ಗುಂಟೂರು : ಬರೋಬ್ಬರಿ ಅರ್ಧ ಕೋಟಿ ವರದಕ್ಷಿಣೆ ಪಡೆದ ವರ, ಫಸ್ಟ್ ನೈಟ್ ನಲ್ಲಿ ತನ್ನ ಬಾಯ್ ಫ್ರೆಂಡ್ ಕತೆ ಹೇಳಿದ ಘಟನೆ ಆಂಧ್ರದ ಗುಂಟೂರಿನಲ್ಲಿ ನಡೆದಿದೆ.
ಹೌದು, ಗುಂಟೂರು ನಿವಾಸಿಯಾದ ಯುವತಿಗೆ ಆರ್ ಟಿಸಿ ಕಾಲೋನಿಯ ಎನ್ ಆರ್ ಐ ಜೊತೆ 50 ಲಕ್ಷ, 55 ಗ್ರಾಂ ವರದಕ್ಷಿಣೆ ನೀಡಿ, 15 ಲಕ್ಷ ಖರ್ಚು ಮಾಡಿ ಮಾರ್ಚ್ 18ರಂದು ಭರ್ಜರಿ ಮದುವೆ ಮಾಡಿಕೊಡಲಾಗಿತ್ತು. ಆದರೆ ಮದುವೆಯಾದ ವರ ಮೊದಲನೇ ರಾತ್ರಿಯಲ್ಲೇ ತನಗೆ ಬಾಯ್ ಫ್ರೆಂಡ್ ಇರುವ ಸತ್ಯ ಹೇಳಿದ್ದಾನೆ.
ಫಸ್ಟ್ ನೈಟಲ್ಲಿ ವರ ನನಗೆ ಆರೋಗ್ಯ ಸರಿಯಿಲ್ಲ ಎಂದು ಪತ್ನಿಗೆ ಹೇಳಿ ದೂರ ಸರಿದಿದ್ದಾನೆ. ಬಳಿಕ ಪತ್ನಿ ಜೊತೆಯಲ್ಲಿರಲು ನಿರಾಕರಿಸಿದ್ದಾನೆ. ಇದರಿಂದ ಅನುಮಾನಗೊಂಡ ಪತ್ನಿ ಗಂಡ ಬಳಿ ಒತ್ತಾಯ ಮಾಡಿ ಕೇಳಿದಾಗ ತಾನೊಬ್ಬ ನಪುಂಸಕ ಅನ್ನೊ ವಿಚಾರವನ್ನು ಬಾಯಿ ಬಿಟ್ಟಿದ್ದಾನೆ.
“ನನಗೆ ಹೆಣ್ಣು ಅಂದ್ರೆ ಇಷ್ಟವಿಲ್ಲ. ಅಮೆರಿಕದಲ್ಲಿ ನನಗೊಬ್ಬ ಬಾಯ್ ಫ್ರೆಂಡ್ ಇದ್ದಾನೆ. ನಾನು ಆತನಿಗಾಗಿಯೇ ಮದುವೆ ಮಾಡಿಕೊಂಡಿದ್ದೇನೆ. ಅಮೆರಿಕಕ್ಕೆ ತೆರಳಿ ಆತನಿಗೆ ನಿನ್ನನ್ನು ಒಪ್ಪಿಸುವೆ. ನೀನು ಆತನೊಂದಿಗೆ ಸಂಸಾರ ಮಾಡು. ನಾನು ಸಹ ಆತನೊಂದಿಗೆ ಸುಖಪಡುತ್ತಿದ್ದೇನೆ. ಮೂವರು ಸೇರಿ ಎಂಜಾಯ್ ಮಾಡೋಣ” ಎಂದು ಫಸ್ಟ್ ನೈಟ್ ನಲ್ಲಿ ವರ ತನ್ನ ಹೆಂಡತಿ ಹೇಳಿದ್ದಾನೆ.
ಇದನ್ನು ಕೇಳಿ ದಿಗ್ಭ್ರಮೆಗೊಂಡ ಹೆಂಡತಿ ನಿನೊಬ್ಬ ನಪುಂಸಕ. ನನ್ನನ್ನೇಕೆ ಮೋಸ ಮಾಡಿದ್ದೀಯಾ ಎಂದು ಪ್ರಶ್ನಿಸಿದ್ದಾಳೆ. ಇದಕ್ಕೆ ಉತ್ತರಿಸಿದ ಆ ಮಹಾಪುರುಷ, ವರದಕ್ಷಿಣೆಗಾಗಿ ಮದುವೆ ಮಾಡಿಕೊಳ್ಳುವಂತೆ ಪೋಷಕರು ಒತ್ತಾಯಿಸಿದಕ್ಕೆ ನಾನು ಈ ವಿವಾಹವಾಗಿದ್ದೇನೆ ಎಂದಿದ್ದಾನೆ.
ಇನ್ನು ವಿಚಾರವನ್ನು ತನ್ನ ಗಂಡನ್ನ ಕುಟುಂಬಸ್ಥರಿಗೆ ತಿಳಿಸಿದಾಗ ‘ಅವನು ನಿನ್ನೊಂದಿಗೆ ಸಂಸಾರ ಮಾಡುವುದಿಲ್ಲ. ಬೇಕಾದ್ರೆ ನೀನೇ ಒಂದು ಬಾಯ್ ಫ್ರೆಂಡ್ ಸೆಲೆಕ್ಟ್ ಮಾಡ್ಕೋ’ ಎಂದಿದ್ದಾರೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾಳೆ.
ಸದ್ಯ ಸಂತ್ರಸ್ತೆ ಈ ವಿಚಾರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.








