ಮೈಸೂರು : ಇಂದು ನಗರದ ಜಿಲ್ಲಾ ಪತ್ರಕರ್ತರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಆಯೋಜನೆ ಮಾಡಿದ್ದ ವಿಶ್ವನಾಥ್ ಸಾಹಿತ್ಯಿಕ-ಸಾಂಸ್ಕೃತಿಕ’ ಸಂವಾದ ಕಾರ್ಯಕ್ರಮದಲ್ಲಿ ಎಂಎಲ್ ಸಿ ಹೆಚ್. ವಿಶ್ವನಾಥ್ ಅವರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ಮಾಜಿ ಸಿಎಂ ದೇವರಾಜ ಅರಸು, ನನ್ನನ್ನ ಆವರಿಸಿದ್ದಾರೆ. ಮೈಸೂರು ಸಂಸ್ಥಾನ ನಮಗೆ ಅನ್ನ, ಅರಿವು ಹಾಗೂ ಅಧಿಕಾರವನ್ನು ಕೊಟ್ಟಿದೆ. 1978ರಲ್ಲಿ ನಾನು ಶಾಸಕನಾದೆ ಇದಕ್ಕೆ ಕಾರಣ ನಮ್ಮ ನಾಯಕ ದಿ. ಡಿ.ದೇವರಾಜ ಅರಸು. ಅವರ ಗರಡಿಯಲ್ಲಿ ಬೆಳೆದ ಹುಡುಗ ನಾನು ಎಂದು ಹೇಳಿದರು.
ಇದೇ ವೇಳೆ ದಿ ಬಾಂಬೆ ಡೇಸ್ ಪುಸ್ತಕದ ಬಗ್ಗೆ ಮಾತನಾಡಿದ ಅವರು, ಸಾಹಿತಿಯ ಲೇಖನವನ್ನು ಯಾರು ತಡೆಯಲು ಆಗಲ್ಲ. ನಾವು ಮಾಡಿದ್ದು ಒಂದು ಮಾದರಿ ಆಯಿತು. ನಾವು ಆಡಳಿತ ಪಕ್ಷದಿಂದ ವಿರೋಧ ಪಕ್ಷದ ಕಡೆಗೆ ಹೋದವರು. ಇದೇ ರೀತಿ ವಿವಿಧ ಕಡೆ ನಡೆಯಿತು, ಇದನ್ನು ಜನರಿಗೆ ಅರ್ಥ ಆಗೋ ರೀತಿ ಬರೆಯಬೇಕು. ನಾವು ಅನುಭವಿಸಿದ್ದನ್ನು ನಾವು ಬರೆಯಲೇಬೇಕು ಎಂದರು.
ಇನ್ನು ಈ ಕಾರ್ಯಕ್ರಮದಲ್ಲಿ ಎಂಎಲ್ ಸಿ ವಿಶ್ವನಾಥ್, ಸಾಹಿತಿಗಳಾದ ಪ್ರೊ.ಸಿ.ಪಿ ಕೃಷ್ಣಕುಮಾರ್(ಸಿಪಿಕೆ), ಪ್ರೊ.ಶಿವರಾಜಪ್ಪ, ಪ್ರೊ. ಭೈರವಮೂರ್ತಿ, ಪ್ರೊ.ಲೋಲಾಕ್ಷಿ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.








