ಕೆಫೆ ಕಾಫಿ ಡೇ ತನಿಖಾ ವರದಿ ಬಹಿರಂಗ – ಐಟಿ ಇಲಾಖೆ ಗೆ ಕ್ಲೀನ್ ಚಿಟ್
ಬೆಂಗಳೂರು, ಜುಲೈ 25: ಕೆಫೆ ಕಾಫಿ ಡೇ ಸಂಸ್ಥಾಪಕ ಮತ್ತು ಮಾಲೀಕ ವಿ.ಜಿ ಸಿದ್ಧಾರ್ಥ ಅವರ ಮರಣದ ಸುಮಾರು ಒಂದು ವರ್ಷದ ನಂತರ, ಸಿಬಿಐ ನಿವೃತ್ತ ಅಧಿಕಾರಿಯೊಬ್ಬರ ತನಿಖಾ ವರದಿಯು ಬಹಿರಂಗವಾಗಿದೆ. ತನಿಖೆಯಲ್ಲಿ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಬ್ಯಾಲೆನ್ಸ್ ಶೀಟ್‌ನಲ್ಲಿ 2,693 ಕೋಟಿ ರೂ ಅಂತರ ಇರುವುದಾಗಿ ಕಂಡು ಬಂದಿದೆ.
ತನಿಖಾಧಿಕಾರಿ, ಕೇಂದ್ರ ತನಿಖಾ ದಳದ (ಸಿಬಿಐ) ಮಾಜಿ ಡಿಐಜಿ ಮಟ್ಟದ ಅಧಿಕಾರಿ ಅಶೋಕ್ ಕುಮಾರ್ ಮಲ್ಹೋತ್ರಾ ಆದಾಯ ತೆರಿಗೆ ಇಲಾಖೆಯ ವಿರುದ್ಧದ ಎಲ್ಲಾ ಆರೋಪಗಳನ್ನು ತೆರವುಗೊಳಿಸಿದ್ದಾರೆ ಮತ್ತು ಸಿದ್ಧಾರ್ಥ ಅವರ ಆತ್ಮಹತ್ಯೆಗೆ ಈ ಹಿಂದೆ ಹೊಣೆಗಾರರು ಎಂದು ಆರೋಪಿಸಲಾದ ಐಐಟಿ ಅಧಿಕಾರಿಗಳು ಸಿದ್ಧಾರ್ಥ ಅವರಿಗೆ ಕಿರುಕುಳ ನೀಡಿಲ್ಲ ಎಂದು ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ಕಿರುಕುಳಗಳು ನಡೆದಿವೆ ಎಂಬ ಅನುಮಾನವನ್ನು ಸೆಳೆಯಲು ನಮಗೆ ಯಾವುದೇ ಸಾಕ್ಷ್ಯಗಳು ದೊರಕಿಲ್ಲ ಎಂದು ವರದಿಯಲ್ಲಿ ಮಲ್ಹೋತ್ರಾ ಹೇಳಿದ್ದಾರೆ.
ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ನ (ಸಿಡಿಇಎಲ್) ನಿರ್ದೇಶಕರ ಮಂಡಳಿಯು ಆಗಸ್ಟ್ 30, 2019 ರಂದು ವಿ.ಜಿ.ಯ ಕೊನೆಯ ಪತ್ರದಲ್ಲಿ ನೀಡಿದ ಹೇಳಿಕೆಗಳಿಗೆ ಕಾರಣವಾದ ಸಂದರ್ಭಗಳ ಬಗ್ಗೆ ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳದ (ಸಿಬಿಐ) ನಿವೃತ್ತ ಅಧಿಕಾರಿ ಅಶೋಕ್ ಕುಮಾರ್ ಮಲ್ಹೋತ್ರಾ ಅವರನ್ನು ನೇಮಿಸಿತ್ತು.
ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಅಂಗಸಂಸ್ಥೆ ಕಂಪನಿಗಳೊಂದಿಗೆ ವ್ಯವಹಾರ ಸಂಬಂಧವನ್ನು ಹೊಂದಿರುವ ವಿ.ಜಿ ಸಿದ್ಧಾರ್ಥ ಅವರ ವೈಯಕ್ತಿಕ ವ್ಯವಹಾರ ಭಾಗದಲ್ಲಿರುವ ಮೈಸೂರು ಅಮಾಲ್ಗಮೇಟೆಡ್ ಕಾಫಿ ಎಸ್ಟೇಟ್ ಲಿಮಿಟೆಡ್ (MACEL) ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ .
ವಿ.ಜಿ ಸಿದ್ಧಾರ್ಥ ಅವರ ಶವ ಕಳೆದ ವರ್ಷ ಜುಲೈನಲ್ಲಿ ಮಂಗಳೂರಿನ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದ್ದು, ಐಟಿ ಅಧಿಕಾರಿಗಳ ಕಿರುಕುಳದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಊಹಾಪೋಹಗಳು ಹರಡಿದ್ದವು.
ವರದಿಯ ಪ್ರಕಾರ, ಮೈಸೂರು ಅಮಾಲ್ಗಮೇಟೆಡ್ ಕಾಫಿ ಎಸ್ಟೇಟ್ಸ್ ಲಿಮಿಟೆಡ್ 3535 ಕೋಟಿ ರೂ.ಗಳನ್ನು ಕಾಫಿ ಡೇ ಎಂಟರ್ ಲಿಮಿಟೆಡ್ ನ ಅಂಗಸಂಸ್ಥೆಗಳಿಗೆ ನೀಡಬೇಕಿದೆ.
3535 ಕೋಟಿ ರೂ.ಗಳಲ್ಲಿ, 842 ಕೋಟಿ ರೂ.ಗಳನ್ನು ಮೈಸೂರು ಅಮಾಲ್ಗಮೇಟೆಡ್ ಕಾಫಿ ಎಸ್ಟೇಟ್ಸ್ ಲಿಮಿಟೆಡ್ 31 ಮಾರ್ಚ್ 2019 ರ ವೇಳೆಗೆ ಏಕೀಕೃತ ಲೆಕ್ಕಪರಿಶೋಧಿತ ಹಣಕಾಸು ಹೇಳಿಕೆಗಳ ಪ್ರಕಾರ ಅಂಗಸಂಸ್ಥೆಗಳಿಗೆ ನೀಡಬೇಕಾಗಿತ್ತು ಎಂದು ವರದಿ ತೋರಿಸಿದೆ.

ತನಿಖಾ ವರದಿಯ ಪ್ರಕಾರ, ಸಿದ್ಧಾರ್ಥರ ವೈಯಕ್ತಿಕ ಆಸ್ತಿಗಳು ಮತ್ತು ಷೇರುಗಳನ್ನು ಕಂಪನಿಯ ಮತ್ತು ಅದರ ಅಂಗಸಂಸ್ಥೆಗಳ ವ್ಯಾಪಾರ ಸಾಲಕ್ಕಾಗಿ ಅಡಮಾನ ಇಡಲಾಗಿದೆ. ತನಿಖಾ ವರದಿಯನ್ನು 2020 ರ ಜುಲೈ 24 ರಂದು ತನಿಖಾಧಿಕಾರಿಗಳು ಸಿಡಿಇಎಲ್ ಮಂಡಳಿಗೆ ಸಲ್ಲಿಸಿದರು.ಅಶೋಕ್ ಮಲ್ಹೋತ್ರಾ ತನ್ನ ವರದಿಯಲ್ಲಿ ವಿ.ಜಿ ಸಿದ್ಧಾರ್ಥ ತನ್ನ ಉತ್ತಮ ಪ್ರಯತ್ನಗಳ ಹೊರತಾಗಿಯೂ ಲಾಭದಾಯಕ ವ್ಯವಹಾರ ನಡೆಸಲು ವಿಫಲರಾಗಿದ್ದರು ಎಂದು ಹೇಳಿದ್ದಾರೆ.








