ಕೊರೋನ ಕೊನೆಗೊಳಿಸಲು ಆಗಸ್ಟ್ 5 ರವರೆಗೆ ದಿನಕ್ಕೆ 5 ಬಾರಿ ಹನುಮಾನ್ ಚಾಲಿಸಾ ಪಠಿಸಿ – ಪ್ರಜ್ಞಾ ಸಿಂಗ್
ಭೋಪಾಲ್, ಜುಲೈ 26: ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಮಧ್ಯೆ, ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಶನಿವಾರ (ಜುಲೈ 25) ಜನರು ಕೊರೋನವೈರಸ್ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಲು ಆಗಸ್ಟ್ 5 ರವರೆಗೆ ದಿನಕ್ಕೆ ಐದು ಬಾರಿ ಹನುಮಾನ್ ಚಾಲಿಸಾವನ್ನು ಪಠಿಸಬೇಕು ಎಂದು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮ್ ದೇವಾಲಯ ನಿರ್ಮಾಣಕ್ಕಾಗಿ “ಭೂಮಿ ಪೂಜ” ಸಮಾರಂಭ ಆಗಸ್ಟ್ 5 ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ .

ನಾವೆಲ್ಲರೂ ಒಟ್ಟಾಗಿ ಜನರಿಗೆ ಉತ್ತಮ ಆರೋಗ್ಯವನ್ನು ಬಯಸುತ್ತೇವೆ ಮತ್ತು ಕೊರೋನವೈರಸ್ ಸಾಂಕ್ರಾಮಿಕವನ್ನು ಕೊನೆಗೊಳಿಸಲು ಆಧ್ಯಾತ್ಮಿಕ ಪ್ರಯತ್ನವನ್ನು ಮಾಡೋಣ. ಜುಲೈ 25 ರಿಂದ ಆಗಸ್ಟ್ 5 ರವರೆಗೆ ನಿಮ್ಮ ಮನೆಯಲ್ಲಿ ದಿನಕ್ಕೆ ಐದು ಬಾರಿ ” ಹನುಮಾನ್ ಚಾಲಿಸಾ ” ಪಠಿಸಿ. ದೀಪಗಳನ್ನು ಬೆಳಗಿಸುವ ಮೂಲಕ ಈ ಆಚರಣೆಯನ್ನು ಮುಕ್ತಾಯಗೊಳಿಸಿ. ಆಗಸ್ಟ್ 5 ರಂದು ಮನೆಯಲ್ಲಿ ಭಗವಾನ್ ರಾಮ್‌ಗೆ ಆರತಿ ಅರ್ಪಣೆ ಮಾಡಿ ಎಂದು ಪ್ರಜ್ಞಾ ಸಿಂಗ್ ಟ್ವೀಟ್ ಮಾಡಿದ್ದಾರೆ.
ಮಧ್ಯಪ್ರದೇಶದಲ್ಲಿ ಕೊರೋನವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಬಿಜೆಪಿ ಸರ್ಕಾರ ಭೋಪಾಲ್‌ನಲ್ಲಿ ಆಗಸ್ಟ್ 4 ರವರೆಗೆ ಲಾಕ್‌ಡೌನ್ ವಿಧಿಸಿದೆ ಎಂದು ಅವರು ಹೇಳಿದರು. ಆಗಸ್ಟ್ 4 ರಂದು ಲಾಕ್ ಡೌನ್ ಮುಗಿಯುತ್ತಿದ್ದರೂ, ಹನುಮಾನ್ ಚಾಲಿಸಾ ಪಠಣ ಆಗಸ್ಟ್ 5 ರಂದು ಕೊನೆಗೊಳ್ಳುತ್ತದೆ, ಆಗ ಅಯೋಧ್ಯೆಯ ರಾಮ್ ಮಂದಿರಕ್ಕೆ ಭೂಮಿ ಪೂಜೆ ನಡೆಯಲಿದೆ. ನಾವು ಆ ದಿನವನ್ನು ದೀಪಾವಳಿಯಂತೆ ಆಚರಿಸುತ್ತೇವೆ ಎಂದು ಪ್ರಜ್ಞಾ ಸಿಂಗ್ ತಿಳಿಸಿದ್ದಾರೆ.
ಜನರು … ದೇಶಾದ್ಯಂತದ ಹಿಂದೂಗಳು ಒಂದೇ ಧ್ವನಿಯಲ್ಲಿ ಹನುಮಾನ್ ಚಾಲಿಸಾ ಅನ್ನು ಪಠಿಸಿದರೆ, ಅದು ಖಂಡಿತವಾಗಿಯೂ ಕೆಲಸ ಮಾಡುತ್ತದೆ ಮತ್ತು ನಾವು ಕೊರೋನವೈರಸ್ ನಿಂದ ಮುಕ್ತರಾಗುತ್ತೇವೆ. ಇದು ಭಗವಾನ್ ರಾಮನಿಗೆ ನಿಮ್ಮ ಪ್ರಾರ್ಥನೆ ಎಂದು ಅವರು ಹೇಳಿದ್ದಾರೆ.








