ADVERTISEMENT
Sunday, March 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನಿಗಮ ಮಂಡಳಿಗಳಿಗೆ ನೇಮಕ: ಬಿಎಸ್‍ವೈಗೆ ಶುರುವಾಯ್ತು ಬಂಡಾಯದ ಬಿಸಿ

admin by admin
July 27, 2020
in Newsbeat, Politics, Samagra karnataka, ರಾಜಕೀಯ, ರಾಜ್ಯ
bs yeddyurappa
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಬೆನ್ನಲ್ಲೇ ಸಚಿವ ಸ್ಥಾನ ಸಿಗದ ಶಾಸಕರನ್ನು ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾರಿ ಆದೇಶ ಹೊರ ಬೀಳುತ್ತಿದ್ದಂತೆ ಬಿಜೆಪಿ ಶಾಸಕರಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಶಾಸಕರ ಬಂಡಾಯದ ಬಿಸಿ ಹೊಸ ತಲೆನೋವಾಗಿ ಪರಿಣಮಿಸಿದೆ.
ಕಳೆದ ನಾಲ್ಕು ತಿಂಗಳಿಂದ ಕೊರೊನಾ ಕಾರಣಕ್ಕೆ ಯಾವುದೇ ರಾಜಕೀಯ ತೀರ್ಮಾನಗಳಿಗೆ ಯಡಿಯೂರಪ್ಪ ಕೈಹಾಕಿರಲಿಲ್ಲ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷ ಗಡಿದಾಟಿದ್ದು, ಚಿಕಿತ್ಸೆ ಕೊಡಿಸಲು ರಾಜ್ಯ ಸರ್ಕಾರ ಹೆಣಗಾಡುತ್ತಿದೆ. ಕೊರೊನಾ ಕಾರಣದಿಂದಾಗಿಯೇ ಸಚಿವ ಸಂಪುಟ ವಿಸ್ತರಣೆಯಂತಹ ಮಹತ್ವದ ನಿರ್ಧಾರಗಳಿಗೆ ಯಡಿಯೂರಪ್ಪ ಅವರು ಕೈಹಾಕಿರಲಿಲ್ಲ.


ಲಾಕ್‍ಡೌನ್‍ನಂತಹ ಯಾವುದೇ ಪ್ರಯತ್ನಗಳಿಂದಲೂ ಕೊರೊನಾ ಕಟ್ಟಿಹಾಕಲು ಸಾಧ್ಯವಾಗದು ಎಂಬ ಅರಿತ ಸರ್ಕಾರ, ಕೊರೊನಾದೊಂದಿಗೆ ನಾವು ಬದುಕಬೇಕು ಎನ್ನುವ ಮೂಲಕ ಜನಜೀವನ ಸಹಜ ಸ್ಥಿತಿ ಮರಳುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಇದರ ಬೆನ್ನಲ್ಲೇ ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿ ನೇಮಕವೆಂಬ ಜೇನುಗೂಡಿಗೆ ಯಡಿಯೂರಪ್ಪ ಕೈಹಾಕಿದ್ದಾರೆ. ನಿಗಮ-ಮಂಡಳಿ ನೇಮಕದಿಂದ ಶಾಸಕರ ಅಸಮಾಧಾನ ಸ್ಫೋಟಗೊಳ್ಳಲಿದೆ ಎಂಬ ಕಾರಣಕ್ಕಾಗಿಯೇ ಕೊರೊನಾ ನೆಪವೊಡ್ಡಿ ಮುಂದಕ್ಕೆ ಹಾಕುತ್ತಾ ಬಂದಿದ್ದರು.

Related posts

ನವಭಾರತ ಯಾರ ಅಪ್ಪಣೆಗೂ ಕಾಯುವುದಿಲ್ಲ: ಅಮೆರಿಕದ ದರ್ಪಕ್ಕೆ ರೈಸಿನಾ ಡೈಲಾಗ್‌ನಲ್ಲಿ ಜೈಶಂಕರ್ ತಿರುಗೇಟು

ನವಭಾರತ ಯಾರ ಅಪ್ಪಣೆಗೂ ಕಾಯುವುದಿಲ್ಲ: ಅಮೆರಿಕದ ದರ್ಪಕ್ಕೆ ರೈಸಿನಾ ಡೈಲಾಗ್‌ನಲ್ಲಿ ಜೈಶಂಕರ್ ತಿರುಗೇಟು

March 8, 2026
ಟಿಟ್ವೆಂಟಿ ವಿಶ್ವಕಪ್ ಫೈನಲ್ ಮಹಾಸಮರ: ಪ್ರೇಕ್ಷಕರ ಸದ್ದಡಗಿಸುತ್ತೇವೆ ಎಂದ ನ್ಯೂಜಿಲೆಂಡ್ ನಾಯಕ: ತವರಿನಲ್ಲಿ ಭಾರತಕ್ಕೆ ಒಲಿಯಲಿದೆಯಾ ಚಾಂಪಿಯನ್ ಪಟ್ಟ

ಟಿಟ್ವೆಂಟಿ ವಿಶ್ವಕಪ್ ಫೈನಲ್ ಮಹಾಸಮರ: ಪ್ರೇಕ್ಷಕರ ಸದ್ದಡಗಿಸುತ್ತೇವೆ ಎಂದ ನ್ಯೂಜಿಲೆಂಡ್ ನಾಯಕ: ತವರಿನಲ್ಲಿ ಭಾರತಕ್ಕೆ ಒಲಿಯಲಿದೆಯಾ ಚಾಂಪಿಯನ್ ಪಟ್ಟ

March 8, 2026


ನಿಗಮ-ಮಂಡಳಿ ಪಟ್ಟಿ ಹೊರ ಬೀಳುತ್ತಿದ್ದಂತೆ ಶಾಸಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅವರಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್, ಚಿತ್ರದುರ್ಗ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ, ಮೂಡಿಗೆರೆ ಶಾಸಕ ಕುಮಾರಸ್ವಾಮಿ, ತೇರದಾಳ ಶಾಸಕ ಸಿದ್ದು ಸವದಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಕೆಲ ಶಾಸಕರಂತೂ ನಾವು ನಿಗಮ ಮಂಡಳಿಗಳೇ ಬೇಡ, ವಾಪಸ್ ಕೊಡುತ್ತೇವೆ ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ನಾಲ್ವರ ನೇಮಕ ವಾಪಸ್
ನಿಗಮ-ಮಂಡಳಿಗಳಿಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಹಿರಿಯ ಶಾಸಕ ಅಸಮಾಧಾನದ ಹಿನ್ನೆಲೆಯಲ್ಲಿ ನಾಲ್ವರ ನೇಮಕವನ್ನು ವಾಪಸ್ ಪಡೆದಿದ್ದಾರೆ.
ಚಿತ್ರದುರ್ಗ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ, ಪರಣ್ಣ ಮುನವಳ್ಳಿ, ಬಸವರಾಜ ಧಡೇಸೂರ್ ಹಾಗೂ ಲಾಲ್‍ಜಿ ಮೆಂಡನ್ ಅವರ ನೇಮಕ ಆದೇಶ ವಾಪಸ್ ಪಡೆಯಲಾಗಿದೆ.
ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿದ್ದಕ್ಕೆ ಜಿ.ಹೆಚ್ ತಿಪ್ಪಾರೆಡ್ಡಿ ಗರಂ ಆಗಿದ್ದಾರೆ. ನಾನು ಮಂತ್ರಿಯಾಗಬೇಕಾದವನು. 1998ರಲ್ಲೇ ಗೃಹಮಂಡಳಿಯ ಅಧ್ಯಕ್ಷನಾಗಿ ಕ್ಯಾಬಿನೆಟ್ ದರ್ಜೆ ಹುದ್ದೆ ಅಲಂಕರಿಸಿದ್ದೇನೆ. ಈಗ ಕೊಟ್ಟ ದೇವರಾಜ ಅರಸು ಅಭಿವೃದ್ಧಿ ನಿಗಮದಲ್ಲಿ ವರ್ಷಕ್ಕೆ ನಾಲ್ಕು ಬೋರ್‍ವೆಲ್ ಕೊರೆಸಬಹುದು ಅಷ್ಟೇ. ಅದರ ಬದಲು ನಾನು ಶಾಸಕನಾಗಿಯೇ ಆ ಕೆಲಸ ಮಾಡಿಸುತ್ತಿದ್ದೇನೆ. ಹೀಗಾಗಿ ಆ ಹುದ್ದೆ ಬೇಡ ಎಂದು ಖಡಕ್ಕಾಗಿಯೇ ತಿರಸ್ಕರಿಸಿದ್ದಾರೆ.
ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನಗೆ ಈ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರ ಸ್ಥಾನ ಬೇಕಿಲ್ಲ. ಈ ಬಗೆ ಸಿಎಂ ಬಿಎಸ್‍ವೈ ಅವರನ್ನು ಭೇಟಿ ಚರ್ಚಿಸುತ್ತೇನೆ ಎಂದಿದ್ದಾರೆ.

Tags: BJP MLAsBSYDissatisfaction
ShareTweetSendShare
Join us on:

Related Posts

ನವಭಾರತ ಯಾರ ಅಪ್ಪಣೆಗೂ ಕಾಯುವುದಿಲ್ಲ: ಅಮೆರಿಕದ ದರ್ಪಕ್ಕೆ ರೈಸಿನಾ ಡೈಲಾಗ್‌ನಲ್ಲಿ ಜೈಶಂಕರ್ ತಿರುಗೇಟು

ನವಭಾರತ ಯಾರ ಅಪ್ಪಣೆಗೂ ಕಾಯುವುದಿಲ್ಲ: ಅಮೆರಿಕದ ದರ್ಪಕ್ಕೆ ರೈಸಿನಾ ಡೈಲಾಗ್‌ನಲ್ಲಿ ಜೈಶಂಕರ್ ತಿರುಗೇಟು

by Shwetha
March 8, 2026
0

ನವದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ರೈಸಿನಾ ಡೈಲಾಗ್ ಜಾಗತಿಕ ರಾಜತಾಂತ್ರಿಕತೆಯ ಮಹತ್ವದ ಮತ್ತು ರೋಚಕ ಸಂಘರ್ಷಕ್ಕೆ ಸಾಕ್ಷಿಯಾಗಿದೆ. "ಚೀನಾದಂತೆ ಭಾರತವನ್ನು ಅಮೆರಿಕಕ್ಕೆ ಸವಾಲಾಗಲು ಬಿಡುವುದಿಲ್ಲ" ಎಂಬ ಅಮೆರಿಕದ ಉಪ...

ಟಿಟ್ವೆಂಟಿ ವಿಶ್ವಕಪ್ ಫೈನಲ್ ಮಹಾಸಮರ: ಪ್ರೇಕ್ಷಕರ ಸದ್ದಡಗಿಸುತ್ತೇವೆ ಎಂದ ನ್ಯೂಜಿಲೆಂಡ್ ನಾಯಕ: ತವರಿನಲ್ಲಿ ಭಾರತಕ್ಕೆ ಒಲಿಯಲಿದೆಯಾ ಚಾಂಪಿಯನ್ ಪಟ್ಟ

ಟಿಟ್ವೆಂಟಿ ವಿಶ್ವಕಪ್ ಫೈನಲ್ ಮಹಾಸಮರ: ಪ್ರೇಕ್ಷಕರ ಸದ್ದಡಗಿಸುತ್ತೇವೆ ಎಂದ ನ್ಯೂಜಿಲೆಂಡ್ ನಾಯಕ: ತವರಿನಲ್ಲಿ ಭಾರತಕ್ಕೆ ಒಲಿಯಲಿದೆಯಾ ಚಾಂಪಿಯನ್ ಪಟ್ಟ

by Shwetha
March 8, 2026
0

ಜಗತ್ತು ಒಂದು ಕಡೆ ಯುದ್ಧದ ಭೀತಿಯಲ್ಲಿದ್ದರೆ, ಅತ್ತ ಕ್ರಿಕೆಟ್ ಲೋಕದಲ್ಲಿ ಮತ್ತೊಂದು ಮಹಾಯುದ್ಧಕ್ಕೆ ವೇದಿಕೆ ಸಿದ್ಧವಾಗಿದೆ. ಹೌದು, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಹತ್ತನೇ...

ನೆರೆಯ ರಾಷ್ಟ್ರಗಳನ್ನು ಗುರಿಯಾಗಿಸಿ ದಾಳಿ ಮಾಡುವುದಿಲ್ಲ: ಇರಾನ್ ಮಹತ್ವದ ಘೋಷಣೆ

ನೆರೆಯ ರಾಷ್ಟ್ರಗಳನ್ನು ಗುರಿಯಾಗಿಸಿ ದಾಳಿ ಮಾಡುವುದಿಲ್ಲ: ಇರಾನ್ ಮಹತ್ವದ ಘೋಷಣೆ

by Shwetha
March 8, 2026
0

ನೆರೆಯ ರಾಷ್ಟ್ರಗಳಿಂದ ನೇರವಾಗಿ ದಾಳಿ ನಡೆಯದ ಹೊರತು, ಆ ದೇಶಗಳನ್ನು ಗುರಿಯಾಗಿಸಿ ಯಾವುದೇ ಸೈನಿಕ ಕ್ರಮ ಕೈಗೊಳ್ಳುವುದಿಲ್ಲ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಚಿಯಾನ್ ಮಹತ್ವದ ಘೋಷಣೆ...

ಅಮೆರಿಕದ ಅನುಮತಿ ನಮಗೆ ಬೇಕಿಲ್ಲ: ಭಾರತೀಯರು ಬೇರೆಯವರ ಸ್ಕ್ರಿಪ್ಟ್ ನಲ್ಲಿ ನಟಿಸುವ ನಟರಲ್ಲ, ತೈಲ ಬಿಕ್ಕಟ್ಟಿನ ನಡುವೆ ಅಮೆರಿಕದ ದರ್ಪಕ್ಕೆ ಕಾಂಗ್ರೆಸ್ ಕಠಿಣ ತಿರುಗೇಟು

ಅಮೆರಿಕದ ಅನುಮತಿ ನಮಗೆ ಬೇಕಿಲ್ಲ: ಭಾರತೀಯರು ಬೇರೆಯವರ ಸ್ಕ್ರಿಪ್ಟ್ ನಲ್ಲಿ ನಟಿಸುವ ನಟರಲ್ಲ, ತೈಲ ಬಿಕ್ಕಟ್ಟಿನ ನಡುವೆ ಅಮೆರಿಕದ ದರ್ಪಕ್ಕೆ ಕಾಂಗ್ರೆಸ್ ಕಠಿಣ ತಿರುಗೇಟು

by Shwetha
March 8, 2026
0

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ಅಲ್ಲೋಲ ಕಲ್ಲೋಲ ಹಾಗೂ ಪಶ್ಚಿಮ ಏಷ್ಯಾದ ಯುದ್ಧದ ಕಾರ್ಮೋಡಗಳ ನಡುವೆ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ ನೀಡಿರುವ ಒಂದು ಹೇಳಿಕೆ...

ಮೋದಿ ಮಾಡಿದ್ದು ಸಾಲ ಅಲ್ವಾ ಬಜೆಟ್ ಟೀಕಿಸಿದ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ನೇರ ಪ್ರಶ್ನೆ

ಮೋದಿ ಮಾಡಿದ್ದು ಸಾಲ ಅಲ್ವಾ ಬಜೆಟ್ ಟೀಕಿಸಿದ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ನೇರ ಪ್ರಶ್ನೆ

by Shwetha
March 8, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2026-27ನೇ ಸಾಲಿನ ರಾಜ್ಯ ಬಜೆಟ್ ಕುರಿತು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ವಾಕ್ಸಮರ ನಡೆಯುತ್ತಿದೆ. ಬಜೆಟ್ ಅನ್ನು ಅಭಿವೃದ್ಧಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram