ಮಂಡ್ಯ: ಕೊರೊನಾ ಹರಡಂತೆ ತಡೆಯಲು ಮಂಡ್ಯ ಜಿಲ್ಲೆಯಲ್ಲಿ ಜನರು ಗುಂಪು ಸೇರದಂತೆ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಮಳವಳ್ಳಿ ಜೆಡಿಎಸ್ ಶಾಸಕ ಅನ್ನದಾನಿ ಹಾಗೂ ದಲಿತ ಸಂಘಟನೆಗಳು ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದವು.
ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ ಬಳಿ ಅಂಬೇಡ್ಕರ್ ರಾಜಗೃಹದ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. 144 ಸೆಕ್ಷನ್ ಆದೇಶವಿದ್ದರೂ ಸಂಘಟನೆಗಳ ಕಾರ್ಯಕರ್ತರು ಡೋಂಟ್ ಕೇರ್ ಎಂಬಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಖುದ್ದು ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಹೆಚ್ಚು ಜನರನ್ನು ಸೇರಿಸಿಕೊಂಡು ಶಾಸಕರು ಪ್ರತಿಭಟನೆಗೆ ಮುಂದಾದರೂ ಸಾಮಾಜಿಕ ಅಂತರ ಇಲ್ಲದೆ ಪ್ರತಿಭಟನೆ ಮಾಡಿದ್ರೂ ಪೆÇಲೀಸರು ಚಕಾರ ಎತ್ತಲಿಲ್ಲ. ಅದರ ಬದಲಿಗೆ ಬ್ಯಾರಿಕೇಡ್ ಹಾಕಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಶಾಸಕರಿಗೊಂದು ಕಾನೂನು ಹಾಗೂ ಸಾಮಾನ್ಯ ಜನರಿಗೊಂದು ನ್ಯಾಯವೇ ಎಂದು ಮಂಡ್ಯ ಜಿಲ್ಲಾಡಳಿಂತದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.