ಟಾವಿವುಡ್ ನ ಖ್ಯಾತ ನಟ ನಿತಿನ್ ಗೆಳತಿ ಶಾಲಿನಿ ಜೊತೆಗೆ ಹಸಮಣೆ ಏರಿದ್ದು, ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದುಕೊಂಡಂತೆ ಎಲ್ಲವು ಆಗಿದ್ದರೆ ಬಹಳ ಹಿಂದೆಯೇ ಅಂದ್ರೆ ಏ.16 ನಿತಿನ್ ವಿವಾಹವಾಗಬೇಕಿತ್ತು. ಆದರೆ ಕೊರೊನಾ ಬಿಕ್ಕಟ್ಟಿನಿಂದಾಗಿ ಮದುವೆಯನ್ನು ಮುಂದೂಡಲೇ ಬರಲಾಗುತ್ತಿತ್ತು. ಅದ್ರಲ್ಲೂ ಈ ಜೋಡಿ ದುಬೈನಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳುವ ಪ್ಲಾನ್ ನಲ್ಲಿತ್ತು, ಆದ್ರೀಗ ಕೊರೊನಾ ಲಾಕ್ ಡೌನ್ ನಿಂದಾಗಿ ನಿತಿನ್ ಹಾಗೂ ಶಾಲಿನಿ ಸಿಂಪಲ್ ಆಗಿ ಮದುವೆಯಾಗಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. 
ಹೈದ್ರಾಬಾದ್ ನ ಫಲಕನುಮಾ ಪ್ಯಾಲೆಸ್ ನಲ್ಲಿ ವಿವಾಹ ಮಹೋತ್ಸವ ನೆರವೇರಿದ್ದು, ಸಮಾರಂಭದಲ್ಲಿ ಕುಟುಂಸ್ಥರು, ಆತ್ಮೀಯರು, ಸ್ನೇಹಿತರು ಭಾಗಿಯಾಗಿ ನವಜೋಡಿಗೆ ಆಶೀರ್ವದಿಸಿದ್ದಾರೆ. ಇದೀಗ ಈ ಜೊಡೀಯ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇನ್ನೂ ಟಾಲಿವುಡ್ ನ ಕೆಲವೇ ಕೆಲವು ಸೆಲೆಎಬ್ರಿಟಿಗಳು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ನಟ ವರುಣ್ ತೇಜ್, ಕಾರ್ತಿಕೇಯ ಸೇರಿದಂತೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ಮದುವೆಯಲ್ಲಿ ಪಾಲ್ಗೊಂಡಿದ್ದರು.. ಇನ್ನೂ ಹಲವರು ಸೋಷಿಯಲ್ ಮೀಡಿಯಾಗಳ ಮೂಲಕವೇ ಈ ಜೋಡಿಗೆ ಶುಭಹಾರೈಸಿದ್ರು.

Mangaluru – ತುಳುವ ಮಹಾಸಭೆ ಇಂಟರ್ ನ್ಯಾಷನಲ್ ಕತಾರ್ ಘಟಕದ ಅಧ್ಯಕ್ಷರಾಗಿ ಡಾ. ಮೂಡಂಬೈಲ್ ರವಿ ಶೆಟ್ಟಿ ನೇಮಕ
ಮಂಗಳೂರು: 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆ, ವಿಶ್ವದಾದ್ಯಂತ ನೆಲೆಸಿರುವ ತುಳುವರನ್ನು ಸಂಘಟಿಸುವುದು ಹಾಗೂ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಮತ್ತು ಪರಂಪರೆಯ ಸಂರಕ್ಷಣೆ...








