ಬಾಲಿವುಡ್ ನಟ ಸುಶಾಂತ್ ನಮ್ಮನ್ನೆಲ್ಲ ಅಗಲಿ ಸುಮಾರು ಒಂದೂವರೆ ತಿಂಗಳು ಕಳೆದಿದ್ದು, ಇದೀಗ ಅವರ ನಿಧನದ ಬಗ್ಗೆ ಮಾಜಿ ಗರ್ಲ್ ಫ್ರೆಂಡ್ ಅಂಕಿತಾ ಲೋಖಂಡೆ ಮೌನ ಮುರಿದಿದ್ದಾರೆ. ಸುಸಾಂತ್ ನಿಧನದ ಬಳಿಕ ಮೊದಲ ಬಾರಿಗೆ ಈ ಕುರಿತಾಗಿ ಮಾತನಾಡಿರುವ ಅಂಕಿತಾ ಅವರು ಸಾಮಾಜಿಕ ಜಾಲತಾಣದಲ್ಲಿ ಸುಸಾಂತ್ ರನ್ನು ನೆನೆದು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ. ಭಗವಂತನ ಮುಂದೆ ಒಂದು ದೀಪ ಹಚ್ಚಿರುವ ಫೋಟೋವೊಂದನ್ನು ಶೇರ್ ಮಾಡಿ ನೀನು ಎಲ್ಲೇ ಇರುವ ಸದಾ ನಗುತ್ತಿರುವ ಎಂದು ಅಡಿಬರಹ ಕೊಟ್ಟಿದ್ದಾರೆ.
ಸುಸಾಂತ್ ನಿಧನದ ನಂತರ ಬಾಲಿವುಡ್ ನಲ್ಲಿ ನೆಪೋಸಿಟಮ್ ಆರೋಪ ತಾರಕಕ್ಕೇರಿದ್ದು, ಸುಸಾಂತ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಅವರ ಗೆಳತಿ ರಿಯಾ ಚಕ್ರವರ್ತಿ ಹಾಗೂ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಇವರಿಗೆ ಸಾಥ್ ನೀಡಿದ್ದ ನಟಿ ಕಂಗನಾ ರಣಾವತ್ ಸಹ ಇಅದೊಂದು ಪೂರ್ವ ನಿಯೋಜಿತ ಕೊಲೆ, ಇದರ ಹಿಂದೆ ಬಾಲಿವುಡ್ ನ ದೊಡ್ಡ ದೊಡ್ಡ ಮಂದಿಯ ಕೈವಾಡವಿದೆ ಎಂದು ಆರೋಪಿಸುತ್ತಕಲೇ ಬಂದಿದ್ದಾರೆ.







