ನಾಳೆ ಇಂಡಿಯಾ ಐಡಿಯಾಸ್ ಶೃಂಗಸಭೆಯಲ್ಲಿ ಮೋದಿ ಭಾಷಣ
ನವದೆಹಲಿ : ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಐಡಿಯಾಸ್ ಶೃಂಗಸಭೆಯಲ್ಲಿ ಮುಖ್ಯ ಭಾಷಣ ಮಾಡಲಿದ್ದು, ಈ ವೇಳೆ ಭಾರತ-ಅಮೆರಿಕ ಉಭಯ ರಾಷ್ಟ್ರಗಳ ಸಂಬಂಧದ ಕುರಿತು ಚರ್ಚಿಸಲಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ತಿಳಿಸಿದೆ.
ಈ ವರ್ಚುವಲ್ ಶೃಂಗಸಭೆಯನ್ನು ಅಮೆರಿಕ – ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ ಆಯೋಜಿಸುತ್ತಿದ್ದು, ಇದರಲ್ಲಿ ‘ಉತ್ತಮ ಭವಿಷ್ಯ ನಿರ್ಮಿಸುವುದು’ ಎಂಬ ವಿಷಯ ಕುರಿತು ಮೋದಿ ಮಾತನಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಶೃಂಗಸಭೆಯಲ್ಲಿ ಇತರ ಪ್ರಮುಖ ಭಾಷಣಕಾರರಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ, ವರ್ಜೀನಿಯಾದ ಸೆನೆಟರ್ ಮತ್ತು ಸೆನೆಟ್ ಇಂಡಿಯಾದ ಸಹ – ಅಧ್ಯಕ್ಷ ಕಾಕಸ್ ಮಾರ್ಕ್ ವಾರ್ನರ್, ವಿಶ್ವಸಂಸ್ಥೆಯ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಸೇರಿದಂತೆ ಇತರರು ಇರಲಿದ್ದಾರೆ.









