ಹಳ್ಳಿ ಜನ ಎಚ್ಚರಿಕೆಯಿಂದ ಇರಿ… ಕಾರ್ತಿಕ ಮಾಸದಲ್ಲಿ ಅಪಾಯ… ಕೋಡಿ ಮಠ ಶ್ರೀ ಭವಿಷ್ಯ
ಹಾಸನ : ರಾಜ್ಯದಲ್ಲಿ ಪ್ರತಿದಿನ ಕೊರೊನಾ ಸ್ಫೋಟವಾಗುತ್ತಿದ್ದು, ಗ್ರಾಮೀಣ ಭಾಗಗಳಲ್ಲೂ ಭಾರಿ ಪ್ರಮಾಣದಲ್ಲಿ ಸೋಂಕಿತರು ಪತ್ತೆ ಆಗುತ್ತಿದ್ದಾರೆ. ಇದು ನಾಡಿನ ಜನರ ನಿದ್ದೆಗೆಡಿಸಿದೆ. ಇದರ ಮಧ್ಯೆ ಕೋಡಿ ಮಠದ ಸ್ವಾಮೀಜಿ, ಆಸ್ವೀಜ ಮಾಸ, ಕಾರ್ತಿಕ ಮಾಸದಲ್ಲಿ ಕೊರೊನಾ ಹೆಚ್ಚಾಗಲಿದ್ದು ಹಳ್ಳಿಗಳಲ್ಲಿ ಕೊರೊನಾ ಮರಣ ಮೃದಂಗ ಬಾರಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಠದಲ್ಲಿ ಮಾತನಾಡಿದ ಸ್ವಾಮೀಜಿ, ಕಾರ್ತಿಕ ಮಾಸದಲ್ಲಿ ಕೊರೊನಾ ಹೆಚ್ಚಾಗಲಿದೆ. ಹಳ್ಳಿಗಳ ಜನರು ಎಚ್ಚರದಿಂದ ಇರಬೇಕು. ಜನರು ಸರ್ಕಾರದ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು. ಜನರು ಸ್ವಚ್ಛತೆ, ಸಾಮಾಜಿಕ ಅಂತರದ ಕಡೆ ಗಮನ ಕೊಡಬೇಕು. ಇನ್ನೂ ಕೆಲ ತಿಂಗಳು ಕೊರೊನಾ ಅಟ್ಟಹಾಸ ಇರಲಿದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಇನ್ನು ಕೊರೊನಾ ವೈರಸ್ ಗಾಳಿಯಲ್ಲಿ ಸಂಚಾರ ಮಾಡೋದು ಕಡಿಮೆ. ಹೀಗಾಗಿ ಜನರು ಸುರಕ್ಷತೆ ಕಾಪಾಡಿದರೆ ಕೊರೊನಾದಿಂದ ಪಾರಾಗಬಹುದು ಎಂದ ಶ್ರೀಗಳು, ಜನರು ಭಯ, ಆತಂಕ ಬಿಟ್ಟು ಸರ್ಕಾರದ ಜೊತೆ ಕೈಜೋಡಿಸಿ ಎಂದು ಮನವಿ ಮಾಡಿಕೊಂಡರು.