ಬಂಟ್ವಾಳ : ವಿವಾಹ ಸಂಭ್ರಮದ ಜೊತೆಗೆ ದೇಶ ಕಾಯುವ ಯೋಧರಿಗೆ ಸನ್ಮಾನ ಮಾಡಿರುವ ಅಪರೂಪದ ಘಟನೆ ಬಂಟ್ವಾಳ ತಾಲೂಕಿನ ಮುಡಿಪು ಗ್ರಾಮದಲ್ಲಿ ನಡೆದಿದೆ. ಧೃತಿ ಮತ್ತು ಉತ್ತಮ ಎಂಬ ಜೋಡಿಯ ಆರತಕ್ಷತೆ ಕಾರ್ಯಕ್ರಮದಲ್ಲಿ 16 ಜನರು ಮಾಜಿ ಸೈನಿಕರಿಗೆ ಸನ್ಮಾನ ಮಾಡಲಾಗಿದೆ. “ಸಿಪಾಯಿಗಳಿಗೆ ಗೌರವ ಕೊಡುವಂತ ಕಾರ್ಯ ಮಾಡಿದ್ದೇವೆ. ನಾವು ಮನೆಯಲ್ಲಿ ನಿಶ್ಚಿಂತೆಯಿಂದ ಮಲಗುವುದು ನಮ್ಮ ದೇಶ ಕಾಯುವ ಯೋಧರಿಂದಾಗಿ. ನಮ್ಮ ದೇಶದ ಮೇಲೆ ನಿರಂತರವಾಗಿ ನಡೆಯುವ ದಾಳಿಯಿಂದಾಗಿ ನಮ್ಮನ್ನು ಕಾಪಾಡಲು ಯೋಧರಿಂದ ಮಾತ್ರ ಸಾಧ್ಯ” ಎಂದು ವಿವಾಹ ಮನೆಯವರಾದ ರಾಜರಾಮ್ ಹೇಳಿದ್ದಾರೆ.
ಇನ್ನು ತಮ್ಮ ವಿವಾಹ ಸಮಾರಂಭದಲ್ಲಿ ದೇಶವನ್ನು ಕಾಯುವ ವೀರ ಯೋಧರಿಗೆ ಸನ್ಮಾಸಿದ ನವ ಜೋಡಿಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.









