನು ಮನಸಾರೆ ಕೊಂಡಾಡಿದರು. “ಚಿಕ್ಕಣ್ಣ ಹಿಂದಿನ ಸಿನಿಮಾಗಳಿಗಿಂತಲೂ ಈ ಚಿತ್ರದಲ್ಲಿ ತುಂಬಾ ಲೀಲಾಜಾಲವಾಗಿ ಡ್ಯಾನ್ಸ್ ಮಾಡಿದ್ದಾರೆ. ಅವರ ಡ್ಯಾನ್ಸ್ ನೋಡಿದರೆ ನನಗೆ ಪ್ರಭುದೇವ ಅವರ ನೆನಪಾಗುತ್ತದೆ. ಭೂಷಣ್ ಮತ್ತು ಹರ್ಷ ಮಾಸ್ಟರ್ ಅವರ ಕೊರಿಯೋಗ್ರಫಿ ಹಾಗೂ ಅರ್ಜುನ್ ಜನ್ಯ ಅವರ ಮೂರು ಹಾಡುಗಳು ಅದ್ಭುತವಾಗಿವೆ. ವಿಶೇಷವಾಗಿ ತಾಯಿ ಸೆಂಟಿಮೆಂಟ್ ಹಾಡಿನಲ್ಲಿ ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್, ಶಂಕರ್ ನಾಗ್ ಅವರ ತಾಯಂದಿರ ಫೋಟೋಗಳನ್ನು ಬಳಸಿರುವುದು ಮೈ ರೋಮಾಂಚನಗೊಳಿಸುತ್ತದೆ” ಎಂದು ಭಾವುಕರಾದರು. ತಾಯಿ ಪ್ರೀತಿಯ ಬಗ್ಗೆ ತಮ್ಮ ಬಾಲ್ಯದ ತುಂಟಾಟಗಳನ್ನು ನೆನೆದ ಶಿವಣ್ಣ, ಅಮ್ಮ ಹೊಡೆಯಲು ಬಂದಾಗ 20 ಅಡಿ ಮಹಡಿಯಿಂದ ಜಿಗಿದಿದ್ದ ಘಟನೆಯನ್ನೂ ಹಂಚಿಕೊಂಡರು. ಅಲ್ಲದೆ, “ಚಿಕ್ಕಣ್ಣ ಅವರ ಹಾಸ್ಯದಲ್ಲಿ ಆಡಂಬರವಿಲ್ಲ, ಬಹಳ ಸಟಲ್ ಆಗಿ ನಟಿಸುತ್ತಾರೆ. ಬರೆದಿಟ್ಟುಕೊಳ್ಳಿ, ಇನ್ನೆರಡು-ಮೂರು ವರ್ಷಗಳಲ್ಲಿ ಚಿಕ್ಕಣ್ಣ ದೊಡ್ಡ ಸೂಪರ್ ಸ್ಟಾರ್ ಆಗುತ್ತಾರೆ” ಎಂದು ಭವಿಷ್ಯ ನುಡಿದರು. ನಾಯಕಿ ವಂದಿತಾ ಹಾಗೂ ತಾರಾ ಅವರ ಅಭಿನಯಕ್ಕೂ ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿವರಾಜ್‌ಕುಮಾರ್ ಅವರ ಈ ಮಾತುಗಳಿಗೆ ಭಾವುಕರಾಗಿ ಪ್ರತಿಕ್ರಿಯಿಸಿದ ನಟ ಚಿಕ್ಕಣ್ಣ, “ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಎಲ್ಲದಕ್ಕಿಂತ ಹೆಚ್ಚಾಗಿ ಅಣ್ಣಾವ್ರ ಮಗನ ಬಾಯಲ್ಲಿ ಇಂತಹ ಮಾತು ಕೇಳಿರುವುದು ನಮ್ಮ ತಂದೆ-ತಾಯಿ ಮಾಡಿದ ಪುಣ್ಯ. ಈ ಮಾತು ಕೇಳಿದಾಗಲೇ ನಾನು ಸೂಪರ್ ಸ್ಟಾರ್ ಆದಷ್ಟೇ ಖುಷಿಯಾಯಿತು” ಎಂದು ಸಂತಸ ಹಂಚಿಕೊಂಡರು. ತಮ್ಮ ಪಾತ್ರ ಮತ್ತು ಚಿತ್ರದ ಬಗ್ಗೆ ಮಾತನಾಡಿದ ಅವರು, “ಇದು ಕೇವಲ ಕಾಮಿಡಿ ಅಥವಾ ಕಮರ್ಷಿಯಲ್ ಸಿನಿಮಾವಲ್ಲ, ಪ್ರತಿಯೊಬ್ಬ ಮಧ್ಯಮ ವರ್ಗದ ಹುಡುಗನ ಜೀವನದಲ್ಲಿ ನಡೆಯುವ ನೈಜ ಘಟನೆಗಳ ಕಥೆ. ಪ್ರೀತಿ, ಸ್ನೇಹ, ತಾಯಿ-ಮಗನ ಬಾಂಧವ್ಯ ಹೀಗೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ದೃಶ್ಯ ಕನೆಕ್ಟ್ ಆಗುತ್ತದೆ. ಇದೇ 27ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ಸಿನಿಮಾ ಇಷ್ಟವಾದರೆ ಮಾತ್ರ ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳಿ” ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದರು.

ಚಿತ್ರ ನಿರ್ಮಾಣದ ಹಾದಿಯ ಬಗ್ಗೆ ಮಾತನಾಡಿದ ಎ.ಪಿ. ಅರ್ಜುನ್, ಈ ಸಿನಿಮಾ ಸೆಟ್ಟೇರಲು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಆಶೀರ್ವಾದವೇ ಕಾರಣ ಎಂದು ಸ್ಮರಿಸಿದರು. “ಚಿತ್ರವನ್ನು ಹೇಗೆ ಶುರು ಮಾಡುವುದೆಂದು ತೋಚದಿದ್ದಾಗ ಮಂತ್ರಾಲಯಕ್ಕೆ ಹೋಗಿ ದರ್ಶನ ಪಡೆದು ಬಂದ ತಕ್ಷಣವೇ ನೇರವಾಗಿ ಸಿನಿಮಾದ ಶೂಟಿಂಗ್ ಶುರು ಮಾಡಿದೆವು. ಅಷ್ಟೇ ಅಲ್ಲದೆ, ಚಿತ್ರೀಕರಣದ ಸಮಯದಲ್ಲಿ ಎಷ್ಟೇ ಕಷ್ಟ ಬಂದರೂ ಪ್ರತಿ ಗುರುವಾರ ಹಣದ ವ್ಯವಸ್ಥೆಯಾಗಿ ಎಲ್ಲರಿಗೂ ತಲುಪುತ್ತಿತ್ತು. ನನ್ನ ಬೆನ್ನೆಲುಬಾಗಿ ನಿಂತ ಆರ್.ಕೆ. ರವಿಕುಮಾರ್, ಸಚಿವ ಸಂತೋಷ್ ಲಾಡ್ ಸೇರಿದಂತೆ ಚಿತ್ರಕ್ಕೆ ಸಹಕರಿಸಿದ ಅನೇಕರ ಹೆಸರುಗಳು ‘ರಾ’ ಅಕ್ಷರದಿಂದಲೇ ಆರಂಭವಾಗಿರುವುದು ರಾಯರ ಪವಾಡ” ಎಂದರು.

ತಮ್ಮ ಸಿನಿಮಾ ಪ್ರೀತಿಯ ಬಗ್ಗೆ ಮಾತು ಮುಂದುವರಿಸಿದ ಅರ್ಜುನ್, “ನನಗೆ ಸಣ್ಣ ಸಿನಿಮಾ, ದೊಡ್ಡ ಸಿನಿಮಾ ಎಂಬ ಭೇದವಿಲ್ಲ. ಕ್ಯಾಮೆರಾ ಮುಂದೆ ನಿಲ್ಲುವ ಪ್ರತಿಯೊಬ್ಬರೂ ನನಗೆ ಸೂಪರ್ ಸ್ಟಾರ್‌ಗಳೇ. ಈ ಸಿನಿಮಾಗೆ ಚಿಕ್ಕಣ್ಣನೇ ದೊಡ್ಡ ಸ್ಟಾರ್. ತಾರಮ್ಮ, ವಂದಿತಾ, ಮಿತ್ರ, ಶಿವರಾಜ್ ಕೆ.ಆರ್. ಪೇಟೆ, ಧರ್ಮಣ್ಣ, ಕುರಿ ಪ್ರತಾಪ್ ಸೇರಿದಂತೆ ಇಡೀ ತಂಡ ಅದ್ಭುತವಾಗಿ ಕೆಲಸ ಮಾಡಿದೆ. ಗುಣಮಟ್ಟದಲ್ಲಿ ಎಲ್ಲಿಯೂ ರಾಜಿಯಾಗದೆ, ಅದ್ದೂರಿಯಾಗಿ ಈ ಚಿತ್ರವನ್ನು ತೆರೆಗೆ ತಂದಿದ್ದೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ShareTweetSendShare
Join us on:

Related Posts

ನಿಮ್ಮ ಮಗುವಿನ ಅತಿಯಾದ (ಉದ್ಧಟತನದಿಂದ) ತುಂಟತನದ ಸರಿಪಡಿಸುವ ಮಾರ್ಗಗಳು

ನಿಮ್ಮ ಮಗುವಿನ ಅತಿಯಾದ (ಉದ್ಧಟತನದಿಂದ) ತುಂಟತನದ ಸರಿಪಡಿಸುವ ಮಾರ್ಗಗಳು

by Shwetha
November 20, 2026
0

"ನಿಮ್ಮ ಮಗು ಕೂಡ ಅಸಭ್ಯವಾಗಿ (ಉದ್ಧಟತನದಿಂದ) ವರ್ತಿಸುತ್ತಿದ್ದರೆ, ಮಾತು ಕೇಳದಿದ್ದರೆ, ಹೇಳಿದಂತೆ ನಡೆಯದಿದ್ದರೆ, ನೀವು ಒಂದು ಪರಿಹಾರವನ್ನು ಮಾಡಿ. ಆಗ ಮಗು ಓದುತ್ತದೆ ಮತ್ತು ನಿಮ್ಮ ಮಾತನ್ನೂ...

ಗುಪ್ತ ಆಂಜನೇಯ ಸ್ವಾಮಿಯ ಮಂತ್ರ ಇದನ್ನು ಕೇವಲ ಹೇಳಿದರೆ ಸಹ ನಿಮ್ಮ ಎಲ್ಲ ತೊಂದರೆಗಳು ದೂರವಾಗುತ್ತದೆ 24ಗಂಟೆಯಲ್ಲಿ ಪ್ರಭುವ ನೀವೇ ನೋಡಿ..

ಗುಪ್ತ ಆಂಜನೇಯ ಸ್ವಾಮಿಯ ಮಂತ್ರ ಇದನ್ನು ಕೇವಲ ಹೇಳಿದರೆ ಸಹ ನಿಮ್ಮ ಎಲ್ಲ ತೊಂದರೆಗಳು ದೂರವಾಗುತ್ತದೆ 24ಗಂಟೆಯಲ್ಲಿ ಪ್ರಭುವ ನೀವೇ ನೋಡಿ..

by Shwetha
November 20, 2026
0

ಕಲಿಯುಗದಲ್ಲಿ ಆಂಜನೇಯಸ್ವಾಮಿ ಆರಾಧನೆ ಮಾಡುವುದರಿಂದ ಉತ್ತಮ ಫಲಗಳು ಪ್ರಾಪ್ತಿಯಾಗುತ್ತದೆ ನಾವು ಅನೇಕ ದೇವರನ್ನು ಆರಾಧನೆ ಮಾಡುತ್ತೇವೆ ನಮ್ಮ ಕಷ್ಟಗಳು ನಿವಾರಣೆಯಾಗಲಿ ನಮ್ಮ ಇಷ್ಟಾರ್ಥಗಳು ಈಡೇರಬೇಕು ಎಂದು ಎಲ್ಲಾ...

ಅಡುಗೆ ಎಣ್ಣೆ ಮರುಬಳಕೆಗೆ ಬೀಳಲಿದೆ ಕಡಿವಾಣ: ಹೋಟೆಲ್‌ಗಳ ಮೇಲೆ ಹದ್ದಿನ ಕಣ್ಣಿಡಲು ಮೂರು ತಿಂಗಳಲ್ಲಿ ವಿಶೇಷ ಮೊಬೈಲ್ ಆಯಪ್ ಜಾರಿ!

ಅಡುಗೆ ಎಣ್ಣೆ ಮರುಬಳಕೆಗೆ ಬೀಳಲಿದೆ ಕಡಿವಾಣ: ಹೋಟೆಲ್‌ಗಳ ಮೇಲೆ ಹದ್ದಿನ ಕಣ್ಣಿಡಲು ಮೂರು ತಿಂಗಳಲ್ಲಿ ವಿಶೇಷ ಮೊಬೈಲ್ ಆಯಪ್ ಜಾರಿ!

by Shwetha
November 20, 2026
0

ಬೆಂಗಳೂರು: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಆಹಾರ ಸುರಕ್ಷತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಒಂದೇ ಅಡುಗೆ ಎಣ್ಣೆಯನ್ನು...

ಇಂಟರ್ನೆಟ್ ಬಳಸದವರಿಗೆ BSNLನಿಂದ 3 ಹೊಸ ರೀಚಾರ್ಜ್ ಪ್ಲಾನ್‌ಗಳು; ₹172ರಿಂದ ಆರಂಭ

ಇಂಟರ್ನೆಟ್ ಬಳಸದವರಿಗೆ BSNLನಿಂದ 3 ಹೊಸ ರೀಚಾರ್ಜ್ ಪ್ಲಾನ್‌ಗಳು; ₹172ರಿಂದ ಆರಂಭ

by Shwetha
November 20, 2026
0

ಇಂಟರ್ನೆಟ್ ಬಳಸದೇ ಕೇವಲ ಕರೆ ಮಾಡುವುದು, SMS ಕಳುಹಿಸುವುದು ಅಥವಾ ಬ್ಯಾಂಕ್‌ OTP ಪಡೆಯಲು ಮಾತ್ರ ಮೊಬೈಲ್ ಸಿಮ್ ಬಳಸುವವರಿದ್ದರೆ, ದುಬಾರಿ ರೀಚಾರ್ಜ್‌ಗೆ ಹಣ ಖರ್ಚು ಮಾಡುವ...

ಅಕ್ಕಿ ಬೆಲೆ ಏರಿಕೆ: ಕೆಜಿಗೆ ₹100ರ ಗಡಿಯತ್ತ ಸೋನಾ ಮಸೂರಿ; ಮುಂಗಾರು ಕೊರತೆಯಿಂದ ಪೂರೈಕೆಗೆ ಹೊಡೆತ

ಅಕ್ಕಿ ಬೆಲೆಯಲ್ಲಿ ದಿಢೀರ್ ಇಳಿಕೆ; ಸೋನಾ ಮಸೂರಿ ಕೆಜಿಗೆ ₹65–70ಕ್ಕೆ ಲಭ್ಯ

by Shwetha
November 20, 2026
0

ಅಕ್ಕಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಇದೀಗ ಕೊಂಚ ನಿರಾಳತೆ ಸಿಕ್ಕಿದೆ. ಕಳೆದ ಕೆಲವು ವಾರಗಳಿಂದ ಗಗನಕ್ಕೇರಿದ್ದ ಸೋನಾ ಮಸೂರಿ ಅಕ್ಕಿಯ ಬೆಲೆಯಲ್ಲಿ ಇದೀಗ ದಿಢೀರ್ ಇಳಿಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram