ಹೆಮ್ಮಾರಿ ಕೊರೊನಾ ವಿರುದ್ಧ ಹೋರಾಡಲು ಹೊಸ ಹೊಸ ತಂತ್ರ ರೂಪಿಸುತ್ತಿರುವ ಬಿಬಿಎಂಪಿ ಇದೀಗ ಕೊರೊನಾ ಜಾಗೃತಿಗಾಗಿ ಸ್ಯಾಂಡಲ್ವುಡ್ ತಾರೆಯರ ಮೊರೆಹೋಗಿದೆ. ಸಿಲಿಕಾನ್ ಸಿಟಿಯಲ್ಲಿ ಸೋಂಕಿತರ ಸಂಖ್ಯೆ ವ್ಯಾಪಕವಾಗಿ ಹರಡುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ ಸುಖಾಸುಮ್ಮನೆ ಓಡಾಡಬೇಡಿ ಅಂತಾ ಎಷ್ತೇ ಹೇಳಿದ್ರು ಹಲವರು ಈ ಬಗ್ಗೆ ಕ್ಯಾರೇ ಎನ್ನುತ್ತಿಲ್ಲ. ಹೀಗಿರುವಾಗ ಅನೇಕರು ರ‍್ಯಾಪಿಡ್ ಟೆಸ್ಟ್ ಹಾಗೂ ಸೋಂಕು ಕುರಿತು ಆತಂಕಕ್ಕೆ ಒಳಗಾಗಿದ್ದಾರೆ. ಉದ್ಯಾನನಗರಿಯಲ್ಲಿ ಶರವೇಗದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ಜನರಲ್ಲಿ ಈ ಕುರಿತಾಗಿ ಪರಿಣಾಮಕಾರಿಯಾಗಿ ಅರಿವು ಮೂಡಿಸುವ ಸಾಧ್ಯತೆಯಿದೆ. ಹೀಗಾಗಿಯೇ ಹೊಸ ರಣತಂತ್ರ ಹೆಣೆದಿರುವ ಪಾಲಿಕೆ ಸ್ಯಾಂಡಲ್ ತಾರೆಯರ ಮೊರೆ ಹೋಗಲು ನಿರ್ಧರಿಸಿದೆ. ಚಂದನವನದ ಸ್ಟಾರ್‌ಗಳಾದ ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್ ಸೇರಿ ಹಲವು ನಟರನ್ನು ಕೊರೊನಾ ಜಾಗೃತಿ ರಾಯಭಾರಿಗಳನ್ನಾಗಿ ಮಾಡಲು ನಿರ್ಧರಿಸಿದೆ.
ಡಿಕೆಶಿ ಮನಗೆಲ್ಲಲು ಹೊಸ ಅಸ್ತ್ರ: ‘ಭಾವಿ ಸಿಎಂ’ ಎಂದಾಕ್ಷಣ 50 ಕೋಟಿ ಅನುದಾನ ಮಂಜೂರು! ವಿಧಾನಸಭೆಯಲ್ಲಿ ಬಟಾ ಬಯಲಾಯ್ತು ‘BJP’ ಸೀಕ್ರೆಟ್
ಬೆಂಗಳೂರು: ರಾಜಕಾರಣದಲ್ಲಿ ಕೆಲಸ ಆಗಬೇಕೆಂದರೆ ಸಾಮ, ದಾನ, ಭೇದ, ದಂಡ ಎಲ್ಲವನ್ನೂ ಬಳಸಬೇಕು ಎಂಬ ಮಾತಿದೆ. ಆದರೆ, ಹಾಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್...







