ಪರ ವಿರೋಧದ ನಡುವೆಯೂ ಕನ್ನಡ ಕಿರುತೆರೆಯಲ್ಲಿ ಡಬ್ಬಿಂಗ್ ಧಾರಾವಾಹಿಗಳ ಹವಾ ಜೋರಾಗಿದೆ. ಮಹಾಭಾರತ, ರಾಧಾಕೃಷ್ಣ, ದೃಷ್ಟಿ, ನಾಗಕನ್ನಿಕೆ, ಪರಮಾವತಾರಿ ಶ್ರೀಕೃಷ್ಣ, ಗಣೇಶ, ಮಹಾನಾಯಕ ಹೀಗೆ ಈಗ ಕನ್ನಡ ಕಿರುತೆರೆಯಲ್ಲಿ ಡಬ್ಬಿಂಗ್ ಧಾರಾವಾಹಿಗಳು ದರ್ಬಾರ್ ನಡೆಸುತ್ತಿವೆ.
ಅದರಲ್ಲೂ ಖಾಸಗಿ ವಾಹಿನಿಯಲ್ಲಿ ಬಿಡುಗಡೆಯಾಗುತ್ತಿರುವ ಮಹಾಭಾರತ ಹಾಗೂ ರಾಧಾಕೃಷ್ಣ ಧಾರಾವಾಹಿಗಳು ಕನ್ನಡಿಗರ ಹೃದಯ ಸಿಂಹಾಸನದಲ್ಲಿ ವಿರಾಜಾಮನವಾಗಿವೆ. ಪರಿಣಾಮ ಕಳೆದ ವಾರ ‘ಮಹಾಭಾರತ’ 6.6 ಹಾಗೂ ‘ರಾಧಾಕೃಷ್ಣ’ 6.4 ರೇಟಿಂಗ್ ಪಡೆದುಕೊಂಡಿವೆ.
ಚಿಕ್ಕವರು ಹಿರಿಯರು ಎಂಬ ವ್ಯತ್ಯಾಸ ವಿಲ್ಲದೇ ಮಹಾಕಾವ್ಯ ಮಹಾಭಾರತಕ್ಕೆ ಕನ್ನಡಿಗರು ಮಾರು ಹೋಗಿದ್ದಾರೆ. ಈ ಮೊದಲು ಕಾರ್ ಟೂನ್ ಗಳಿಗೆ ಫಿದಾ ಆಗಿದ್ದ ಪುಟಾಣಿಗಳು ಈಗ ಮಹಾಭಾರತ ಧಾರಾವಾಹಿಗಾಗಿ ಕಾಯುತ್ತಿದ್ದಾರೆ.
ಮಾತ್ರವಲ್ಲ ಆರಂಭದ ದಿನಗಳಿಂದಲೂ ಮಹಾಭಾರತ ಧಾರಾವಾಹಿ ಒಳ್ಳೆಯ ರೇಟಿಂಗ್ ಪಡೆದಿತ್ತು. ಅದರಲ್ಲೂ ಕಳೆದ ವಾರ ಪ್ರಸಾರವಾದ ದ್ರೌಪದಿ ವಸ್ತ್ರಾಪಹರಣದ ಸಂಚಿಕೆಗಳು ವೀಕ್ಷಕರನ್ನು ಪುಳಕಿತರನ್ನಾಗಿ ಮಾಡಿದ್ದು, ಕಳೆದ ವಾರದ ಸಂಚಿಕೆಗಳು ಒಳ್ಳೆಯ ರೇಟಿಂಗ್ ಪಡೆದುಕೊಂಡಿವೆ.
ಇದು ಡಬ್ಬಿಂಗ್ ಸೀರಿಯಲ್ಗಳ ಮಟ್ಟಿಗೆ ಮೊದಲ ಬಾರಿಗೆ ಹೆಚ್ಚಿನ ರೇಟಿಂಗ್ ಪಡೆದ ಧಾರಾವಾಹಿ ಕೂಡಾ ಹೌದು. ಎರಡು ಡಬ್ಬಿಂಗ್
ಧಾರಾವಾಹಿಗಳು ರೇಟಿಂಗ್ ನಲ್ಲಿ ಟಾಪ್ 1 ,ಟಾಪ್ 2 ಸ್ಥಾನಗಳನ್ನು ಗಳಿಸುವ ಮೂಲಕ ಕನ್ನಡ ಕಿರುತೆರೆ ಇತಿಹಾಸದಲ್ಲಿ ಈ ಸೀರಿಯಲ್ ಗಳು ಹೊಸ ದಾಖಲೆ ಬರೆದಿವೆ.








