ಪುನೀತ್ ಅಂತಾರೆ… ಏನ್ ಮಾಡೋದು ಸ್ವಾಮಿ.. ಇದು ಫ್ರೆಂಚ್ ಬಿರಿಯಾನಿ…!
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಪಾಲಿಗೆ ಇವತ್ತು ಸ್ಪೆಷಲ್ ಡೇ. ʻಫ್ರೆಂಚ್ ಬಿರಿಯಾನಿʼ ಚಿತ್ರಕ್ಕಾಗಿ ಪುನೀತ್ ರಾಜ್‌ಕುಮಾರ್ ಹಾಡಿರುವ ʻಏನ್ ಮಾಡೋದು ಸ್ವಾಮಿʼ ಹಾಡು ಇಂದು ಬಿಡುಗಡೆಯಾಗಿದೆ. ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ʻಫ್ರೆಂಚ್ ಬಿರಿಯಾನಿʼ ನಿರ್ಮಾಣವಾಗಿದ್ದು, ಪನ್ನಗಭರಣ ನಿರ್ದೇಶನದಲ್ಲಿ ದಾನಿಶ್ ಸೇಠ್ ಮತ್ತು ಬ್ರಿಟನ್ ಪ್ರಜೆ ಸಾಲ್ ಯೂಸುಫ್ ಅಭಿನಯಿಸಿದ್ದಾರೆ. ಈ ಚಿತ್ರ ಇದೇ ಶುಕ್ರವಾರ ಜುಲೈ 24 ರಂದು ಅಮೆಜಾನ್ ಪ್ರೈಮ್ ವಿಡಿಯೋನಲ್ಲಿ ವಿಶ್ವದಾದ್ಯಂತ 200 ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.
ಪುನೀತ್ ರಾಜ್‌ಕುಮಾರ್ ಹಾಡಿರುವ ʻಏನ್ ಮಾಡೋದು ಸ್ವಾಮಿʼ ಹಾಡನ್ನ ವಾಸುಕಿ ವೈಭವ್ ಮತ್ತು ಅವಿನಾಶ್ ರಚಿಸಿದ್ದಾರೆ. ʻಫ್ರೆಂಚ್ ಬಿರಿಯಾನಿʼ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದು, ಈಗಾಗಲೇ ಬಿಡುಗಡೆಯಾಗಿರುವ ಇದೇ ಚಿತ್ರದ ʻಬೆಂಗಳೂರುʼ ಹಾಡು ಪ್ರೇಕ್ಷಕರಿಂದ ಭಾರಿ ರೆಸ್ಪಾನ್ಸ್ ಪಡೆದು ಮುನ್ನುಗುತ್ತಿದೆ.
ಫ್ರಾನ್ಸ್‌ನ ಔಷಧ ಕಂಪೆನಿಯ ಪ್ರತಿನಿಧಿ ಸೈಮನ್ ಮತ್ತು ಶಿವಾಜಿನಗದ ಆಟೋ ಡ್ರೈವರ್ ಆಸ್ಗರ್ ರ ಎರಡು ದಿನಗಳ ಆಟೋ ಪ್ರಯಣದ ವೇಳೆ ನಡೆಯುವ ಘಟನಾವಳಿಗಳೇ ಈ ಚಿತ್ರದ ಹೈಲೈಟ್ಸ್. ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಗುರುದತ್ ಎ ತಲ್ವಾರ್ ನಿರ್ಮಾಣದ ಪನ್ನಗಭರಣ ನಿರ್ದೇಶನದ ಈ ಚಿತ್ರ ಜುಲೈ 24 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.
Song Link : https://www.youtube.com/watch?v=ZhIZB5LR3iI








