ಕೋವಿಡ್-19 ವಿರುದ್ಧ ನಿಯಂತ್ರಣ ಸಾಧಿಸುವತ್ತ ಹೆಜ್ಜೆ ಇಟ್ಟ ದೆಹಲಿ, ಚೆನ್ನೈ ಮತ್ತು ಮುಂಬೈ
ಹೊಸದಿಲ್ಲಿ, ಜುಲೈ 28: ಕೊನೆಗೂ ದೆಹಲಿ, ಚೆನ್ನೈ ಮತ್ತು ಮುಂಬೈ ಕೋವಿಡ್-19 ವಿರುದ್ಧ ನಿಯಂತ್ರಣ ಸಾಧಿಸುವತ್ತ ಹೆಜ್ಜೆಯನ್ನಿಟ್ಟಿದೆ.
ಕಳೆದ ಸಂಜೆಯ ಹೊತ್ತಿಗೆ, ಮುಂಬೈ ನಲ್ಲಿ 22536 ಸಕ್ರಿಯ ಕೋವಿಡ್-19 ಪ್ರಕರಣಗಳು ವರದಿಯಾಗಿದೆ. ಒಂದು ತಿಂಗಳ ಹಿಂದೆ 10000 ಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, ಇದು ಕೊರೊನಾ ಪ್ರಕರಣಗಳು ನಿಧಾನವಾಗಿ ಇಳಿಮುಖವಾಗುತ್ತಿರುವುದನ್ನು ಸೂಚಿಸುತ್ತಿದೆ.
ದೆಹಲಿಯಲ್ಲಿ, ಕೇವಲ 11904 ಸಕ್ರಿಯ ಪ್ರಕರಣಗಳಿದ್ದು, ಒಂದು ತಿಂಗಳ ಹಿಂದೆ 16000 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ವರದಿಯಾಗಿದ್ದವು. ಇಲ್ಲಿ ವೇಗವಾಗಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದನ್ನು ಸೂಚಿಸಿದೆ.
ತಮಿಳುನಾಡಿನ ಚೆನ್ನೈನಲ್ಲಿ ಕೇವಲ 13747 ಸಕ್ರಿಯ ಪ್ರಕರಣಗಳಿವೆ. ಒಂದು ತಿಂಗಳ ಹಿಂದೆ, ಅದು ಸುಮಾರು 25000 ಆಗಿತ್ತು. ಅಲ್ಲಿ ಕೂಡ ಕ್ರಮೇಣವಾಗಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಇದು ಸೂಚಿಸುತ್ತಿದೆ.
ಸಾವಿನ ವಿಷಯದಲ್ಲಿ, ಮುಂಬೈನಲ್ಲಿ 6093 ಸಾವುಗಳು, ದೆಹಲಿಯಲ್ಲಿ 3827 ಸಾವುಗಳು ಮತ್ತು ಚೆನ್ನೈ 2008 ಸಾವುಗಳು ಸಂಭವಿಸಿದ್ದವು. ಒಟ್ಟಾರೆಯಾಗಿ, ದೆಹಲಿ ಕೊರೊನಾ ಸೋಂಕು ವಿರುದ್ಧ ಅತ್ಯುತ್ತಮ ನಿಯಂತ್ರಣ ಸಾಧಿಸುವುದರಲ್ಲಿ ಸಫಲವಾಗಿದೆ.
ಮುಂದಿನ 4-6 ವಾರಗಳಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಬಹುದು ಎಂದು ಅಂದಾಜಿಸಲಾಗಿದೆ.