ಐಪಿಎಲ್ನಲ್ಲಿ ಆಡಲು ನ್ಯೂಜಿಲೆಂಡ್ನ ಆರು ಕ್ರಿಕೆಟಿಗರಿಗೆ ಆಕ್ಷೇಪವಿಲ್ಲ…!
ಸೆಪ್ಟಂಬರ್ 19ರಿಂದ ನವೆಂಬರ್ 8ರವರೆಗೆ ಯುಎಇನಲ್ಲಿ ಐಪಿಎಲ್ ಟೂರ್ನಿ ನಡೆಯುವುದು ಬಹುತೇಕ ಖಚಿತವಾಗಿದೆ. ಇದೀಗ ಭಾರತ ಸರ್ಕಾರದ ಅನುಮತಿಗಾಗಿ ಬಿಸಿಸಿಐ ಕಾಯುತ್ತಿದೆ. ಅಲ್ಲದೆ ಮುಂದಿನ ಒಂದು ವಾರದೊಳಗೆ ಬಿಸಿಸಿಐ ಐಪಿಎಲ್ನ ಮಾರ್ಗಸೂಚಿ ಮತ್ತು ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ.
ಈ ನಡುವೆ ಐಪಿಎಲ್ ಫ್ರಾಂಚೈಸಿಗಳು ಕೂಡ ಪೂರ್ವ ತಯಾರಿ ಮಾಡಿಕೊಳ್ಳುತ್ತಿವೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಪ್ರೇಕ್ಷಕರಿಲ್ಲದೆ ನಡೆಯುತ್ತಿದೆ. ಒಂದು ಮೂಲಗಳ ಪ್ರಕಾರ ಆಗಸ್ಟ್ 20ರಂದು ಐಪಿಎಲ್ ತಂಡಗಳು ಯುಎಇಗೆ ಪ್ರಯಾಣ ಬೆಳೆಸಲಿವೆ. ವಿದೇಶಿ ಆಟಗಾರರು ನೇರವಾಗಿ ಯುಎಇಗೆ ಆಗಮಿಸಲಿದ್ದಾರೆ. ಅಲ್ಲಿ ಕೋವಿಡ್ ಶಿಷ್ಟಚಾರ ಮತ್ತು ಮಾರ್ಗಸೂಚಿಗಳ ಪ್ರಕಾರ ಆಟಗಾರರ ತರಬೇತಿ ಶಿಬಿರ ನಡೆಯಲಿದೆ.
ಇನ್ನೊಂದೆಡೆ ಐಪಿಎಲ್ ನಲ್ಲಿ ಆಡುವ ನ್ಯೂಜಿಲೆಂಡ್ ಆಟಗಾರರಿಗೆ ನ್ಯೂಜಿಲೆಂಡ್ ಕ್ರಿಕೆಟ್ ಸಂಸ್ಥೆಯು ಅನುಮತಿ ನೀಡಿದೆ. ಆಟಗಾರರಿಗೆ ಎನ್ಒಸಿ ನೀಡಿದೆ. ಆದ್ರೆ ಕ್ರಿಕೆಟ್ ಆಸ್ಟ್ರೇಲಿಯಾ ಇನ್ನೂ ಆಟಗಾರರಿಗೆ ಅನುಮತಿ ನೀಡಿಲ್ಲ. ಬಿಸಿಸಿಐ ಅಂತಿಮ ನಿರ್ಧಾರ ನೀಡಿದ ಬಳಿಕವೇ ಕ್ರಿಕೆಟ್ ಆಸ್ಟ್ರೇಲಿಯಾ ಅನುಮತಿ ನೀಡಲಿದೆ.
ಐಪಿಎಲ್ ನಲ್ಲಿ ಆಡುವ ನ್ಯೂಜಿಲೆಂಡ್ ಆಟಗಾರರಿಗೆ ಅನುಮತಿ ನೀಡಲಾಗಿದೆ. ಅವರಿಗೆ ಎನ್ಒಸಿ ಕೂಡ ನೀಡಲಾಗಿದೆ. ಆದ್ರೆ ಟೂರ್ನಿಯಲ್ಲಿ ಭಾಗವಹಿಸುವುದು ಬಿಡೋದು ಅವರಿಗೆ ಬಿಟ್ಟ ತೀರ್ಮಾನವಾಗಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಸಂಸ್ಥೆಯ ವಕ್ತಾರ ರಿಚರ್ಡ್ ಬೂಕ್ ಹೇಳಿದ್ದಾರೆ.
ನ್ಯೂಜಿಲೆಂಡ್ನ ಆರು ಮಂದಿ ಕ್ರಿಕೆಟಿಗರು 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಕೇನ್ ವಿಲಿಯಮ್ಸನ್ (ಸನ್ ರೈಸರ್ಸ್ ಹೈದ್ರಬಾದ್), ಟ್ರೆಂಟ್ ಬೌಲ್ಟ್ (ಮುಂಬೈ ಇಂಡಿಯನ್ಸ್), ಮಿಟ್ಚೆಲ್ ಮೆಕ್ ಕ್ಲೆನಘಾನ್ (ಮುಂಬೈ ಇಂಡಿಯನ್ಸ್), ಜಿಮ್ಮಿ ನಿಶಾಮ್ (ಕಿಂಗ್ಸ್ ಇಲೆವೆನ್ ಪಂಜಾಬ್), ಲೋಕಿಯ್ ಫಗ್ರ್ಯುಸನ್ (ಕೆಕೆಆರ್) ಮತ್ತು ಮಿಟ್ಚೆಲ್ ಸಂಟ್ನೆರ್ (ಚೆನ್ನೈ ಸೂಪರ್ ಕಿಂಗ್ಸ್) ಅವರು ಆಡಲಿದ್ದಾರೆ.
ಹಾಗೇ ಆಸ್ಟ್ರೇಲಿಯಾದ 14 ಮಂದಿ ಕ್ರಿಕೆಟ್ ಆಟಗಾರರು ಈ ಬಾರಿಯ ಐಪಿಎಲ್ ನಲ್ಲಿ ಆಡುತ್ತಿದ್ದಾರೆ. (ಆರೋನ್ ಪಿಂಚ್ (ಆರ್ಸಿಬಿ), ಜೋಶ್ ಫಿಲಿಪ್ಪೆ ( ಆರ್ಸಿಬಿ), ಕೇನ್ ರಿಚಡ್ರ್ಸನ್ (ಆರ್ಸಿಬಿ), ಕ್ರಿಸ್ ಲಿಯಾನ್ (ಮುಂಬೈ ಇಂಡಿಯನ್ಸ್ ), ನತಾನ್ ಕಟ್ಲರ್ ನೇಲ್ (ಮುಂಬೈ ಇಂಡಿಯನ್ಸ್), ಜೋಶ್ ಹಾಝ್ಲೇವುಡ್ (ಸಿಎಸ್ಕೆ), ಶೇನ್ ವಾಟ್ಸನ್ (ಸಿಎಸ್ಕೆ), ಆಲೆಕ್ಸ್ ಕಾರೆಯ್ (ಡೆಲ್ಲಿ ಕ್ಯಾಪಿಟಲ್ಸ್), ಮಾರ್ಕಸ್ ಸ್ಟೋಯಿನಿಸ್ (ಡೆಲ್ಲಿ ಕ್ಯಾಪಿಟಲ್ಸ್), ಗ್ಲೇನ್ ಮ್ಯಾಕ್ಸ್ ವೆಲ್ (ಕಿಂಗ್ಸ್
ಇಲೆವೆನ್), ಪ್ಯಾಟ್ ಕಮಿನ್ಸ್ (ಕೆಕೆಆರ್), ಕ್ರೀಸ್ ಗ್ರೀನ್ (ಕೆಕೆಆರ್), ಸ್ಟೀವ್ ಸ್ಮಿತ್ (ರಾಜಸ್ತಾನ ರಾಯಲ್ಸ್), ಆಂಡ್ರ್ಯೂ ಟೇಯ್ (ರಾಜಸ್ತಾನ ರಾಯಲ್ಸ್) ಪರ ಆಡಲಿದ್ದಾರೆ.








