ಫ್ರಾನ್ಸ್ ನಿಂದ ಭಾರತಕ್ಕೆ ಮೊದಲ ಹಂತದ 5 ರಫೇಲ್ ಯುದ್ಧ ವಿಮಾನಗಳು ಹೊರಟಿದ್ದು, ಸುಮಾರು 7000ಕಿಮಿಗಳ ಸುಧೀರ್ಘ ಪ್ರಯಾಣದ ನಂತರ ಭಾರತಕ್ಕೆ ಬಂದು ಲ್ಯಾಂಡ್ ಆಗಲಿವೆ. ಅಲ್ಲಿನ ವಾಯುನೆಲೆಯಿಂದ ಹೊರಟಿರುವ ರಫೇಲ್ ಯುದ್ಧ ವಿಮಾನಗಳು ಬಹುತೇಕ ಜುಲೈ 29ರಂದು ಭಾರತ ಪ್ರವೇಶಿಸಲಿವೆ. ಹರಿಯಾಣದ ಅಂಬಾಲ ವಾಯುನೆಲೆಗೆ ಬರಲಿರುವ ರಫೇಲ್ ವಿಮಾನಗಳು ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳ್ಳಲಿದೆ. ಈ ಮೂಲಕ ಭಾರತದ ವಾಯುಪಡೆಗೆ ಆನೆಬಲ ಸಿಕ್ಕಂತಾಗಿದೆ. ಮಂಗಳವಾರ ಯುಎಇನಲ್ಲಿ ನಿಲ್ಲಿಸಿ, ಅಲ್ಲಿ ಇಂಧನ ತುಂಬಿಸಿಕೊಂಡು ಬಳಿಕ ಮತ್ತೆ ಅಲ್ಲಿಂದ ಹೊರಡಲಿರುವ ರಫೇಲ್ ಯುದ್ಧವಿಮಾನಗಳು ಬುಧವಾರ ಭಾರತಕ್ಕೆ ಬಂದು ಲ್ಯಾಂಡ್ ಆಗಲಿವೆ. 
ಇನ್ನೂ ಈ ಕುರಿತು ಟ್ವಿಟ್ ಮೂಲಕ ಮಾಹಿತಿ ನೀಡಿರುವ ಫ್ರಾನ್ಸ್‍ನಲ್ಲಿನ ಭಾರತೀಯ ರಾಯಭಾರಿ ಕಚೇರಿ ಭಾರತದ ವಾಯುಪಡೆಗೆ ಸೇರಲಿರುವ ಮೊದಲ ಹಂತದ 5 ರಪೇಲ್ ಯುದ್ಧ ವಿಮಾನಗಳು ಫ್ರಾನ್ಸ್ ನಿಂದ ಭಾರತಕ್ಕೆ ಹಾರಿವೆ. ಬಾರತ 2016ರಲ್ಲಿ ಒಟ್ಟು 36 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಫ್ರಾನ್ಸ್ ನೊಂದಿಗೆ ಒಪ್ಪಂದ ಮಾಡಿಕೊಮಡಿತ್ತು. ಅದರ ಮೊದಲ ಭಾಗವಾಗಿ ಈಗಾಗಲೇ ಮೊದಲ ಹಂತದ 5 ವಿಮಾನಗಳು ಭಾರತ ಪ್ರವೆಶಕೆ ಸಜ್ಜಾಗಿವೆ ಎಂದು ತಿಳಿಸಿದೆ.
ಮೊದಲ ಬ್ಯಾಚ್‌ನ ಯುದ್ಧ ವಿಮಾನಗಳು ಹರಿಯಾಣದ ಅಂಬಾಲ ವಾಯುನೆಯಲ್ಲಿ ನಿಯೋಜನೆಗೊಳ್ಳಲಿದೆ. ಎರಡನೇ ಬ್ಯಾಚ್ ಪಶ್ಚಿಮ ಬಂಗಾಳದ ಹಸಿಮರದಲ್ಲಿ ನಿಯೋಜನೆಗೊಳ್ಳಲಿದೆ. ಈಗಾಗಲೇ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ 400 ಕೋಟಿಯ ಕಾಮಗಾರಿಯನ್ನ ವಾಯುಸೇನೆ ಮಾಡಿದೆ.








