ಉಳ್ಳಾಲ: ಪ್ರಿಯತಮೆ ಹಣಕ್ಕಾಗಿ ಪೀಡಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಕಾರಣ ಹೆದರಿ ಪ್ರಿಯಕರ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಲ್ಲಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 23 ವರ್ಷದ ಬೆಳಗಾವಿಯ ಸಮದ್ ರಾಯಗೌಡ ಆತ್ಮಹತ್ಯೆ ಮಾಡಿಕೊಂಡಿರುವ ಯುವಕನಾಗಿದ್ದಾನೆ. ಸಮದ್ ರಾಯಗೌಡ ತುಂಬ ದಿನಗಳಿಂದ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದ. ಆದ್ರೆ ಈತನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳದ ಯುವತಿ ಕೇವಲ ಹಣಕ್ಕಾಗಿ ಈತನ ಜೊತೆ ಇದ್ದಳಂತೆ. ಅಲ್ಲದೆ ಪದೇ ಪದೇ ಹಣಕ್ಕಾಗಿ ಬೇಡಿಕೆ ಇಟ್ಟು, ಬ್ಲಾಕ್ ಮೇಲ್ ಮಾಡುತ್ತಿದ್ದಳಂತೆ. ಈ ಬಗ್ಗೆ ಮೃತ ಯುವಕ ಸಮದ್ ತನ್ನ ಸ್ನೇಹಿತರೊಂದಿಗೆ ನೋವು ತೋಡಿಕೊಂಡಿದ್ದನಂತೆ. ದಿನಂಪ್ರತಿ ಆಕೆ ಬ್ಲಾಕ್ ಮೇಲ್ ಮಾಡುವುದು ಹೆಚ್ಚಾದ ಕಾರಣ, ಬ್ಲಾಕ್ ಮೇಲ್ ಗೆ ಹೆದರಿದ ಸಮದ್ ಮಂಗಳೂರಿನ ಸೋಮೇಶ್ವರ ರೈಲ್ವೆ ನಿಲ್ದಾಣದ ಬಳಿ ತೆರಳಿ ಡೆತ್ ನೋಟ್ ಬರೆದಿಟ್ಟು ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಈ ಸುದ್ದಿ ತಿಳಿಯುತ್ತಿದ್ದಂತೆ ಉಲ್ಲಾಳ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃತ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಶ್ಲೋಕವನ್ನು ನಿತ್ಯ ಪಠಿಸಿ ಚಮತ್ಕಾರ ನೋಡಿ
ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಶ್ಲೋಕವನ್ನು ನಿತ್ಯ ಪಠಿಸಿ ಚಮತ್ಕಾರ ನೋಡಿ ಪ್ರತಿನಿತ್ಯ ಮುಂಜಾನೆ ಈ ಒಂದು ಶಕ್ತಿಶಾಲಿಯಾದ ಅಂತಹ ನರಸಿಂಹ...








