ADVERTISEMENT
Thursday, April 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕಾಫಿ ವರ್ಸಸ್ ಚಹಾ ಎನ್ನುವ ಹೊಸ ಸೋಶಿಯಲ್ ಮೀಡಿಯಾ ವಾರ್ ಟ್ರೆಂಡಿನಲ್ಲಿ ಕಾಫಿ ಮತ್ತು ಟೀ ಪರವಾದ ವಾದಗಳು:

admin by admin
July 25, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಕಾಫಿ ವರ್ಸಸ್ ಚಹಾ ಎನ್ನುವ ಹೊಸ ಸೋಶಿಯಲ್ ಮೀಡಿಯಾ ವಾರ್ ಟ್ರೆಂಡಿನಲ್ಲಿ ಕಾಫಿ ಮತ್ತು ಟೀ ಪರವಾದ ವಾದಗಳು:

ಕಾಫಿ ಮತ್ತು ಟೀ/ಚಹಾ/ಚಾ ಪರವಾದ ಮತ್ತು ವಿರುದ್ಧವಾದ ಸೃಜನಾತ್ಮಕ ಫೇಸ್ ಬುಕ್ ಪೋಸ್ಟ್ ವಾರ್ ಟ್ರೇಂಡಿಂಗ್ ನ ಕೆಲವು ಆಸಕ್ತಿಕರವಾದ ಪೋಸ್ಟ್ ಗಳು ಇಲ್ಲಿವೆ.

Related posts

ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ನಾ : ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದರೂ ನನ್ನ ಮೇಲೆ ಆರೋಪವೇಕೆ ಜಮೀರ್ ಅಹ್ಮದ್ ಖಾನ್ ಪ್ರಶ್ನೆ

ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ನಾ : ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದರೂ ನನ್ನ ಮೇಲೆ ಆರೋಪವೇಕೆ ಜಮೀರ್ ಅಹ್ಮದ್ ಖಾನ್ ಪ್ರಶ್ನೆ

April 16, 2026
ಮೋದಿ ಮುಂದೆ ರಾಜ್ಯದ ಹಿತಾಸಕ್ತಿ ಮಂಡಿಸಿದ ಸಿದ್ದರಾಮಯ್ಯ ಸ್ವಾಗತದ ನಡುವೆಯೇ ಸಲ್ಲಿಕೆಯಾಯಿತು 18 ಅಂಶಗಳ ಹಕ್ಕೊತ್ತಾಯ

ಮೋದಿ ಮುಂದೆ ರಾಜ್ಯದ ಹಿತಾಸಕ್ತಿ ಮಂಡಿಸಿದ ಸಿದ್ದರಾಮಯ್ಯ ಸ್ವಾಗತದ ನಡುವೆಯೇ ಸಲ್ಲಿಕೆಯಾಯಿತು 18 ಅಂಶಗಳ ಹಕ್ಕೊತ್ತಾಯ

April 16, 2026

ಕಾಫಿ ಪ್ರಿಯರ ಸಮರ್ಥನೆಗಳು:

1) “ಅನ್ಯ ಕ್ಷೇತ್ರೇ ಕೃತಂ ಪಾಪಂ ಪುಣ್ಯ ಕ್ಷೇತ್ರೇ
ವಿನಃಶ್ಯತಿ..
ಪುಣ್ಯಕ್ಷೇತ್ರೇ ಕೃತಂ ಪಾಪಂ
‘ಕಾಫಿ’ ಘಮ ಲೇಪೋ ಭವಿಷ್ಯತಿ”

ಇದು ಒರಿಜಿನಲ್ ಅಂತೇ.

ಅಂದರೇ ಬೇರೆಲ್ಲಾದ್ರೂ ಪಾಪ ಮಾಡಿದರೇ ಪುಣ್ಯ ಕ್ಷೇತ್ರದಲ್ಲಿ ಪರಿಹಾರವಾಗುತ್ತದೇ
ಆದರೆ ಪುಣ್ಯ ಕ್ಷೇತ್ರದಲ್ಲಿ ಪಾಪ ಮಾಡಿದ್ರೇ (ಉದಾಹರಣೆಗೆ ಧರ್ಮಸ್ಥಳಕ್ಕೇ ಹೋಗಿ ಚಹಾ ಸೇವನೆ ಮಾಡುವುದು)
ಕಾಫಿಯ ಘಮವನ್ನು ಸೇವಿಸುವುದರಿಂದಲೇ ಪರಿಹಾರಗೊಳ್ಳುತ್ತದೇ.

2) “ಚಹಂ ಬ್ರೂಯಾತ್, ಕಾಫಿಂ ಬ್ರೂಯಾತ್
ನ ಬ್ರೂಯಾತ್ ಚಹಂ ಅಪ್ರಿಯ”

ಅಂದರೆ ಚಹದ ಬಗ್ಗೇ ಹೇಳಿ, ಕಾಫಿಯ ಬಗ್ಗೆ ಹೊಗಳಿ ಪರವಾಗಿಲ್ಲ, ಚಲ್ತಾ ಹೈ.
ಆದರೆ ಅಪ್ರಿಯವಾದ ಚಹವನ್ನು ಮಾತ್ರ ಏಕಮುಖವಾಗಿ ಹೊಗಳಬೇಡಿ.

3) “ಚಾ” ಕರಿ ಮಾಡುವ
“ಚಾ” ಪ್ರಿಯ
“ಚಾ”ರಣಿಗರೆಲ್ಲಾ
“ಚಾ”ದರ ಹೊದ್ದು ಮಲಗಿ
ನೀವೆಷ್ಟೇ “ಚಾ”ಲೆಂಜ್ ಹಾಕಿದ್ರೂ
ನಮ್ಮ “ಚಾ”ನ್ಸ್ ಮಿಸ್ ಆಗಲ್ಲ
“ಚಾ”ನ್ಸಲರ್ ಆಗಿದ್ರೂ ಹಿಟ್ಲರ್ “ಕಾಫಿ”ರನೇ
“ಚಾ”ರ್ ಮೀನಾರ್ ಗಿಂತ ಎತ್ತರ ನಮ್ಮ ಕಾಫೀ ಕೀರ್ತಿ

4) ಡಲ್ಗೋನಾ ಕಾಫಿ ಚಾಲೆಂಜ್ ಇದೆ ಡಲ್ಗೋನಾ ಟೀ ಚಾಲೆಂಜ್ ಇದ್ಯಾ?
ಇನ್ನೊಂದು ಪಾಯಿಂಟ್ ಸಿಕ್ತು ಕಾಪಿ ರೈಟ್ ಇದೆ ಚಾಪಿ ರೈಟ್ಸ್ ಅಂತಿಲ್ಲ.
ಕಾಫಿ ಅಪ್ಪಟ ಕರ್ನಾಟಕ ಸುಪುತ್ರ ಆದ್ರೆ ಟೀ ವಲಸಿಗ!

5) “ಟಿ”ಎನ್ ಸೀತಾರಾಮ್ ಕೂಡಾ “ಕಾಫಿ” ತೋಟ ಮಾಡಿದ್ರು!
ಅರ್ಥ ಮಾಡಿಕೊಳ್ಳಿ ಕಾಫಿಯ ಮಹತ್ವ

6) ನಮ್ಮ ಬೆಂಗಳೂರಲ್ಲಿ ಸೆಂಟ್ರಲ್ ಕಾಫಿ ಬೋರ್ಡ್ ಅಂತಿದೆ. ಸೆಂಟ್ರಲ್ ಚಹಾ ಬೋರ್ಡ್ ಎಲ್ಲೂ ಕಾಣಲಿಲ್ಲಪ್ಪ.

“ಕಾಫಿ ಸತ್ಯಂ ಚಹನ್ಮಿತ್ಯ”

7) ಬ್ರೌಸಿಂಗ್ ಕೇಂದ್ರಕ್ಕೆ ಇಂಟರ್ ನೆಟ್ ಕೆಫೆ ಅಂತಾರೆ ಹೊರತು ಇಂಟರ್ ನೆಟ್ ಚಾಫೇ ಅಥವಾ ಟಿಫೆ ಅನ್ನಲ್ಲ..
ಬೆಂಗಳೂರಲ್ಲಿ ಹಟ್ಟಿ ಕಾಪಿ ಇದೆ ಹಟ್ಟಿ ಟೀ ಇಲ್ಲ..
ಬ್ರಾಹ್ಮಣರ ಕಾಫಿಬಾರ್ ಇದೆ ಟೀ ಬಾರ್ ಇಲ್ಲ..
ನಮ್ ಸಿದ್ಧಾರ್ಥ ಅವರು ಕೆಫೆ ಕಾಫಿ ಡೇ ಮಾಡಿದ್ರು ಟೀ ಡೇ ಮಾಡಲಿಲ್ಲ..
ಸಾಯುವಾಗಲೂ ಕಾಫಿನ್ ಬಾಕ್ಸ್ ನಲ್ಲಿ ಹಾಕ್ತಾರೆ ಟಿಫಿನ್ ಬಾಕ್ಸ್ ನಲ್ಲಿ ಬಾಡಿ ಹಾಕೋಕ್ಕಾಗಲ್ಲ..
ಅತ್ಯುತ್ತಮ ಬರಹಗಾರ ಕಾಫ್ – ಕಾ..
ಕಾಫಿನ್ ಇದೆ .. ಸತ್ತ ಮೇಲೂ ಕಾಫಿ ಬೇಕೇ ಬೇಕು

8) ಈ ‘ಚಾ’ಹಂ ಕೂಡಾ ಒಂದು ಬಗೆಯ ‘ಅಹಂ’
ಎಕ್ಸಾಮ್ ಹಾಲ್ನಲ್ಲೂ ಕಾಪಿ ಹೊಡಿಬೋದು, ಟೀ ಹೊಡ್ಯಕಾಗುತ್ತಾ
Coffee ಗೆ ಎರಡು F, ಎರಡು E ಇದೆ. ಟೀಗಿದೆಯಾ?
ತಬಿಯತ್ “ಟೀ”ಕ್ ನಹಿ ಅಂತಾರೆ ಟೀ ಕುಡಿದವರು..

9) ಟೀ ಮಹಾತ್ಮೆ ಅಷ್ಟೇ. ಆದ್ರೇ ಕಾಫಿ ದೀರ್ಘಾಯುಷ್ಯದ ಗುಟ್ಟು, ಜೀವನ ಪ್ರೀತಿ. ಅಲ್ಲ ಅಪ್ಪಿ ತಪ್ಪಿ ಯಾರಿಗಾದ್ರೂ ಹೀಟ್ ಆಗಬಹುದು ಕೂಲ್ ಆಗತ್ತೇ ತಂತಾನೆ. ಆದ್ರೆ ಚಾ ಕುಡಿದ್ರೆ ಪಿತ್ತ ಪ್ರಕೋಪ. ನಿದ್ರೆ ಬರಲ್ಲ, ಭ್ರಮೆಗಳು ಕಾಡತ್ತೆ. ಚಾ ಕುಡಿದು ಪಿತ್ತ ನೆತ್ತಿಗೇರಿದ್ರೇ, ಐಶ್ವರ್ಯಾ ರೈ ಕೂಡಾ ರಾಕಿ ಸಾವಂತ್ ತರಾ ಕಾಣ್ತಾಳೆ.

10) ಸ್ವರ್ಗಸಮಾನ ಅನುಭೂತಿ ನೀಡುವ ಕಾಫಿಯನ್ನು ದೂರುವ ಕಾಫಿ ರರೇ ನೀವು ನರಕದಲ್ಲಿ ಒಂಟೀ ಯಾಗಲಿದ್ದೀರಿ ಎಚ್ಚರ.

11) “ಟೀ”ಚರ್ಸ್ ಅಂತ ವಿಸ್ಕಿ ಇದೆ.. ಕಾಫಿಚರ್ಸ್ ಅಂತ ಇದ್ಯಾ ಅಂತ ಯುದ್ಧಕ್ಕೆ ಬರ್ತಾರೆ.. ಯಾವುದಕ್ಕೂ ಮೊದಲೇ ತಯಾರಾಗೋಣ.

12) ಸಾಫ್ಟ್‌ವೇರ್ ಇಂಜಿನಿಯರು: ನಾನು ಕಾಪಿ ಪೇಸ್ಟ್ ಮಾಡ್ತೀನಿ. ಆದರೆ ಟೀ ಪೇಸ್ಟ್ ಮಾಡಕ್ಕಾಗಲ್ಲ!

13) ಅಪಿ ಸ್ವರ್ಣ ಮಯೀ ಚಹಾ ನಮೇ ಲಕ್ಷ್ಮಣ ರೋಚತೇ
ಕಾಪೀ ಘಮಘಮಸ್ವಾದಶ್ಚ ಸ್ವರ್ಗಾದಪಿ ಗರೀಯಸಿ’’
ಇದು ಆ ಶ್ಲೋಕದ ಮೂಲಪಾಠವಂತೆ.

14) ಚಹಾ ಮಾಡುವ ವಿಧಾನ: ಒಲೇ ಮೇಲೊಂದ್ ಪಾತ್ರೆ ಇಟ್ಟು ಅದ್ಕೆ ಒಂದಿಷ್ಟ್ ನೀರು, ಹಾಲು ಚಾಪುಡಿ ಸಕ್ರೆ ಹಾಕಿ ಕುದಿಸಿ ಸೋಸಿ ಕುಡ್ಯೋದು

ಕಾಫಿ ಮಾಡುವ ವಿಧಾನ: ಓಹ್, ತಡೀರಿ. ಡಿಕಾಕ್ಷನ್ ಬಗ್ಗೆ ಹೇಳೋದಕ್ಕೆ ಹೋದರೇ ನಾಲ್ಕು ಪೇಜ್ ಬರೀಬೇಕಾಗುತ್ತದೆ. ಪಾಪ ಅದು ಈ ಚಾ ಮಂದಿಗೆ ಅರ್ಥವಾಗೋದೇ ಅಲ್ಲ.
#ಕಾಫಿಯೇದೇವರು

15) ಟೀಸಿಂಗ್ : ಏನ್ರೀ ಬರೀ ಟೀ ಕುಡೀತೀರಾ ಯಾವಾಗ್ಲೂ ಅಂತ ಅಣಕಿಸೋದು..

16) ಜಡ್ಜು: ನಿಂಗ್ ಕಾಫಿ ಇಷ್ಟಾನೋ , ಟೀ ಇಷ್ಟಾನೋ

ಪಾರ್ಲೆ ಜಿ : ನಂಗೆ..ನಂಗೆ…ಇಬ್ರೂ ಇಷ್ಟ ಅಂಕಲ್..
ಆದ್ರೆ ಜಗಳ ನೋಡಕ್ಕಾಗದೆ ಅಮುಲ್ ಅಂಕಲ್ ಮಿಲ್ಕ್ ಡೈರಿಗೆ ಹೋಗಿ ಮುಳುಗಿಬಿಡೋಣ ಅಂತಿದೀನಿ..

17) “ಚಾ”ಡಿ ಹೇಳಲು ಬೇಡ ನಾಲಗೆ ಅಂತ ದಾಸರು ಬರೆದಿದ್ದಾರೆ
ಕಾಫಿ ಬಗ್ಗೆ ಹೀಗೆಲ್ಲ ಏನೂ ಬರ್ದಿಲ್ಲ..
*

ಟೀ ಪರವಾದ ಚಹಾಪ್ರೇಮಿಗಳ ವಾದ:

1) ಟೀ ಬ್ರೇಕ್ ಇದೆ!
ಟೀ ಟೈಮ್ ಇದೆ ಅಂತಾರೆ ಕಾಫಿ ಬ್ರೇಕ್ ಇಲ್ಲ.. ಟಿಫಿನ್ ಇದೆ ಕಾಫಿನ್ ಇಲ್ಲ
ಟಿ ಶರ್ಟ್ ಇದೆ ಕಾಫಿ ಶರ್ಟ್ ಇದ್ಯ?
ಅರೇಕಾ ಟೀ ಇದೆ.. ಅರೇಕಾಫಿ ಇಲ್ಲ…

2) ಟೀನ್ ಅಂತನ್ನೋದು ಎಳೆಯರಿಗೆ ಫೇವರಿಟ್!
ಚಾ_Tea ಏಟು

3) ಮೈಸೂರು ಮಹಾರಾಜರೇ ತಮ್ಮ ಹೆಸರಲ್ಲಿ “ಚಾ”ಮರಾಜಾ ಅಂತ ಚಾ ವನ್ನು ಸೇರಿಸ್ಕೊಂಡಿದ್ದರು!ಎಂಥಾ ಗೌರವ ಈ ಚಾಕ್ಕೆ ಸಂದಿದೆ!

4) ಟೀನೇಜಿದೆ ಕಾಫಿಏಜ್ ಇದ್ಯಾ ? T- shirt ide ಕಾಫಿ ಶರ್ಟ್ ಇದ್ಯಾ ? ಟಿಬೆಟ್ ಇದೆ, ಕಾಫಿಬೆಟ್ ಇದ್ಯಾ ? T series ಇದೆ ಕಾಫಿ ಸೀರಿಸ್ ಇದ್ಯಾ ?
ಕೊನೆಗೆ…..
ಕಾಫಿ ತಂದು ಇಡುವುದೂ ಕೂಡ ಟಿ-ಪಾಯಿಯ ಮೇಲೆಯೇ 😉

5) ಟೀಕ್ಲಬ್ ನವರದು ಯುನಿtea ಇನ್ ಡೈವರ್ಸಿtea. ಈ ಕೌಂಟ್ರು ಇಟರ್ನಿtea..ನಿಮ್ಮಂಥ ಸಿಂಪ್ಲಿಸಿtea ಇರೋರಿಂದನೆ ಬರ್ತದೆ

6) ‘ಚಾ’ಡ್ ಅ೦ತ ದೇಶ ಇದೆ, ‘ಚಾ’ಮರಾಜನಗರ ಎ೦ಬ ಜಿಲ್ಲೆ ಇದೆ, ‘ಚಾ’ಮು೦ಡೇಶ್ವರಿ ದೇವತೆ ಇದ್ದಾಳೆ,
ಕಾಫಿ ಇ೦ದ ಏನಿದೆ?
ಚ೦ದ್ರನು ಟೀ ಪ್ರಿಯ ಅದಕ್ಕೆ ಅವನನ್ನು ಹಿ೦ದಿಯಲ್ಲಿ ‘ಚಾ’೦ದ್ ಅ೦ತಾರೆ.

7) ಸರ್ವಸ್ಯ “ಚಾ”ಹಂ ಹೃದಿ ಸನ್ನಿವಿಷ್ಟೋ ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ । ವೇದೈಶ್ಚ ಸರ್ವೈರಹಮೇವ ವೇದ್ಯೋ ವೇದಾಂತಕೃದ್ ವೇದವಿದೇವ “ಚಾ”ಹಮ್|| (ಗೀತೆ: 15:15). ಶ್ರೀಕೃಷ್ಣ ಪರಮಾತ್ಮನೇ ಹೇಳಿದ್ದಾನೆ “ಚಾ”ಹಂ ಎಂದು, ಒಂದಲ್ಲ ಎರಡೆರಡು ಬಾರಿ. ಕಾಫಿಗಿಲ್ಲ ಆ ಮಾನ್ಯತೆ, ದೈವತ್ವ.

8) ಟಿ’ಯಲ್ಲೂ ಉಂಟು ವೆರೈ’ಟಿ
ಗ್ರೀನ್’ಟಿ
ಲೆಮನ್’ಟಿ
ಜಿಂಜರ್’ಟಿ
ಆದರೂ ಅವೆಲ್ಲಕ್ಕೂ
ಮಿಗಿಲಾದುದು
“ನನ್ನ ನಲ್ಲೆಯ ಕೆಂದು’ಟಿ”
-ಡುಂಡಿರಾಜ್

9) ಶ್ರೀಕೃಷ್ಣ ಅರ್ಜುನನಿಗೆ ಉಪದೇಶ ಮಾಡಿದ್ದು ಚಾ-ಟೀ ಹಿಡಿದುಕೊಂಡು.

10) ಭಗವದ್ಗೀತೆಯಲ್ಲಿ ಭಗವಾನ್ ಉವಾ”ಚಾ” ಇರುವುದು. ಕಾಫಿಯಲ್ಲ

11) ಬಿಕ್ಷಾಂದೇಹಿ “ಚಾ” ಪಾರ್ವತಿ. ಇಲ್ಲಿ ಕಾಫಿ ಕೇಳುತ್ತಿಲ್ಲ. ಚಾ ಕೇಳುತ್ತಿರುವುದು.

Tags: Coffeesocial media trendingTeaTea vs. Coffeetrending war
ShareTweetSendShare
Join us on:

Related Posts

ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ನಾ : ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದರೂ ನನ್ನ ಮೇಲೆ ಆರೋಪವೇಕೆ ಜಮೀರ್ ಅಹ್ಮದ್ ಖಾನ್ ಪ್ರಶ್ನೆ

ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ನಾ : ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದರೂ ನನ್ನ ಮೇಲೆ ಆರೋಪವೇಕೆ ಜಮೀರ್ ಅಹ್ಮದ್ ಖಾನ್ ಪ್ರಶ್ನೆ

by Shwetha
April 16, 2026
0

ರಾಜ್ಯ ರಾಜಕಾರಣದಲ್ಲಿ ಈಗ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ನಂತರದ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿವೆ. ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕಠಿಣ...

ಮೋದಿ ಮುಂದೆ ರಾಜ್ಯದ ಹಿತಾಸಕ್ತಿ ಮಂಡಿಸಿದ ಸಿದ್ದರಾಮಯ್ಯ ಸ್ವಾಗತದ ನಡುವೆಯೇ ಸಲ್ಲಿಕೆಯಾಯಿತು 18 ಅಂಶಗಳ ಹಕ್ಕೊತ್ತಾಯ

ಮೋದಿ ಮುಂದೆ ರಾಜ್ಯದ ಹಿತಾಸಕ್ತಿ ಮಂಡಿಸಿದ ಸಿದ್ದರಾಮಯ್ಯ ಸ್ವಾಗತದ ನಡುವೆಯೇ ಸಲ್ಲಿಕೆಯಾಯಿತು 18 ಅಂಶಗಳ ಹಕ್ಕೊತ್ತಾಯ

by Shwetha
April 16, 2026
0

ಬೆಂಗಳೂರು ನಿನ್ನೆ ಎರಡು ಪ್ರಬಲ ರಾಜಕೀಯ ಶಕ್ತಿಗಳ ಸಮಾಗಮಕ್ಕೆ ಸಾಕ್ಷಿಯಾಯಿತು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯಕ್ರಮಕ್ಕಾಗಿ ನಗರಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಹೆಚ್‌ಎಎಲ್‌ ವಿಮಾನ...

ಪೋಪ್ ಲಿಯೋ ವಿರುದ್ಧ ಟ್ರಂಪ್ ಮತ್ತೆ ಆಕ್ರೋಶ

ಪೋಪ್ ಲಿಯೋ ವಿರುದ್ಧ ಟ್ರಂಪ್ ಮತ್ತೆ ಆಕ್ರೋಶ

by Shwetha
April 16, 2026
0

ಇರಾನ್ ವಿಚಾರವಾಗಿ ಡೊನಾಲ್ಡ್ ಟ್ರಂಪ್ ಮತ್ತೆ ಪೋಪ್ ಲಿಯೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಇರಾನ್ ಕನಿಷ್ಠ 42,000 ನಿರಾಯುಧ ಪ್ರತಿಭಟನಾಕಾರರನ್ನು ಹತ್ಯೆ ಮಾಡಿದೆ...

ನಂಬಿಕೆ ವರ್ಸಸ್ ಸಂವಿಧಾನ ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಎತ್ತಿದ ಅಸಲಿ ಪ್ರಶ್ನೆಗಳೇನು

ನಂಬಿಕೆ ವರ್ಸಸ್ ಸಂವಿಧಾನ ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಎತ್ತಿದ ಅಸಲಿ ಪ್ರಶ್ನೆಗಳೇನು

by Shwetha
April 16, 2026
0

ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಕಾನೂನು ಹೋರಾಟವು ಈಗ ಅತ್ಯಂತ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ಈ ಸಂವೇದನಾಶೀಲ ಪ್ರಕರಣದ...

CBSE 10ನೇ ತರಗತಿ ಫಲಿತಾಂಶ ಪ್ರಕಟ; ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ

CBSE 10ನೇ ತರಗತಿ ಫಲಿತಾಂಶ ಪ್ರಕಟ; ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ

by Shwetha
April 16, 2026
0

CBSE 10ನೇ ತರಗತಿಯ ಸೆಷನ್-1 ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ದೇಶಾದ್ಯಂತ ತಮ್ಮ ಫಲಿತಾಂಶವನ್ನು ಕಾಯುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು UMANG...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram