ADVERTISEMENT
Thursday, November 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ದೇಶ - ವಿದೇಶ

ಮೋದಿ ತೇಜಸ್ಸಿನ ಮುಂದೆ ಸೂರ್ಯನ ಬೆಳಕೂ ಮಂದ: ಪ್ರಧಾನಿಯನ್ನು ಹಾಡಿ ಹೊಗಳಿದ ಕಟ್ಟಾ ವಿರೋಧಿ ಜಿರಳೆ ದೀಪ್ಕೆ! ಈ ದಿಢೀರ್ ಜಪದ ಅಸಲಿ ರಹಸ್ಯವೇನು?

Shwetha by Shwetha
November 26, 2026
in ದೇಶ - ವಿದೇಶ, National, Newsbeat
Share on FacebookShare on TwitterShare on WhatsappShare on Telegram

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯಂಥ ವ್ಯಕ್ತಿ ಅಧಿಕಾರದಲ್ಲಿದ್ದರೆ ಮಾತ್ರ ದೇಶದ ಕಲ್ಯಾಣ ಸಾಧ್ಯ, ಮೋದಿ ಇದ್ದರೆ ಎಲ್ಲವೂ ಸಾಧ್ಯ (ಮೋದಿ ಹೈ ತೋ ಮುಮ್‌ಕಿನ್ ಹೈ). ಮೋದಿ ಜಿ ಅವರ ಪ್ರಕಾಶದ ಮುಂದೆ ಸೂರ್ಯನ ಬೆಳಕು ಕೂಡ ಮಂದವಾಗುತ್ತದೆ, ಅವರ ಭಾಷಣದ ಮುಂದೆ ಆಕಾಶದ ಗರ್ಜನೆಯೂ ಮಂಕಾಗುತ್ತದೆ. ಮೋದಿ ಜಿ ಇದ್ದರೆ ಮಾತ್ರ ಇದೊಂದು ದೇಶ, ಅವರಿದ್ದರೆ ಮಾತ್ರ ಈ ಜಗತ್ತು, ಮೋದಿ ಇಲ್ಲದಿದ್ದರೆ ಏನೂ ಇಲ್ಲ! ಹೀಗೆ ಸಾಲು ಸಾಲಾಗಿ ಪ್ರಧಾನಿಯನ್ನು ಹಾಡಿ ಹೊಗಳಿದವರು ಬಿಜೆಪಿ ನಾಯಕರಲ್ಲ. ಬದಲಿಗೆ, ಭಾರತದ ಉದ್ಧಾರ ಮಾಡುತ್ತೇನೆಂದು ಅಮೆರಿಕದಿಂದ ಓಡೋಡಿ ಬಂದು, ಮೋದಿ ವಿರುದ್ಧ ಪ್ರತಿಭಟಿಸಲು ಯುವ ಸಮುದಾಯವನ್ನು ಪ್ರಚೋದಿಸುತ್ತಿರುವ ಹಾಗೂ ಇದಕ್ಕಾಗಿಯೇ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕಟ್ಟಿರುವ ಜಿರಳೆ ಅಭಿಜೀತ್ ದೀಪ್ಕೆ!

ಮೋದಿ ಶ್ರೇಷ್ಠ ಪ್ರಧಾನಿ, ಅವರ ತ್ಯಾಗಕ್ಕೆ ನಮಸ್ಕರಿಸುತ್ತೇವೆ ಎಂದ ದೀಪ್ಕೆ

Related posts

ಕಂಠಿಹಾರ ಕಿತ್ತುಕೊಡಲು ನೀನೇನು ರಾಜನಾ? ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಧುಮುಕಿದ ನಟಿ ತಾರಾ, ಸಚಿವ ನರೇಂದ್ರ ಸ್ವಾಮಿಗೆ ಹಿಗ್ಗಾಮುಗ್ಗಾ ತರಾಟೆ!

ಕಂಠಿಹಾರ ಕಿತ್ತುಕೊಡಲು ನೀನೇನು ರಾಜನಾ? ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಧುಮುಕಿದ ನಟಿ ತಾರಾ, ಸಚಿವ ನರೇಂದ್ರ ಸ್ವಾಮಿಗೆ ಹಿಗ್ಗಾಮುಗ್ಗಾ ತರಾಟೆ!

November 26, 2026
ವಿನಯ್ ಕುಲಕರ್ಣಿ ಜಾಮೀನು ರದ್ದು; 2 ವಾರಗಳಲ್ಲಿ ಶರಣಾಗಲು ಸುಪ್ರೀಂ ಕೋರ್ಟ್ ಆದೇಶ

ವಿನಯ್ ಕುಲಕರ್ಣಿ ಜಾಮೀನು ರದ್ದು; 2 ವಾರಗಳಲ್ಲಿ ಶರಣಾಗಲು ಸುಪ್ರೀಂ ಕೋರ್ಟ್ ಆದೇಶ

November 26, 2026

ಕೇವಲ ಒಂದು ಪೋಸ್ಟ್ ಮಾತ್ರವಲ್ಲದೆ ಮತ್ತೊಂದು ವಿಡಿಯೋದಲ್ಲೂ ಪ್ರಧಾನಿ ಮೋದಿಯವರ ಗುಣಗಾನ ಮಾಡಿರುವ ಅಭಿಜೀತ್ ದೀಪ್ಕೆ, ಮೋದಿ ತುಂಬಾ ಶ್ರೇಷ್ಠ ನಾಯಕ. ಇಷ್ಟು ವರ್ಷಗಳ ಕಾಲ ಅವರು ನಮ್ಮೆಲ್ಲರಿಗಾಗಿ ಅಪಾರವಾಗಿ ಶ್ರಮಿಸಿದ್ದಾರೆ. ದೇಶಕ್ಕಾಗಿ ಅವರು ಏನು ತಾನೇ ತ್ಯಾಗ ಮಾಡಿಲ್ಲ ಹೇಳಿ? ಅವರು ಸರ್ವಸ್ವವನ್ನೂ ತ್ಯಜಿಸಿದ್ದಾರೆ, ಇಂತಹ ಮಹಾನ್ ವ್ಯಕ್ತಿಗೆ ನಾವು ನಮಸ್ಕರಿಸುತ್ತೇವೆ. ದೇಶ ಕಂಡ ಅತ್ಯುತ್ತಮ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿ ಮಾತ್ರ. ಕಳೆದ 2022ರಲ್ಲಿ ಅವರು ಕಾರ್ಗಿಲ್‌ಗೆ ಭೇಟಿ ನೀಡಿ ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡಿರುವುದು ನಿಜಕ್ಕೂ ಸ್ಮರಣೀಯ ಎಂದೆಲ್ಲಾ ಕೊಂಡಾಡಿದ್ದಾರೆ.

ಏಕಾಏಕಿ ದೀಪ್ಕೆಗೆ ಇದೇನಾಯ್ತು? ಮೆಟಾ ಪರೀಕ್ಷಿಸಲು ಮಾಡಿದ ತಂತ್ರವಂತೆ!

ಪ್ರತಿನಿತ್ಯವೂ ಮೋದಿ ವಿರೋಧಿ ಜಪದಿಂದಲೇ ತನ್ನ ದಿನವನ್ನು ಆರಂಭಿಸುತ್ತಿದ್ದ ಜಿರಳೆ ದೀಪ್ಕೆಗೆ ಏಕಾಏಕಿ ಇದೇನಾಯಿತಪ್ಪಾ ಎಂದು ಸ್ವತಃ ಅವರ ಬೆಂಬಲಿಗರು ಹಾಗೂ ಪ್ರಧಾನಿ ಮೋದಿ ವಿರೋಧಿಗಳು ಕ್ಷಣಕಾಲ ಬೆಚ್ಚಿಬಿದ್ದಿರುವುದಂತೂ ಸುಳ್ಳಲ್ಲ. ಬಿಜೆಪಿ ಸರ್ಕಾರವನ್ನು ಪತನಗೊಳಿಸುವುದಕ್ಕಾಗಿಯೇ ಇಷ್ಟೆಲ್ಲಾ ಸಾಹಸ ಪಡುತ್ತಿರುವ ದೀಪ್ಕೆ ಕನಸಿನಲ್ಲಿಯೂ ಪ್ರಧಾನಿ ಮೋದಿ ಅವರನ್ನು ಹೊಗಳಲು ಸಾಧ್ಯವೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಆದರೆ ದೀಪ್ಕೆ ಹೀಗೆಲ್ಲಾ ಹೊಗಳಿರುವುದರ ಹಿಂದಿನ ಅಸಲಿ ಉದ್ದೇಶವೇ ಬೇರೆಯಾಗಿದೆ.

ಇದೇ ನವೆಂಬರ್ 26ರ ಸಂವಿಧಾನ ದಿನದ ಅಂಗವಾಗಿ ನಾಗ್ಪುರದಲ್ಲಿ ಬೃಹತ್ ರ‍್ಯಾಲಿಯನ್ನು ಘೋಷಿಸುವ ಮೊದಲು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದೀಪ್ಕೆ ಪ್ರಧಾನಿ ಮೋದಿಯವರನ್ನು ಅತಿಯಾಗಿ ಹೊಗಳಿದ್ದಾರೆ. ಇದು ಸಾಮಾಜಿಕ ಜಾಲತಾಣಗಳ ಮಾತೃಸಂಸ್ಥೆಯಾದ ಮೆಟಾವನ್ನು (Meta) ಪರೀಕ್ಷೆ ಮಾಡುವುದಕ್ಕಾಗಿ ಹೂಡಿದ ತಂತ್ರವಂತೆ! ಅಮೆರಿಕದಲ್ಲಿ ಕುಳಿತು ಭಾರತದ ವಿರುದ್ಧ, ಬಿಜೆಪಿ ಹಾಗೂ ಪ್ರಧಾನಿ ವಿರುದ್ಧ ನಿತ್ಯವೂ ಬೈಯುತ್ತಾ ಮಾಡುವ ವಿಡಿಯೋಗಳು ಹೆಚ್ಚಿನ ಜನರಿಗೆ ತಲುಪುತ್ತಿಲ್ಲ ಮತ್ತು ಇದರ ಹಿಂದೆ ಮೆಟಾ ಸಂಸ್ಥೆಯ ಕೈವಾಡವಿದೆ ಎಂಬುದು ದೀಪ್ಕೆ ಆರೋಪವಾಗಿದೆ. ಒಂದು ವೇಳೆ ಪ್ರಧಾನಿ ಅವರನ್ನು ಹೊಗಳಿದರೆ ಮೆಟಾ ಆ ವಿಡಿಯೋವನ್ನು ಹೆಚ್ಚು ಜನರಿಗೆ ತಲುಪಿಸುತ್ತದೆ ಎಂಬ ಕಾರಣಕ್ಕೆ, ಸಂವಿಧಾನ ಉಳಿಸಿ ದಿನದಂದು ನಡೆಯುವ ಸಮಾವೇಶಕ್ಕೆ ಹೆಚ್ಚಿನ ಜನರು ಬರುವಂತೆ ಕರೆ ನೀಡಲು ಆರಂಭದಲ್ಲಿ ಮೋದಿ ಅವರನ್ನು ಹೊಗಳಿ ವಿಡಿಯೋ ಮಾಡಿರುವುದಾಗಿ ತಿಳಿಸಿದ್ದಾರೆ.

ವ್ಯಂಗ್ಯಕ್ಕಾದರೂ ಕೊನೆಗೂ ಸತ್ಯ ಒಪ್ಪಿಕೊಂಡಿರಲ್ಲ ಎಂದ ಮೋದಿ ಫ್ಯಾನ್ಸ್!

ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ತತ್ವಗಳನ್ನು ಜನರಿಗೆ ತಲುಪಿಸಲು ಹಾಗೂ ಸಂವಿಧಾನ ಉಳಿಸಿ ರ‍್ಯಾಲಿಯ ಮಾಹಿತಿ ಪ್ರಚಾರವಾಗಲಿ ಎಂಬ ಉದ್ದೇಶದಿಂದ ಪ್ರಧಾನಿ ಅವರ ಫೋಟೋ ಹಾಕಿ ಅವರನ್ನು ಹಾಡಿ ಹೊಗಳಿರುವುದಾಗಿ ದೀಪ್ಕೆ ಸಮರ್ಥಿಸಿಕೊಂಡಿದ್ದಾರೆ. ಈ ರೀತಿ ಬರೆದರೆ ತಮ್ಮ ಪೋಸ್ಟ್ ಅನ್ನು ಮೆಟಾ ಹೆಚ್ಚಿನ ಜನರಿಗೆ ತಲುಪಿಸುತ್ತದೆಯೇ ಎಂದು ಪರೀಕ್ಷೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ದೀಪ್ಕೆ ಯಾವುದೇ ಉದ್ದೇಶದಿಂದ ಹೇಳಿದ್ದರೂ, ಕೊನೆಗೂ ವ್ಯಂಗ್ಯಕ್ಕಾದರೂ ಪ್ರಧಾನಿ ನರೇಂದ್ರ ಮೋದಿ ಅವರ ಶ್ರೇಷ್ಠ ವ್ಯಕ್ತಿತ್ವ ಮತ್ತು ತ್ಯಾಗದ ಬಗ್ಗೆ ನಿಜವನ್ನೇ ಬಾಯಿ ಬಿಟ್ಟಿದ್ದೀರಲ್ಲ, ನಿಮ್ಮ ಬಾಯಿಯಿಂದ ಈ ಸತ್ಯವನ್ನು ಕೇಳಿ ನಮಗೆ ಬಹಳ ಖುಷಿಯಾಯಿತು ಎಂದು ಮೋದಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಿರುಗೇಟು ನೀಡುತ್ತಿದ್ದಾರೆ.

ShareTweetSendShare
Join us on:

Related Posts

ಕಂಠಿಹಾರ ಕಿತ್ತುಕೊಡಲು ನೀನೇನು ರಾಜನಾ? ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಧುಮುಕಿದ ನಟಿ ತಾರಾ, ಸಚಿವ ನರೇಂದ್ರ ಸ್ವಾಮಿಗೆ ಹಿಗ್ಗಾಮುಗ್ಗಾ ತರಾಟೆ!

ಕಂಠಿಹಾರ ಕಿತ್ತುಕೊಡಲು ನೀನೇನು ರಾಜನಾ? ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಧುಮುಕಿದ ನಟಿ ತಾರಾ, ಸಚಿವ ನರೇಂದ್ರ ಸ್ವಾಮಿಗೆ ಹಿಗ್ಗಾಮುಗ್ಗಾ ತರಾಟೆ!

by Shwetha
November 26, 2026
0

ಬೆಂಗಳೂರು: ಮಾಸಿಕ 15 ಸಾವಿರ ರೂಪಾಯಿ ನಿಗದಿತ ಗೌರವಧನ ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 9 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೀದಿಗಿಳಿದು...

ವಿನಯ್ ಕುಲಕರ್ಣಿ ಜಾಮೀನು ರದ್ದು; 2 ವಾರಗಳಲ್ಲಿ ಶರಣಾಗಲು ಸುಪ್ರೀಂ ಕೋರ್ಟ್ ಆದೇಶ

ವಿನಯ್ ಕುಲಕರ್ಣಿ ಜಾಮೀನು ರದ್ದು; 2 ವಾರಗಳಲ್ಲಿ ಶರಣಾಗಲು ಸುಪ್ರೀಂ ಕೋರ್ಟ್ ಆದೇಶ

by Shwetha
November 26, 2026
0

ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಹಾಗೂ ಜೀವಾವಧಿ ಶಿಕ್ಷೆ...

ಇನ್ನು 5ರಿಂದ 10 ವರ್ಷಗಳಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವುದು ಖಚಿತ: ಕೇವಲ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದರೆ ಸಾಲದು, ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯವೇ ಮದ್ದು- ಬಾಲಚಂದ್ರ ಜಾರಕಿಹೊಳಿ

ಇನ್ನು 5ರಿಂದ 10 ವರ್ಷಗಳಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವುದು ಖಚಿತ: ಕೇವಲ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದರೆ ಸಾಲದು, ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯವೇ ಮದ್ದು- ಬಾಲಚಂದ್ರ ಜಾರಕಿಹೊಳಿ

by Shwetha
November 26, 2026
0

ಬೆಳಗಾವಿ: ದಶಕಗಳ ಕಾಲದಿಂದಲೂ ಆಗಾಗ್ಗೆ ಮುನ್ನೆಲೆಗೆ ಬರುತ್ತಿರುವ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗಿಗೆ ಇದೀಗ ಭಾರತೀಯ ಜನತಾ ಪಕ್ಷದ (ಬಿಜೆಪಿ) ಒಳಗಿನಿಂದಲೇ ಮತ್ತೆ ಹೊಸ ಬಲ...

ಸ್ಟಿಂಗ್ ಆಪರೇಷನ್ ಕೇಸ್: ಕೃಪಾ ಆಳ್ವಾ ಮೊಬೈಲ್, ಧ್ವನಿ ಮಾದರಿ ಎಫ್‌ಎಸ್‌ಎಲ್‌ಗೆ

ಸ್ಟಿಂಗ್ ಆಪರೇಷನ್ ಕೇಸ್: ಕೃಪಾ ಆಳ್ವಾ ಮೊಬೈಲ್, ಧ್ವನಿ ಮಾದರಿ ಎಫ್‌ಎಸ್‌ಎಲ್‌ಗೆ

by Shwetha
November 26, 2026
0

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಬಾರಿ ವಿಚಾರಣೆಗೆ ಹಾಜರಾಗಿದ್ದ...

ದಿನ ಭವಿಷ್ಯ (19-10-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (26-11-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
November 26, 2026
0

ದಿನ ಭವಿಷ್ಯ: 26-11-2026 ಮೇಷ ರಾಶಿ ಮೇಷ ರಾಶಿಯವರಿಗೆ ಈ ಗುರುವಾರವು ಅತ್ಯಂತ ಫಲದಾಯಕವಾಗಿರುತ್ತದೆ. ಗ್ರಹಗಳ ಸಂಚಾರವು ನಿಮ್ಮ ಪರವಾಗಿರುವುದರಿಂದ ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಮಾತಿಗೆ ಬೆಲೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram