ವೆಸ್ಟ್ ಇಂಡೀಸ್ ತಂಡವನ್ನು ಸೋಲಿನಿಂದ ವರುಣ ದೇವ ಬಚಾವ್ ಮಾಡ್ತಾನಾ ?
ಇಂಗ್ಲೆಂಡ್ ವಿರುದ್ಧದ ಸೋಲಿನಿಂದ ತಪ್ಪಿಸಿಕೊಳ್ಳಲು ವಿಂಡೀಸ್‍ಗೆ ವರುಣದೇವ ನೆರವಾಗುತ್ತಾನಾ ? ಓ ಮಳೆರಾಯ ನಮ್ಮನ್ನು ಸೋಲಿನಿಂದ ಬಚಾಚ್ ಮಾಡು ಅಂತ ವೆಸ್ಟ್ ಇಂಡೀಸ್ ಆಟಗಾರರು ದೇವ್ರ ಮೊರೆ ಹೋಗುತ್ತಿದ್ದಾರೆ.
ಹೌದು, ನಾಲ್ಕನೇ ದಿನ ವೆಸ್ಟ್ ಇಂಡೀಸ್ ಸೋಲಿನ ಭೀತಿಗೆ ಸಿಲುಕಿತ್ತು. ಮೂರನೇ ದಿನದ ಅಂತ್ಯಕ್ಕೆ ವೆಸ್ಟ್ ಇಂಡೀಸ್ ತನ್ನ ಎರಡನೇ ಇನಿಂಗ್ಸ್ ನಲ್ಲಿ 10 ರನ್‍ಗೆ ಎರಡು ವಿಕೆಟ್ ಕಳೆದುಕೊಂಡಿತ್ತು. ಇನ್ನೇನೂ ಇಂಗ್ಲೆಂಡ್ ಗೆದ್ದೇ ಬಿಡ್ತು ಅಂದುಕೊಂಡುವಷ್ಟರಲ್ಲಿ ನಾಲ್ಕನೇ ದಿನದ ಆಟ ಪೂರ್ತಿ ಮಳೆಗೆ ಆಹುತಿಯಾಯ್ತು. ಇದು ಇಂಗ್ಲೆಂಡ್ ಗೆಲುವಿಗೆ ಕಂಟಕವಾದ್ರೆ, ವೆಸ್ಟ್ ಇಂಡೀಸ್‍ಗೆ ಸೋಲಿನಿಂದ ತಪ್ಪಿಸಿಕೊಳ್ಳಲು ವರದಾನವಾಗಿತ್ತು.
ಆದ್ರೆ ಐದನೇ ಹಾಗೂ ಅಂತಿಮ ದಿನಕ್ಕೆ ವರುಣ ದೇವ ಕರುಣೆ ತೋರುತ್ತಾನಾ ಅನ್ನೋದನ್ನು ಕಾದು ನೋಡಬೇಕು. ಒಂದು ವೇಳೆ ಐದನೇ ದಿನ ಪಂದ್ಯ ನಡೆದ್ರೆ
ವೆಸ್ಟ್ ಇಂಡೀಸ್ ವರುಣನ ಕೃಪೆಯಿಂದ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಲೇಬೇಕು. ಇಲ್ಲದಿದ್ರೆ ಸೋಲು ಖಚಿತ.
ಮೊದಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ವೆಸ್ಟ್ ಇಂಡೀಸ್ ಎರಡನೇ ಮತ್ತು ಮೂರನೇ ಟೆಸ್ಟ್ ಪಂದ್ಯದಲ್ಲಿ ಕಳಪೆ ಆಟವನ್ನಾಡಿತ್ತು. ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗೆಲ್ಲಲು 399 ರನ್‍ಗಳ ಸವಾಲನ್ನು ಒಡ್ಡಿತ್ತು. ಆದ್ರೆ ಈಗ ವೆಸ್ಟ್ ಇಂಡೀಸ್ ಪಂದ್ಯವನ್ನು ಕನಿಷ್ಠ ಡ್ರಾ ಮಾಡಿಕೊಳ್ಳಲು ಅಡಬೇಕಿದೆ. ಈ ಮೂಲಕ ಸರಣಿಯನ್ನು ಸಮಗೊಳಿಸುವ ಅವಕಾಶವಿದೆ. ಇನ್ನೊಂದೆಡೆ ಇಂಗ್ಲೆಂಡ್ ತಂಡ ತನ್ನ ಗೆಲುವಿನ ಸರಣಿಯ ಓಟವನ್ನು ಮುಂದುವರಿಸಲು ಬೌಲರ್‍ಗಳ ಮೇಲೆ ಅವಲಂಬಿತವಾಗಿದೆ. ಈಗಾಗಲೇ ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್, ಕ್ರೀಸ್ ವೋಕ್ ಜೋಡಿ ವಿಂಡೀಸ್‍ಗೆ ಅಪಾಯದ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ವೆಸ್ಟ್ ಇಂಡೀಸ್ ಬ್ಯಾಟ್ಸ್ ಮೆನ್‍ಗಳು ಕ್ರಿಸ್‍ಗೆ ಅಂಟಿಕೊಂಡು ಆಡಬೇಕು.
ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ ನಲ್ಲಿ ಮೊದಲ ಇನಿಂಗ್ಸ್ ನಲ್ಲಿ 369 ರನ್ ಗಳಿಸಿದ್ರೆ, ಎರಡನೇ ಇನಿಂಗ್ಸ್ ನಲ್ಲಿ ಎರಡು ವಿಕೆಟ್ ಕಳೆದುಕೊಂಡು 226 ರನ್‍ಗೆ ಡಿಕ್ಲೇರ್ ಮಾಡಿಕೊಂಡು ವೆಸ್ಟ್ ಇಂಡೀಸ್‍ಗೆ ಗೆಲ್ಲಲು 399 ರನ್‍ಗಳ ಗುರಿಯನ್ನು ನೀಡಿತ್ತು. ಹಾಗೇ ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ ನಲ್ಲಿ 197 ರನ್‍ಗೆ ಆಲೌಟ್ ಆಗಿ ಇನಿಂಗ್ಸ್ ಹಿನ್ನಡೆ ಅನುಭವಿಸಿತ್ತು. ಸದ್ಯ ಎರಡನೇ ಇನಿಂಗ್ಸ್ ನಲ್ಲಿ 10 ರನ್‍ಗೆ ಎರಡು ವಿಕೆಟ್‍ಗಳನ್ನು ಕಳೆದುಕೊಂಡಿದೆ.








