ಮಕ್ಕಳ ಆನ್ ಲೈನ್ ಶಿಕ್ಷಣಕ್ಕಾಗಿ ಹಸು ಮಾರಿದ್ದಾತನ ನೆರವಿಗೆ ನಿಂತಿದ್ದ ಬಹುಭಾಷಾ ನಟ ಸೋನು ಸೂದ್ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನೆಮಾದಲ್ಲಿ ವಿಲನ್ ಆದ್ರೂ ರಿಯಲ್ ಲೈಫ್ ನಲ್ಲಿ ಹೀರೋ ಎನಿಸಿಕೊಂಡಿರುವ ಸೋನು ಸೂದ್ ಅವರು ಇದೀಗ ಟ್ವೀಟ್ ಒಂದನ್ನು ಮಾಡಿದ್ದು, ಸದ್ಯ ಭಾರೀ ಸದ್ದು ಮಾಡ್ತಿದೆ. ಆಂಧ್ರಪ್ರದೇಶದಲ್ಲಿ ಬಡ ರೈತಕುಟುಂಬವೊಂದು ಹೊಲ ಊಳಲು ಕಷ್ಟಪಟ್ಟಿರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, ಈ ಕುಟುಂಬ ಜೋಡಿ ಎತ್ತುಗಳಿಗೆ ಅರ್ಹವಲ್ಲ. ಬದಲಿಗೆ ಟ್ರ್ಯಾಕ್ಟರ್ ಗೆ ಅರ್ಹ ಎಂದು ಅಡಿಬರಹ ಕೊಟ್ಟಿದ್ದಾರೆ.
ಆಂಧ್ರಪ್ರದೇಶದ ರೈತಕುಟುಂಬವೊಂದು ಎತ್ತುಗಳ ಖರೀದಿಗೆ ಸಾಕಷ್ಟು ಹಣವಿಲ್ಲದ ಪರಿಣಾಮ, ಕುಟುಂಬದ ಹೆಣ್ಣುಮಕ್ಕಳೇ ಎತ್ತುಗಳ ಜಾಗದಲ್ಲಿ ಉಳುಮೆ ಮಾಡಿದ್ದು, ಸ್ಥಳೀಯರು ಇದರ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅನ್ನದಾತನ ಕುಟುಂಬಕ್ಕೆ ನೆರವಾಗಿ, ಸೋನು ಸೂದ್ ರಿಯಲ್ ಹೀರೋ ಆಗಿದ್ದಾರೆ. ರೈತನ ಕುಟುಂಬ ಟ್ರಾಕ್ಟರ್ ಗೆ ಅರ್ಹ. ಹೀಗಾಗಿ ಒಂದು ಟ್ರ್ಯಾಕ್ಟರ್ ಅನ್ನು ಕಳುಹಿಸಲಾಗ್ತಿದೆ. ಇಂದು ಸಂಜೆಯೊಳಗೆ ನಿಮ್ಮ ಜಮೀನಿನಲ್ಲಿ ಟ್ರ್ಯಾಕ್ಟರ್ ಉಳಿಮೆ ಮಾಡಲಿದೆ. ಸ್ಟೇ ಬ್ಲೆಸ್ಸಡ್ ಅಂತ ಎಂದು ಟ್ವೀಟ್ ಮಾಡಿ ಅಭಿಮಾನಿಗಳ ಮನಗೆದ್ದಿದ್ದಾರೆ.
ದರ್ಶನ್ ಗೆ ಬೇಲ್; ಚಾಮುಂಡೇಶ್ವರಿ ದರ್ಶನ ಪಡೆದ ವಿಜಯಲಕ್ಷ್ಮೀ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಗೆ ಜಾಮೀನು ಸಿಕ್ಕಿದ್ದು, ಈಗ ಆಸ್ಪತ್ರೆಯಿಂದಲೂ ದರ್ಶನ್ ಮನೆಗೆ ಬಂದಿದ್ದಾರೆ. ಈ ವೇಳೆ ಪತ್ನಿ ವಿಜಯಲಕ್ಷ್ಮೀ ತಾಯಿ ಚಾಮುಂಡೇಶ್ವರಿಯ ದರ್ಶನ ಮಾಡಿದ್ದಾರೆ,....