19 ವರ್ಷದ ಯುವತಿಯೊಬ್ಬಳನ್ನ ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರವೆಸಗಿದ ಘಟನೆ ಗುಜರಾತ್‍ನ ರಾಜ್ ಕೋಟ್‍ನಲ್ಲಿ ನಡೆದಿದೆ.
ಯುವತಿ ಮನೆಯಲ್ಲಿ ಒಬ್ಬಳೇ ಇದ್ದಾಗ ಮನೆಯೊಳಗೆ ಒಳಗೆ ನುಗ್ಗಿದ್ದ ಮೂವರು ದುಷ್ಕರ್ಮಿಗಳು ಆಕೆಯನ್ನ ಬೆದರಿಸಿ ಅಪಹರಿಸಿದ್ದಾರೆ. ರಾಜ್‍ಕೋಟ್‍ನ ಹೊರವಲಯಕ್ಕೆ ಕರೆದೊಯ್ದು ಯುವತಿಯನ್ನ ಅತ್ಯಾಚಾರ ಮಾಡಿ ಮತ್ತೆ ಮನೆಗೆ ಬಿಟ್ಟು ಪರಾರಿಯಾಗಿದ್ದಾರೆ. ಅತ್ಯಾಚಾರದಿಂದ ಸಂತ್ರಸ್ತಳಾಗಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಕುರಿತು ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ರಾಜ್‍ಕೋಟ್ ಪೊಲೀಸರು ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಯುವತಿ ಅಸಮಾಧಾನ ವ್ಯಕ್ತಪಡಿಸಿದ್ದಾಳೆ. ಈ ಬಗ್ಗೆ ಎಸ್‍ಪಿ ಬಲರಾಮ್ ಮಿನಾ ಪ್ರತಿಕ್ರಿಯಿಸಿದ್ದು, ಯುವತಿ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಕೃತ್ಯವೆಸಗಿದವರ ಬಗ್ಗೆ ನಮಗೆ ಮಾಹಿತಿ ಗೊತ್ತಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಅಸಡ್ಡೆಯ ಮಾತುಗಳನ್ನಾಡಿದ್ದಾರೆ.
ಇನ್ನು, ಅತ್ಯಾಚಾರ ವ್ಯಸಗಿದ ಮೂವರು ಆರೋಪಿಗಳು ಅದೇ ಗ್ರಾಮದವರಾಗಿದ್ದು, ಬಿಜೆಪಿ ಸ್ಥಳೀಯ ಮುಖಂಡ ಅಮಿತ್ ಪಾಂಡಾಲ್ ನ ಸ್ನೇಹಿತರು ಎಂದು ಹೇಳಲಾಗಿದೆ. ಈ ಕೃತ್ಯದಲ್ಲಿ ವಿಪುಲ್ ಶೇಖಾನಂದನ್, ಶಾಂತಿ ಪಾಂಡಾಲ್ ಹಾಗೂ ಅಮಿತ್ ಕೂಡ ಭಾಗಿಯಾಗಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಈ ಬಗ್ಗೆ ಪೊಲೀಸರು ಮೌನವಹಿಸಿರುವುದು ಸಂತ್ರಸ್ತೆಯ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.








