ಬಳ್ಳಾರಿ: ರಾಜ್ಯದಲ್ಲಿ ಕೊರೊನಾಗೆ ಹೆದರಿ ಕೆಲವರು ಆತ್ಮಹತ್ಯೆ ಮಾಡಿಕೊಂಡರೆ, ಮತ್ತೆ ಕೆಲವರು ಆತಂಕದಿಂದಲೇ ರೋಗ ಲಕ್ಷಣ ಉಲ್ಬಣ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಕೊರೊನಾಗೆ ಹೆದರಿಯೇ ಹಲವರ ಜೀವಗಳು ಹೋಗುತ್ತಿವೆ ಎಂಬ ಸಂಗತಿ ಇತ್ತೀಚಿನ ಕೊರೊನಾ ಗೆದ್ದು ಬಂದವರಿಂದ ವ್ಯಕ್ತವಾಗುತ್ತಿದೆ.
ಆದರೆ ಶತಾಯುಷಿ ಅಜ್ಜಿಯೊಬ್ಬರು ಕೊರೊನಾ ಗೆದ್ದು ಬಂದು ಪ್ರತಿಯೊಬ್ಬರೂ ಸ್ಪೂರ್ತಿಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಗೆದ್ದ ಮೊದಲ ಶತಾಯುಷಿ ಅಜ್ಜಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯ 101 ಹರೆಯದ ಅಜ್ಜಿ ಕೊರೊನಾ ಗೆದ್ದು ಬಂದವರು. ಇವರ ಮನೆಯಲ್ಲಿ ನಾಲ್ಕೂ ಜನ ಸದಸ್ಯರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಮೊದಲು ಮಗನಿಗೆ ಪಾಸಿಟಿವ್ ಅಗಿತ್ತು, ಆ ಮೂಲಕ ಅಜ್ಜಿಯನ್ನು ಸೇರಿಸಿ ಕುಟುಂಬದ ನಾಲ್ವರಿಗೂ ಪಾಸಿಟಿವ್ ಧೃಡ ಆಗಿತ್ತು. ಎದ್ದು ಓಡಾಡಲು ಸಾದ್ಯವಿಲ್ಲದ ಅಜ್ಜಿಯನ್ನು ಅಸ್ಪತ್ರೆಗೆ ಸೇರಿಸುವುದು ಸ್ವಲ್ಪ ಕಷ್ಟವಾಗಿತ್ತು.
ವೈದ್ಯರ ಸಲಹೆಯಂತೆ ಅಜ್ಜಿಯನ್ನು ಹೋಂ ಐಸೋಲೇಷನ್ ಮಾಡಲಾಗಿತ್ತು. ಇದೀಗ ಅಜ್ಜಿ ಸೇರಿ ಕುಟುಂಬದ ಎಲ್ಲರೂ ಕೊರೊನಾದಿಂದ ಮುಕ್ತರಾಗಿದ್ದಾರೆ.
ಕೊರೊನಾದಿಂದ ಜನ ನಮ್ಮನ್ನ ಬೇರೆ ಥರ ನೋಡುವಂತಾಗಿತ್ತು ಅಂತ ಬೇಸರ ವ್ಯಕ್ತಪಡಿಸಿದ್ದಾರೆ ಅಜ್ಜಿಯ ಮೊಮ್ಮಗ. ಇದೀಗ ಕೊರೊನಾ ಗೆದ್ದ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
ಬೆಂಗಳೂರು ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಬಿಎಂಟಿಸಿ ದರ ಏರಿಕೆ ಬಗ್ಗೆ ಸಚಿವ ಬೈರತಿ ಸುರೇಶ್ ನೀಡಿದ್ರು ಶಾಕಿಂಗ್ ಸುದ್ದಿ
ಬೆಂಗಳೂರು: ರಾಜಧಾನಿಯ ಜನಸಾಮಾನ್ಯರ ಸಾರಿಗೆಯಾದ ಬಿಎಂಟಿಸಿ ಬಸ್ ಪ್ರಯಾಣ ಇನ್ನು ಮುಂದೆ ದುಬಾರಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಹಲವು ದಿನಗಳಿಂದ ಕೇಳಿಬರುತ್ತಿದ್ದ ಬಸ್ ಟಿಕೆಟ್ ದರ...








