ಪಿ.ವಿ. ಸಿಂಧೂ ವೃತ್ತಿ ಬದುಕಿಗೆ ಹೊಸ ತಿರುವು ಸಿಕ್ಕಿದ್ದ ಟೂರ್ನಿ ಯಾವುದು …?
ಪಿ.ವಿ. ಸಿಂಧೂ.. ಭಾರತದ ಬ್ಯಾಡ್ಮಿಂಟನ್ ಕ್ರೀಡೆಯ ಆಶಾ ಕಿರಣ. ಸಣ್ಣ ಪ್ರಾಯದಲ್ಲೇ ದೊಡ್ಡ ಸಾಧನೆ ಮಾಡಿದ್ದ ಪಿ.ವಿ. ಸಿಂಧೂ ಮಾಡಿರುವುದು ಅಪ್ರತಿಮ ಸಾಧನೆಯೇ ಸರಿ. ಹೈದ್ರಬಾದ್ ನ ಪಿ.ವಿ. ಸಿಂಧೂ ಅವರು ಈಗ ಮನೆಯಲ್ಲೇ ಇದ್ದಾರೆ. ಕೋವಿಡ್ ನಿಂದಾಗಿ ಯಾವುದೇ ಟೂರ್ನಿಗಳನ್ನು ಆಡುತ್ತಿಲ್ಲ. ತರಬೇತಿಯನ್ನು ನಡೆಸುತ್ತಿಲ್ಲ. ಸದ್ಯ ಫಿüಟ್‍ನೆಸ್ ಹಾಗೂ ಮನೆಯಲ್ಲೇ ಅಭ್ಯಾಸ ಮಾಡುತ್ತಾ, ಅಡುಗೆ, ಪೇಟಿಂಗ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಪಿ.ವಿ. ಸಿಂಧೂ ಅವರು ತಮ್ಮ ವೃತ್ತಿ ಬದುಕಿನ ಬಗ್ಗೆ ಸಿಂಹಾವಲೋನ ಮಾಡಿಕೊಂಡಿದ್ದಾರೆ. ತಾನು ಈ ಮಟ್ಟಕ್ಕೆ ಬೆಳೆಯಲು ಹೇಗೆ ಸಾಧ್ಯವಾಯ್ತು ? ತನ್ನ ವೃತ್ತಿ ಬದುಕಿಗೆ ತಿರುವು ಕೊಟ್ಟ ಟೂರ್ನಿ ಯಾವುದು ಎಂಬುದನ್ನು ಸಹ ಹೇಳಿಕೊಂಡಿದ್ದಾರೆ.
ಆರಂಭದ ದಿನಗಳಲ್ಲಿ ಪಿ.ವಿ. ಸಿಂಧೂ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ವೈಫಲ್ಯ ಅನುಭವಿಸುತ್ತಿದ್ದರು. ಹೀಗಾಗಿ ಅವರು ಸಾಕಷ್ಟು ಬಾರಿ ನಿರಾಸೆ ಅನುಭವಿಸಿದ್ದರು. ಆದ್ರೆ 2012 ಚೀನಾ ಓಪನ್ ಟೂರ್ನಿಯಲ್ಲಿ ಒಲಿಂಪಿಕ್ ಚಾಂಪಿಯನ್ ಲಿ ಕ್ಸುಯೆರಿ ಅವರನ್ನು ಸೋಲಿಸಿದ ನಂತರ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದರು. ಆ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ. ಆ ಗೆಲುವಿನ ನಂತರ ಸತತವಾಗಿ ಪ್ರಶಸ್ತಿಗಳನ್ನು ಗೆಲ್ಲಲು ಸಾಧ್ಯವಾಯ್ತು ಎಂದು ಪಿ.ವಿ. ಸಿಂಧೂ ಹೇಳಿದ್ದಾರೆ.
ನಾನು ಆರಂಭದ ದಿನಗಳಲ್ಲಿ ಉತ್ತಮವಾಗಿಯೇ ಆಡುತ್ತಿದೆ. ಆದ್ರೆ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ನಿರಾಸೆ ಅನುಭವಿಸುತ್ತಿದ್ದೆ. ಮೊದ ಮೊದಲು ನಾನು ಫಸ್ಟ್ ರೌಂಡ್, ಅರ್ಹತಾ ಪಂದ್ಯಗಳಲ್ಲಿ ಸೋಲು ಅನುಭವಿಸುತ್ತಿದೆ. ಆಗ ನನಗೆ ಅನ್ನಿಸಿದ್ದು ನಾನು ಇನ್ನೂ ಅಭ್ಯಾಸ ಮಾಡಬೇಕು, ಹೀಗಾಗಿ ಕಠಿಣ ಅಭ್ಯಾಸದಲ್ಲಿ ನಿರತನಾದೆ. ಆದ್ರೂ ಈ ಸಮಯದಲ್ಲಿ ನಾನು ತುಂಬಾ ನಿರಾಸೆಗೊಳ್ಳುತ್ತಿದೆ. ಎಲ್ಲಿ ತಪ್ಪುಗಳು ಆಗುತ್ತಿವೆ ಎಂಬುದನ್ನು ಯೋಚನೆ ಮಾಡುತ್ತಿದೆ. ನನ್ನ ಪ್ರಕಾರ ನನ್ನ ವೃತ್ತಿ ಬದುಕಿಗೆ ಟರ್ನಿಂಗ್ ಸಿಕ್ಕಿರುವುದು ಆ ಪಂದ್ಯದಲ್ಲಿ. 2012ರ ಚೀನಾ ಓಪನ್ ಟೂರ್ನಿಯಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ಲಿ ಕ್ಸುಯೆರಿ ಅವರನ್ನು ಸೋಲಿಸಿದ್ದೆ. ಆ ನಂತರ ನನ್ನ ಆಟದಲ್ಲಿ ಸಾಕಷ್ಟು ಸುಧಾರಣೆ ಮಾಡಿಕೊಂಡೆ ಎಂದು ಹಳೆಯ ಪಂದ್ಯವನ್ನು ನೆನಪು ಮಾಡಿಕೊಂಡ್ರು ಪಿ.ವಿ. ಸಿಂಧೂ.
ನಾನು 2004ರ ಒಲಿಂಪಿಕ್ ಚಾಂಪಿಯನ್ ತೌಫಿಕ್ ಹಿದಾಯತ್ ಅವರ ಅಭಿಮಾನಿ. ಅವರ ಬ್ಯಾಕ್ ಹ್ಯಾಂಡ್ ಆಟ ಮತ್ತು ಒಲಿಂಪಿಕ್ ಚಾಂಪಿಯನ್ ಲಿನ್ ಡಾನ್ ಅವರ ಆಟದ ಶೈಲಿಯೂ ತುಂಬಾ ಇಷ್ಟವಾಗುತ್ತಿತ್ತು ಎನ್ನುವ ಸಿಂಧೂ, ಚೀನಾ ಓಪನ್ ಮುಗಿದ ನಂತರ ನಾನು ಹೈದ್ರಬಾದ್‍ಗೆ ಬಂದಾಗ ಅಭಿಮಾನಿಯೊಬ್ಬರು ನನಗೆ ಒಂದು ತಿಂಗಳ
ವೇತನವನ್ನು ಬಹುಮಾನವಾಗಿ ನೀಡಿದ್ದರು. ಇದನ್ನು ನಾನು ಇವತ್ತಿಗೂ ನೆನಪಿನಲ್ಲಿಟ್ಟುಕೊಂಡಿದ್ದೇನೆ. ಹಾಗೇ ಅಭಿಮಾನಿಗೆ ಪತ್ರ ಬರೆದು ಸ್ವಲ್ಪ ಹಣವನ್ನು ಕಳುಹಿಸಿದ್ದೆ ಅಂತಾರೆ ಪಿ.ವಿ. ಸಿಂಧೂ.
ಸದ್ಯ ಪಿ.ವಿ. ಸಿಂಧೂ ವಿಶ್ವ ರ್ಯಾಂಕಿಂಗ್ ನಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. 2012 ಚೀನಾ ಓಪನ್ ನಂತರ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ವಿಶ್ವ ಚಾಂಪಿಯನ್‍ಷಿಪ್‍ನಲ್ಲಿ ಒಟ್ಟು ಐದು ಪದಕಗಳನ್ನು ಗೆದ್ದಿದ್ದಾರೆ. ಎರಡು ಕಂಚು, ಎರಡು ಬೆಳ್ಳಿ ಮತ್ತು ಒಂದು ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಇದೀಗ ಮನೆಯಲ್ಲಿ ಅಭ್ಯಾಸ ನಡೆಸುತ್ತಿದ್ದೇನೆ. ಹಾಗೇ ಅಡುಗೆ, ಪೇಟಿಂಗ್ ಸಹ ಮಾಡುತ್ತಿದ್ದೆನೆ. ಇದು ತುಂಬಾ ಆಸಕ್ತಿ ಮೂಡಿಸುತ್ತಿದೆ. ಈ ಹಿಂದೆ ನಾನು ಬ್ಯಾಡ್ಮಿಂಟನ್ ಆಡುತ್ತಿದೆ. ಆದ್ರೆ ಈಗ ಕೆಲವೊಂದು ವಿಚಾರಗಳನ್ನು ಕಲಿಯುತ್ತಿದ್ದೇನೆ. ಕೊವಿಡ್-19 ನಿಂದಾಗಿ ಸದ್ಯಕ್ಕೆ ತರಬೇತಿ ಶಿಬಿರ ಆರಂಭವಾಗಿಲ್ಲ. ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯು ಹೈದ್ರಬಾದ್ ನಲ್ಲಿ ಜುಲೈ 1ರಿಂದ ತರಬೇತಿ ಶಿಬಿರ ಅಂತ ಹೇಳಿತ್ತು. ಆದ್ರೆ ತೆಲಂಗಾನ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ತೆಲಗಾಂಣದಲ್ಲಿ ಕೋವಿಡ್ ಸೋಂಕು ಜಾಸ್ತಿಯಾಗುತ್ತಿದೆ.








