ಕರಾವಳಿ ಕಾವಲಿಗೆ ಸಿದ್ಧಗೊಂಡಿರುವ ‘ವರದ್’ ಎಂಬ ಗಸ್ತು ಹಡಗನ್ನು ಕೇಂದ್ರ ಹಡಗು ಇಲಾಖೆಯ ಸಹಾಯಕ ಸಚಿವ
ಶುಕ್ರವಾರ ಕೇಂದ್ರ ಹಡಗು ಇಲಾಖೆಯ ಸಹಾಯಕ ಸಚಿವ ಮನ್ಸುಕ್ ಎಲ್ ಮಾಂಡವಿಯ, ಭಾರತದ ಕರಾವಳಿ ಕಾವಲಿಗೆ ಸಿದ್ಧಗೊಂಡಿರುವ ‘ವರದ್ ‘ ಎಂಬ ಗಸ್ತು ಹಡಗನ್ನು ಲೋಕಾರ್ಪಣೆಗೊಳಿಸಿದರು.
ಎಲ್ ಆ್ಯಂಡ್ ಟಿ(ಲಾರ್ಸನ್ ಆ್ಯಂಡ್ ಟರ್ಬೊ) ಕಂಪೆನಿಯು ಚೆನೈಯ ಕಟ್ಟುಪಲ್ಲಿಯಲ್ಲಿರುವ ತನ್ನ ಹಡಗು ನಿರ್ಮಾಣ ಕಾರ್ಯಗಾರದಲ್ಲಿ ತಯಾರಿಸಿರುವ ಈ ದೈತ್ಯ ಗಸ್ತು ಹಡಗು ಸುಮಾರು 321 ಅಡಿ ಉದ್ದವಿದೆ.
28 ವರ್ಷಗಳಿಂದ ‘ವರಾದ್’ ಎಂಬ ಹೆಸರಿನಲ್ಲಿಯೇ ಕರಾವಳಿ ಕಾವಲು ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತೊಂದು ಹಳೆಯ ಗಸ್ತು ಹಡಗಿನ ಬದಲಿಗೆ ಹೊಸ ಗಸ್ತು ಹಡಗು ಸೇವೆ ಸಲ್ಲಿಸಲಿದೆ. ಅತ್ಯಾಧುನಿಕ ನೇವಿಗೇಶನ್ ತಂತ್ರಜ್ಞಾನ ಹೊಂದಿರುವ ಹೊಸ ಗಸ್ತು ಹಡಗಿನಲ್ಲಿ ಈಗಿನ ಅಗತ್ಯತೆಗಳಿಗೆ ತಕ್ಕಂತೆ ಸೌಲಭ್ಯಗಳಿದ್ದು, ಇದು 10ಸಾವಿರ ಕಿಮೀ ವರೆಗೆ ನಿಲುಗಡೆ ರಹಿತ ಪ್ರಯಾಣಿಸಲಿದೆ.
ಎಲ್ ಆ್ಯಂಡ್ ಟಿ ಕಂಪನಿಯು 7 ಗಸ್ತು ಹಡಗುಗಳನ್ನು ನಿರ್ಮಿಸಿ ಕೊಡುವ 1,432 ಕೋಟಿ ರೂ ಒಪ್ಪಂದಕ್ಕೆ 2015ರಲ್ಲಿ ಸಹಿ ಹಾಕಿತ್ತು. ಅದರಂತೆ ನಾಲ್ಕು ಹಡಗುಗಳನ್ನು ಈಗಾಗಲೇ ಹಸ್ತಾಂತರಿಸಲಾಗಿದ್ದು, ಹೊಸ ಗಸ್ತು ಹಡಗು ‘ವರದ್ ‘ ಐದನೆಯದಾಗಿದೆ
ಕ್ರಾಸಿಂಗ್ ಪಾತ್ಸ್ (CROSSING PATHS): ಮಾನವ-ಆನೆ ಸಂಘರ್ಷದ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಯುಕ್ತಾ ಹೊರನಾಡು ನಿರ್ದೇಶನ
'ವಿಶ್ವ ಆನೆಗಳ ದಿನ'ದಂದು ಅನಾವರಣಗೊಳ್ಳುತ್ತಿರುವ 'ಕ್ರಾಸಿಂಗ್ ಪಾತ್ಸ್' ಸಾಕ್ಷ್ಯಚಿತ್ರದ ಮೂಲಕ ನಟಿ ಸಂಯುಕ್ತಾ ಹೊರನಾಡು ಅವರು ಪ್ರಥಮ ಬಾರಿಗೆ ನಿರ್ದೇಶಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಈ ಸಾಕ್ಷ್ಯಚಿತ್ರವು ತೀವ್ರಗೊಳ್ಳುತ್ತಿರುವ...








