ಗಸೆ ಗಸೆ ಹಣ್ಣಿನಲ್ಲಿದೆ ರೋಗ ನಿವಾರಣೆ ಮಾಡೋ ಶಕ್ತಿ..!
ಗಸೆ ಗಸೆ ಹಣ್ಣು:
ಈ ಹಣ್ಣಿನ ಒಳಗಿರುವ ಪುಟ್ಟ ಪುಟ್ಟ ಬೀಜಗಳು ಗಸೆಗಸೆಯನ್ನು ಹೋಲುವುದರಿಂದ ಇದನ್ನು ಗಸೆ ಗಸೆ ಹಣ್ಣು ಎಂದು ಕರೆಯುತ್ತಾರೆ. ಇದಕ್ಕೆ ಸಿಂಗಾಪುರ ಚೆರ್ರಿ, ಜಪಾನಿಸ್ ಚೆರ್ರಿ ಎಂಬ ಹೆಸರುಗಳೂ ಇವೆ. ತಿನ್ನಲು ಬಹಳ ರುಚಿಯಾದ ಹಣ್ಣುಗಳಿವು. ಇದು ಬಹಳ ಬೇಗ ಬೆಳೆಯುವ ಮರವಾದ್ದರಿಂದ ಇದನ್ನು ತೋಟದಲ್ಲಿ ನೆರಳಿಗಾಗಿ ಬೆಳೆಯುತ್ತಾರೆ. ಈ ಹಣ್ಣು ಹಕ್ಕಿಗಳಿಗೆ ಸಾಕಷ್ಟು ಆಹಾರ ಒದಗಿಸುತ್ತವೆ. ಅದರಲ್ಲೂ ಬಾವಲಿಗಳಿಗೆ ಈ ಹಣ್ಣೆಂದರೆ ಬಲು ಇಷ್ಟ. ಹಕ್ಕಿಗಳಿಂದಲೇ ಬೀಜಪ್ರಸಾರ ಚುರುಕುಗೊಂಡು ಪರಿಸರ ಸಮತೋಲನ ಸಾಧ್ಯವಾಗುತ್ತದೆ.
ಈ ಹಣ್ಣುಗಳನ್ನು ತಿನ್ನುವುದರಿಂದ ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆಯಂಶ ಕಡಿಮೆಯಾಗುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿರುವುದರಿಂದ ಶೀತ, ಜ್ವರ, ಹೃದಯ, ರಕ್ತನಾಳ ಕಾಯಿಲೆಗಳ ವಿರುದ್ಧ ಹೋರಾಡಬಲ್ಲ ಶಕ್ತಿ ನೀಡುತ್ತದೆ. ಗಸೆಗಸೆ ಎಲೆಯ ಚಹಾವನ್ನು ಸೇವಿಸುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಪ್ರತಿ ದಿನ ಈ ಹಣ್ಣು ಸೇವಿಸುವುದರಿಂದ ಸುಸ್ತು ಕಡಿಮೆಯಾಗಿ ಚೈತನ್ಯ ಮೂಡಿಸುತ್ತದೆ.
ಇದಲ್ಲದೇ ಇದರ ಇನ್ನೊಂದು ಪ್ರಮುಖ ಅಂಶವೆಂದರೆ ಆಂಟಿ ಕ್ಯಾನ್ಸರ್ ಅಂಶ ಹೆಚ್ಚಾಗಿದ್ದು, ಇದರ ಎಲೆಗಳನ್ನು ಕ್ಯಾನ್ಸರ್ ಚಿಕಿತ್ಸೆಗೆ ಬಳಸಲು ಸಂಶೋಧನೆ ನಡೆಯುತ್ತಿದೆಯೆಂದು ತಿಳಿದುಬಂದಿದೆ.
-ಮಾಹಿತಿ ಮತ್ತು ಲೇಖನ: ಅಂಬಿಕಾ ಸೀತೂರು