ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು, ಮದ್ರಾಸ್ ಇಂಟರ್ ನ್ಯಾಷನಲ್ ಸಕ್ರ್ಯೂಟ್‍ನಲ್ಲಿ ಕೆಟಿಎಂ 390 ಡ್ಯೂಕ್ ಬೈಕ್ ಸವಾರಿ ಮಾಡುವ ಮೂಲಕ ಗಮನ ಸೆಳೆದ್ರು.
ಚೆನ್ನೈನ ಇರುಂಗಟ್ಟುಕೊಟ್ಟೈನಲ್ಲಿರುವ ಮದ್ರಾಸ್ ಇಂಟರ್ ನ್ಯಾಷನಲ್ ಸಕ್ರ್ಯೂಟ್‍ನಲ್ಲಿ ಟಿವಿಎಸ್ ಯೂರೋಗ್ರಿಪ್ ಆಯೋಜಿಸಿರುವ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ರೇಸಿಂಗ್ ಟ್ರ್ಯಾಕ್‍ನಲ್ಲಿ ಸೈ ಸ್ಪೀಡ್ ಲ್ಯಾಂಪ್‍ಗಳಲ್ಲಿ ಧೋನಿ ಎಂಜಾಯ್ ಮಾಡಿದ್ದರು. ಇದು ನೆರೆದಿದ್ದ ಅಭಿಮಾನಿಗಳನ್ನು ಅಚ್ಚರಿಗೊಳಿಸಿತ್ತು. ಧೋನಿ ಕ್ರಿಕೆಟ್ ಜೊತೆಗೆ ಫುಟ್‍ಬಾಲ್ ಹಾಗೂ ಬೈಕ್ ಸವಾರಿಯ ನಿರಂತರ ಪ್ರೀತಿಯನ್ನು ಮತ್ತೊಮ್ಮೆ ನೆನೆಪಿಸಿದ್ದರು. ಧೋನಿಗೆ ಮೊದಲಿನಿಂದಲೇ ಬೈಕ್ ಗಳ ಮೇಲೆ ಅಪಾರ ಒಲವು. ಬಿಡುವಿನ ವೇಳೆಯಲ್ಲಿ ಬೈಕ್ ಸವಾರಿ ಮಾಡೋದು ಅವರ ನೆಚ್ಚಿನ ಹವ್ಯಾಸವಾಗಿದೆ. ಈಗಾಗಲೇ ಅವರ ಮನೆಯಲ್ಲಿ ಬೈಕ್‍ಗಳ ಮ್ಯೂಸಿಯಂ ಕೂಡ ಇದೆ.








