ಬೆಂಗಳೂರು: ಮೂರು ದಿನಗಳ ಹಿಂದೆ ಕೊರೊನಾ ಟೆಸ್ಟ್ ಮಾಡಿಸಿದ ವ್ಯಕ್ತಿಗೆ ಪಾಸಿಟಿವ್ ಬಂದಿದ್ದರೂ ಆಸ್ಪತ್ರೆ ದಾಖಲಿಸುವ ಅಥವಾ ಮನೆಯಲ್ಲೇ ಹೋಂ ಐಸೋಲೇಶನ್ ಮಾಡದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಬೊಮ್ಮನಹಳ್ಳಿಯ ವ್ಯಕ್ತಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಮೂರು ದಿನಗಳ ಹಿಂದೆ ಹೊಸರೋಡ್‍ನ ಬಿಬಿಎಂಪಿ ಆಸ್ಪತ್ರೆಗೆ ತೆರಳಿ ಕೊರೊನಾ ಟೆಸ್ಟ್ ಮಾಡಿಸಿದ್ದರು. ನಿನ್ನೆ ಕೊರೊನಾ ಟೆಸ್ಟ್ ವರದಿ ಬಂದಿದ್ದು, ಕೋವಿಡ್ ಇರುವುದು ದೃಢಪಟ್ಟಿದೆ. ತಮ್ಮನ್ನು ಆಸ್ಪತ್ರೆಗೆ ದಾಖಲಿಸುವಂತೆ ಬಿಬಿಎಂಪಿಗೆ ಹಲವು ಬಾರಿ ಕರೆ ಮಾಡಿದರೂ ಯಾರೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.
ನಿನ್ನೆ ವ್ಯಕ್ತಿಗೆ ಉಸಿರಾಟದ ಸಮಸ್ಯೆ ಹೆಚ್ಚಾಗಿದೆ. ಮತ್ತೆ ಹಲವು ಬಾರಿ ಬಿಬಿಎಂಪಿಗೆ ಕರೆ ಮಾಡಿದ್ದಾರೆ. ಆದರೆ ಯಾರೂ ಬಂದಿಲ್ಲ. ರಾತ್ರಿ 9 ಗಂಟೆ ವೇಳೆಗೆ ಉಸಿರಾಟದ ಸಮಸ್ಯೆ ಹೆಚ್ಚಾಗಿ ವ್ಯಕ್ತಿ ಮೃತಪಟ್ಟಿದ್ದಾರೆ.
ಕಳೆದ ರಾತ್ರಿಯಿಂದ ವ್ಯಕ್ತಿಯ ಮೃತದೇಹ ಮನೆಯಲ್ಲೇ ಇದೆ. ವ್ಯಕ್ತಿ ಮೃತಪಟ್ಟು 12 ಗಂಟೆ ಕಳೆದರೂ ಬಿಬಿಎಂಪಿ ಸಿಬ್ಬಂದಿ ಬಾರದೇ ಇರುವುದಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Astro- ನಿಮ್ಮ ದೇವರ ಕೋಣೆಯಲ್ಲಿ ಈ ಎರಡು ವಸ್ತು ಇದ್ದರೆ ತಕ್ಷಣ ತೆಗೆದುಬಿಡಿ ಇದರಿಂದ ದೋಷ ಉಂಟಾಗುವುದು ಖಚಿತ.
ಮನುಷ್ಯನ ದೇಹದಲ್ಲಿ ಹೃದಯವು ಎಷ್ಟು ಮುಖ್ಯವೋ ಅದೇ ರೀತಿಯಾಗಿ ನಮ್ಮ ಮನೆಯಲ್ಲಿ ದೇವರ ಕೋಣೆ ಎಂಬುದು ಅಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಪವಿತ್ರವಾದ ಸ್ಥಳದಲ್ಲಿ ಈ...








