ಶ್ರೇಷ್ಠ ವ್ಯಕ್ತಿಯ ಜೊತೆ ವಾದ ಮಾಡಲು ನಾನ್ಯಾರು..? ಸಚಿನ್ ಹೋಲಿಕೆಗೆ ಇಯಾನ್ ಬೆಲ್ ಉತ್ತರ..!
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ನ ಒಲಿವ್ ಪೊಪ್ ಆಕರ್ಷಕ 91 ರನ್ ದಾಖಲಿಸಿ ಇಂಗ್ಲೆಂಡ್ ತಂಡಕ್ಕೆ ಆಧಾರವಾದ್ರು. ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಒಲಿವ್ ಪೊಪ್ ಅವರು ಕೇವಲ 9 ರನ್ಗಳಿಂದ ಶತಕ ವಂಚಿರಾದ್ರು. ಆದ್ರೂ ಪೊಪ್ ಅವರು ತನ್ನ ಅಮೋಘ ಆಟದ ಮೂಲಕ ಗಮನ ಸೆಳೆದಿದ್ದಾರೆ.
ಒಲಿವ್ ಪೊಪ್ ಅವರ ಬ್ಯಾಟಿಂಗ್ ವೈಖರಿಗೆ ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್ ಕೂಡ ಫಿದಾ ಆಗಿದ್ದಾರೆ. ಪೊಪ್ ಅವರ ಬ್ಯಾಟಿಂಗ್ ತಾಂತ್ರಿಕತೆಗೆ ಬಗ್ಗೆ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಒಲಿವ್ ಪೊಪ್ ಅವರನ್ನು ಇಂಗ್ಲೆಂಡ್ ಕ್ರಿಕೆಟ್ ನ ಶ್ರೇಷ್ಠ ಆಟಗಾರ ಇಯಾನ್ ಬೆಲ್ ಜೊತೆ ಹೋಲಿಸಿದ್ದಾರೆ.
ನಾನು ಮೂರನೇ ಟೆಸ್ಟ್ ಪಂದ್ಯದಲ್ಲಿ ಒಲಿವ್ ಪೊಪ್ ಅವರ ಬ್ಯಾಟಿಂಗ್ ವೈಖರಿಯನ್ನು ಗಮನಿಸಿದ್ದೆ. ಒಲಿವ್ ಪೊಪ್ ಅವರ ನಿಲುವು ಮತ್ತು ಫೂಟ್ ವರ್ಕ್ ನೋಡಿದಾಗ ಇಯಾನ್ ಬೆಲ್ ಅವರನ್ನು ನೋಡಿದಂತೆ ಅನ್ನಿಸುತ್ತದೆ ಎಂದು ಸಚಿನ್ ತೆಂಡುಲ್ಕರ್ ಟ್ವಿಟ್ ಮಾಡಿದ್ದರು. ಇಯಾನ್ ಬೆಲ್ ಒಟ್ಟಾರೆ ಸುಮರು 13 ಸಾವಿರ ರನ್ಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ದಾಖಲಿಸಿದ್ದಾರೆ.
ಇನ್ನು ಸಚಿನ್ ಅವರ ಟ್ವಿಟ್ ಗೆ ಇಯಾನ್ ಬೆಲ್ ಪ್ರತಿಕ್ರಿಯಿಸಿದ್ದಾರೆ. ಅಂತ ಶ್ರೇಷ್ಠ ವ್ಯಕ್ತಿಯ ಜೊತೆ ವಾದ ಮಾಡಲು ನಾನು ಯಾರು. ಒಲಿವ್ ಪೊಪ್ ಶತಕ ದಾಖಲಿಸುತ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ದೇನೆ ಎಂದು ಇಯಾನ್ ಬೆಲ್ ಟ್ವಿಟ್ ಮಾಡಿದ್ದರು. ಆದ್ರೆ ಒಲಿವ್ ಪೊಪ್ ಅವರು 91 ರನ್ಗೆ ಔಟಾಗಿದ್ದರು.









