ಧಾರವಾಡ : ಸಿಎಂ ಬಿಎಸ್ ಯಡಿಯೂರಪ್ಪ ಬಿಟ್ಟರೆ ಉಳಿದ ಸಚಿವರು ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿದ್ದಾರೆ. ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಹೊರಟ್ಟಿ, ಕೋವಿಡ್ ಕಿಟ್ ಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಸಹಕಾರ ಸಚಿವರು ಅವ್ಯವಹಾರ ಆಗಿಲ್ಲ, ದುಪ್ಪಟ್ಟು ಹಣ ಆಗಿದೆ ಎಂದು ಹೇಳಿದ್ದಾರೆ. ಹಾಗೆ ಅಂದರೆ ಏನು ಅದರ ಅರ್ಥ, ಅವ್ಯವಹಾರ ಆಗಿದೆ ಅಂತಾನೇ ಆಗುತ್ತದೆ ಎಂದು ದೂರಿದರು.
ಸರ್ಕಾರ ಕೊರೊನಾವನ್ನು ಸರಿಯಾದ ರೀತಿಯಿಂದ ನಿರ್ವಹಣೆ ಮಾಡುತ್ತಿಲ್ಲ. ಮುಖ್ಯಮಂತ್ರಿಗಳನ್ನ ಬಿಟ್ಟರೆ ಉಳಿದವರು ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುತ್ತಿದ್ದಾರೆ. ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕೊರೊನಾ ವಿಷಯದಲ್ಲಿ ಸರ್ಕಾರ ಯಾವ ರೀತಿ ಇರಬೇಕು, ಆ ರೀತಿ ಇಲ್ಲ. ಯಾವ ಸಚಿವರಲ್ಲಿಯೂ ಇಚ್ಛಾಸಕ್ತಿ ಕಾಣುತ್ತಿಲ್ಲ ಎಂದು ಹೊರಟ್ಟಿ ಕಿಡಿಕಾರಿದರು.








