ಭಾರತೀಯ ಯೋಧರಿಗಾಗಿ ಮೋದಿ ರಾಖಿ, ರೇಷ್ಮೆ ರಾಖಿ ಸೇರಿದಂತೆ 10,000 ಕ್ಕೂ ಹೆಚ್ಚು ರಾಖಿಗಳ ಹಸ್ತಾಂತರ
ಹೊಸದಿಲ್ಲಿ, ಜುಲೈ 26: ಚೀನಾದ ಸರಕುಗಳನ್ನು ಬಹಿಷ್ಕರಿಸುವ ಅಭಿಯಾನದ ಮಧ್ಯೆ ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ಕಾರ್ಯಚರಿಸುವ ಭಾರತೀಯ ಸೈನಿಕರಿಗಾಗಿ ಮಹಿಳಾ ಉದ್ಯಮಿಗಳು 10,000 ಕ್ಕೂ ಹೆಚ್ಚು ರಾಖಿಗಳನ್ನು ವಿನ್ಯಾಸಗೊಳಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಶನಿವಾರ, ಮಹಿಳಾ ಉದ್ಯಮಿಗಳು ವಿನ್ಯಾಸಗೊಳಿಸಿದ 10,000 ಕ್ಕೂ ಹೆಚ್ಚು ರಾಖಿಗಳನ್ನು ಹಸ್ತಾಂತರಿಸಿದ್ದು ಮತ್ತು ಹಸ್ತಾಂತರಿಸಿದ ರಾಖಿಗಳಲ್ಲಿ ದೆಹಲಿಯಲ್ಲಿ ತಯಾರಿಸಿದ ‘ಮೋದಿ ರಾಖಿ’ ಕೂಡ ಸೇರಿದೆ.

ಸೈನಿಕರಿಗಾಗಿ ಸಿಂಗ್ ಗೆ ಹಸ್ತಾಂತರಿಸಿದ ರಾಖಿಗಳು ದೆಹಲಿಯಲ್ಲಿ ಮಾಡಿದ ಮೋದಿ ರಾಖಿ, ನಾಗ್ಪುರದಲ್ಲಿ ಮಾಡಿದ ಸೆಣಬಿನ ರಾಖಿ, ಜೈಪುರದಲ್ಲಿ ಮಾಡಿದ ಪೇಂಟ್ ರಾಖಿ, ಪುಣೆಯಲ್ಲಿ ಮಾಡಿದ ಬೀಜ ರಾಖಿ, ಸತ್ನಾದಲ್ಲಿ ಮಾಡಿದ ಉಣ್ಣೆ ರಾಖಿ, ಜಮ್ಖಾಂಡ್‌ಪುರದ ಬುಡಕಟ್ಟು ವಸ್ತುಗಳಿಂದ ತಯಾರಿಸಿದ ಜಾರ್ಖಂಡ್ ರಾಖಿ , ಅಸ್ಸಾಂನ ಟಿನ್ಸುಕಿಯಾದಲ್ಲಿ ತಯಾರಿಸಿದ ಚಹಾ ಎಲೆಗಳ ರಾಖಿ, ಕೋಲ್ಕತ್ತಾದಲ್ಲಿ ಚಹಾ ಎಲೆಗಳಿಂದ ಮಾಡಿದ ರಾಖಿ, ಕೋಲ್ಕತ್ತಾದಲ್ಲಿ ತಯಾರಿಸಿದ ಸಿಲ್ಕ್ ರಾಖಿ, ಮುಂಬೈನಲ್ಲಿ ತಯಾರಿಸಿದ ಫ್ಯಾಶನ್ ರಾಖಿ, ಇತ್ಯಾದಿ ಸೇರಿವೆ ಎಂದು ಸಿಎಐಟಿ ತಿಳಿಸಿದೆ.

ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಮಾತನಾಡಿ, ಮಹಿಳಾ ಉದ್ಯಮಿಗಳು ವಿವಿಧ ರಾಜ್ಯಗಳ ಕೆಳ ಆರ್ಥಿಕ ವರ್ಗದ ಮಹಿಳೆಯರ ಸಹಯೋಗದೊಂದಿಗೆ ಭಾರತೀಯ ಸರಕುಗಳನ್ನು ಬಳಸುವ ಮೂಲಕ ಲಕ್ಷಾಂತರ ರಾಖಿಗಳನ್ನು ಮಾಡಿದ್ದಾರೆ. ಈ ರಾಖಿಗಳನ್ನು ವ್ಯಾಪಾರಿಗಳಿಗೆ ಮತ್ತು ಅವರ ಉದ್ಯೋಗಿಗಳಿಗೆ ದೇಶಾದ್ಯಂತ ವ್ಯಾಪಿಸಿರುವ ವ್ಯಾಪಾರ ಸಂಘಗಳ ಮೂಲಕ ವಿತರಿಸಲಾಗುವುದು ಎಂದು ಸಿಎಐಟಿ ತಿಳಿಸಿದೆ.








