ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಬಳಿಕ ಬಿ ಟೌನ್ ನಲ್ಲಿ ನೆಪೋಟಿಸಮ್ ಆರೋಪ ತಾರಕಕ್ಕೇರಿದೆ. ಸುಸಾಂತ್ ರದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂಬ ಮಾತುಗಳು ವ್ಯಾಪಕವಾಗಿ ಸದ್ದು ಮಾಡ್ತಿದ್ದು, ಇದರ ಹಿಂದೆ ದೊಡ್ಡ ದೊಡ್ಡ ವ್ಯಕ್ತಿಗಳ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿವೆ.. ಈ ನಿಲುವಿಗೆ ಬದ್ಧವಾಗಿರುವ ಕಂಗನಾ ರಣಾವತ್ ಅವರು ಮೊದಲಿನಿಂದಲೂ ಸುಸಾಂತ್ ರದ್ದು ಯೋಜಿತ ಕೊಲೆ ಎಂದೇ ಹೇಳುತ್ತಾ ಬಂದಿದ್ದಾರೆ. ಅವರ ನಿಲುವಿಗೆ ಹಲವರು ಸಾಥ್ ನೀಡಿದ್ರೆ ಇನ್ನೂ ಕೆಲವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.. ಆದ್ರೆ ಇದೀಗ ಮತ್ತೆ ಸಂದರ್ಶನವೊದರಲ್ಲಿ ಈ ಕುರಿತಾಗಿ ಮಾತನಾಡಿರುವ ಕಂಗನಾ ಬಾಲಿವುಡ್ ನ ಯಶ್ ರಾಜ್ ಫಿಲ್ಮ್ ನಿರ್ಮಾಣ ಸಂಸ್ಥೆ ಮತು ನಿರ್ಮಾಪಕ ಕರಣ್ ಜೋಹರ್ ವಿರುದ್ಧ ಹರಿಹಾಯ್ದಿದ್ದಾರೆ.
ಸುಶಾಂತ್ ಸಿಂಗ್ ರಿಗೆ ಬಕೆಟ್ ಹಿಡಿಯುವುದು ಹೇಗೆ ಎಂದು ಗೊತ್ತಿರಲಿಲ್ಲ. ಹೀಗಾಗಿಯೇ ಅವರು ಕೆರಿಯರ್ ಹಾಳುಮಾಡಿಕೊಂಡರು. ಇನ್ನೂ ಮುಂದುವರೆದು ಮಾತನಾಡಿರುವ ಕಂಗನಾ ಸುಶಾಂತ್ ಅವರ ವೃತ್ತಿ ಜೀವನ ನಾಶಮಾಡಲು ಕರಣ್ ಅವರು ತಮ್ಮ ಬಾಲ್ಯದ ಗೆಳೆಯ ಆದಿತ್ಯಾ ಚೋಪ್ರಾ ಜೊತೆಗೂಡಿ ಕಾರ್ಯಸೂಚಿ ರೂಪಿಸಿದ್ರು. ಅದರಂತೆ “ಆದಿತ್ಯ ಚೋಪ್ರಾ, ಸುಶಾಂತ್ ಸಿಂಗ್ ಜೊತೆ ಯಶ್ ರಾಜ್ ಸಂಸ್ಥೆಯೊಂದಿಗೆ ಕಾಂಟ್ರಾಕ್ಟ್ ಗೆ ಸಹಿ ಮಾಡಿಸಿಕೊಂಡಿದ್ದರು. ಇದರಿಂದ ಸುಶಾಂತ್ ಗೆ ಬೇರೆ ಸಿನಿಮಾದಲ್ಲಿ ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಆದಿತ್ಯ ಚೋಪ್ರಾ ಒಪ್ಪಿಗೆ ಇಲ್ಲದೆ ಯಾವುದೇ ಯೋಜನೆಯನ್ನು ತೆಗೆದುಕೊಳ್ಳುವ ಹಾಗಿರಲಿಲ್ಲ. ಇದರಿಂದ ಸುಶಾಂತ್ ಗೆ ಉತ್ತಮ ಅವಕಾಶಗಳು ಕೈತಪ್ಪಿಹೋದವು. ರಾಮ್ ಲೀಲಾ, ಗೋಲಿಯಾನ್ ಕಿ ರಾಸ್ಲೀಲಾ, ಬಾಜಿರಾವ್ ಮಸ್ತಾನಿಯಂತಹ ಅದ್ಭುತ ಸಿನಿಮಾಗಳು ರಣವೀರ್ ಸಿಂಗ್ ಪಾಲಾದವು.” 
ಚಿತ್ರರಂಗದಲ್ಲಿ ತುಂಬಾ ಕಷ್ಟಕಟ್ಟ ಬಳಿಕ ಎಂ.ಎಸ್ ಧೋನಿ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತು. ಆನಂತರ ಕರಣ್ ಜೋಹರ್, ಸುಶಾಂತ್ ಜೊತೆ ಡ್ರೈವ್ ಸಿನಿಮಾ ಮಾಡಿದರು. ಆದರೆ ಆ ಸಿನಿಮಾವನ್ನು ರಿಲೀಸ್ ಮಾಡಲೇ ಇಲ್ಲ. ಈ ಫ್ಲಾಪ್ ಸ್ಟಾರ್ ನೊಂದಿಗೆ ಈ ಚಿತ್ರವನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದು ಅವರು ರಚಿಸಿದ ಸಂಪೂರ್ಣ ವ್ಯವಹಾರದ ದಂಧೆ. ಯಶ್ ರಾಜ್ ಫಿಲ್ಮ್ ಮತ್ತು ಕರಣ್ ಜೋಹರ್ ಧರ್ಮ ಫಿಲ್ಮ್ ಒಟ್ಟಿಗೆ ಕಾರ್ಯನಿರ್ವಹಿಸುತ್ತಿವೆ. ಯಾರನ್ನು ಉತ್ತೇಜಿಸಬೇಕು, ಯಾರನ್ನು ಕೆಳಗಿಳಿಸಬೇಕು, ಯಾರನ್ನು ನಾಶಮಾಡಬೇಕು ಎಂದು ಪ್ಲಾನ್ ಮಾಡುತ್ತಾರೆ. ಎಂದು ಕಂಗನಾ ಆರೋಪಿಸಿದ್ದಾರೆ.








